ಜಿಲ್ಲೆ

ಜಿಲ್ಲೆಯಲ್ಲಿ ೧.೭೮ ಮಿ.ಮೀ. ಮಳೆ

ಆದರ್ಶ್. ಎಂ.ಕೆ.

ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧.೭೮ ಮಿ.ಮೀ. ಮಳೆಯಾಗಿದೆ.


ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩.೮೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೦.೨೦ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧.೩೦ ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೫.೬೦, ಸಂಪಾಜೆ ೭, ಭಾಗಮಂಡಲ ೨.೮೦, ವಿರಾಜಪೇಟೆ ಕಸಬಾ ೧.೨೦, ಸೋಮವಾರಪೇಟೆ ಕಸಬಾ ೧, ಶನಿವಾರಸಂತೆ ೦.೪೦, ಶಾಂತಳ್ಳಿ ೩.೪೦ ಮಿ.ಮೀ.ಮಳೆಯಾಗಿದೆ.


ಹಾರಂಗಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೫೮.೬೫ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೨೮೫೮.೪೧ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೨೮೦೦ ಕ್ಯೂಸೆಕ್ ಇದೆ.