ಜಿಲ್ಲೆ

ದೇವನಹಳ್ಳಿ ಪಿಎಲ್‌ಡಿ ಬ್ಯಾಂಕ್‌ನಿಂದ 1.50 ಕೋಟಿ ರೂ. ಸಾಲ ವಿತರಣೆ ಗುರಿ

Bengaluru Rural

ದೇವನಹಳ್ಳಿ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2020-21ನೇ ಸಾಲಿಗೆ 1.50 ಕೋಟಿ ಸಾಲ ವಿತರಿಸುವ ಗುರಿ ಹೊಂದಿದೆ ಎಂದು ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು ಹೇಳಿದರು.

ದೇವನಹಳ್ಳಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಬುಧವಾರ ಆನ್‌ಲೈನ್ ಮೂಲಕ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಕರೊನಾ ಸೋಂಕು ಹಿನ್ನೆಲೆಯಲ್ಲಿ ಆನ್‌ಲೈನ್ ಸಭೆಗೆ ಸದಸ್ಯರು ಸಹಕರಿಸಿದ್ದು, ಇದು ಯಶಸ್ವಿಯಾಗಿದೆ ಎಂದರು.

ಈಗಾಗಲೇ 1.38 ಲಕ್ಷ ರೂ. ಹಾಗೂ ಬಿ ವರ್ಗದ ಷೇರುದಾರರ 28 ಸಾವಿರ ರೂ. ಮತ್ತು ಸಿ ವರ್ಗದ ಷೇರುದಾರರ 2 ಲಕ್ಷ ರೂ . ಬಂಡವಾಳ ಸೇರಿ ಒಟ್ಟು 1.40 ಲಕ್ಷ ರೂ. ಬಂಡವಾಳವಾಗಿದೆ. 2020-21 ನೇ ಸಾಲಿಗೆ 1.50 ಕೋಟಿ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದ್ದು, ಸಾಲದ ವಿತರಣೆ ಎಷ್ಟು ಮುಖ್ಯವೋ ಸಾಲ ವಸೂಲಾತಿಯೂ ಅಷ್ಟೇ ಮುಖ್ಯವಾಗಿರುತ್ತದೆ. ರೈತರು ಸಾಲ ಮರುಪಾವತಿಸಿದರೆ ಬ್ಯಾಂಕ್‌ಗೆ ಆರ್ಥಿಕ ಅಭಿವೃದ್ಧಿ ಸಾಧ್ಯಾವಾಗುತ್ತದೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಪುರಸಭಾ ಸದಸ್ಯ ಜಿ.ಎ.ರವೀಂದ್ರ, ಬಮುಲ್ ನಿದೇರ್ಶಕ ಬಿ.ಶ್ರೀನಿವಾಸ್, ಟಿ.ಎ.ಪಿ.ಸಿಎಂ.ಎಸ್ ಅಧ್ಯಕ್ಷ ಮಮಡಿಬೆಲೆ ರಾಜಣ್ಣ, ವಿಎಸ್.ಎಸ್.ಎನ್.ಮಾಜಿ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಜೆಡಿಎಸ್ ಕಾರ್ಯಆಧ್ಯಕ್ಷ ಆರ್.ಮುನೇಗೌಡ ಹಲವು ಪ್ರಶ್ನೆ ಹಾಗೂ ಸಲಹೆಗಳನ್ನು ನೀಡಿದರು.

ಉಪಾಧ್ಯಕ್ಷೆ ಆಶಾ ಜಿ.ಎ.ರವೀಂದ್ರ, ನಿರ್ದೇಶಕರಾದ ಸಿ.ಮುನಿರಾಜು, ಸಂಪಂಗಪ್ಪ, ಜಿ.ಕೆ.ಹನುಮಪ್ಪ, ಪಟಲಪ್ಪ, ಎಚ್.ಎಂ.ಮುನಿನಾರಯಣಪ್ಪ, ಎಂ.ಬಸವರಾಜು, ಎಸ್.ಟಿ. ಅನ್ನಪೂರ್ಣಮ್ಮ, ಆರ್.ಕೆ.ನಂಜೇಗೌಡ, ಜಿ.ಎಸ್.ಭಿಮರಾಜು ಮತ್ತಿತರರು ಇದ್ದರು.