ಜಿಲ್ಲೆ

1.50 ಲಕ್ಷ ರೂ.ಗಳ ಮೌಲ್ಯದ ಮದ್ಯ ಜಪ್ತಿ

ಬಾಗಲಕೋಟೆ: ಲೋಕಸಭಾ ಚುನಾವಣೆ-24ರ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯ ಮುಧೋಳ ವಲಯ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ದಾಳಿ ಮಾಡಿ ಒಟ್ಟು 1.50 ಲಕ್ಷ ರೂ.ಗಳ ಮೌಲ್ಯದ ಮದ್ಯವನ್ನು ಜಪ್ತ ಮಾಡಲಾಗಿದೆ.

ಮುಧೋಳ ವ್ಯಾಪ್ತಿಯ ಬೆಳಗಲಿ ಸರ್ಕಲ್‍ನಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಒಟ್ಟು 1.50 ಲಕ್ಷ ರೂ.ಗಳ ಮೌಲ್ಯದ ಡಿಕೆ ಮತ್ತು ಓರಿಜನಲ್ ಚಾಯ್ಸ್ ವಿಸ್ಕಿಯ 3 ರಟ್ಟಿನ ಪೆಟ್ಟಿಗೆಗಳಲ್ಲಿದ್ದ 1080 ಟೆಟ್ರಾ ಪ್ಯಾಕೆಟ್ ಎರಡು ಸೇರಿ 259.200 ಲೀಟರ್ ಮದ್ಯ ಮತ್ತು 15,600 ಪವರ್ ಕೂಲ್ ಬೀರ್ ಜಪ್ತ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತನಾದ ಲಕ್ಷ್ಮಣ ಬಸಪ್ಪ ಚನ್ನಾಳನ್ನು ಸ್ಥಳದಲ್ಲಿಯೇ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.