ಜಿಲ್ಲೆ

1.80 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹರತಾಳು ಹಾಲಪ್ಪ ಭೂಮಿ ಪೂಜೆ

ಕಾರ್ಗಲ್: ಭಾರಂಗಿ ಹೋಬಳಿಯ ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1.80 ಕೋಟಿ ರೂ. ಮೊತ್ತದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹರತಾಳು ಹಾಲಪ್ಪ ಗುರುವಾರ ಭೂಮಿ ಪೂಜೆ ನೆರವೇರಿಸಿದರು. 40 ಲಕ್ಷ ರೂ. ವೆಚ್ಚದಲ್ಲಿ ಇಡುವಾಣಿಯ ಹೊನಗೋಡು ಮಾರ್ಗದ ಕಾನುತೋಟಕ್ಕೆ ಹೋಗುವ ರಸ್ತೆ, 15 ಲಕ್ಷ ರೂ. ವೆಚ್ಚದಲ್ಲಿ ಘಮಟೇಘಟ್ಟ- ಬ್ರಾಹ್ಮಣಕೇರಿ ರಸ್ತೆ, 40 ಲಕ್ಷ ರೂ. ವೆಚ್ಚದಲ್ಲಿ ಹುಲ್ಲಿನಕೈಯಿಂದ ಪಡಗೇರಿ ರಸ್ತೆ ಅಭಿವೃದ್ಧಿ, ಕೆಳಗಿನ ಹೊನಗೋಡು- ಕಾನುತೋಟ ಸಂಪರ್ಕ ರಸ್ತೆಗೆ ಕರಕೋಡು ಹಳ್ಳಕ್ಕೆ 35 ಲಕ್ಷ ರೂ. ವೆಚ್ಚದಲ್ಲಿ ಕಿರುಸೇತುವೆ, 30 ಲಕ್ಷ ರೂ. ವೆಚ್ಚದಲ್ಲಿ ಎಸ್‌ಟಿ ಕಾಲನಿ ರಸ್ತೆ ಅಭಿವೃದ್ಧಿ ಹಾಗೂ 20 ಲಕ್ಷ ವೆಚ್ಚದಲ್ಲಿ ಕೆಪ್ಪಿಗೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.