ಚನ್ನಮ್ಮನ ಕಿತ್ತೂರು: ತಾಲೂಕಿನ ದೇವರ ಸೀಗೆಹಳ್ಳಿ ಗ್ರಾಮದಲ್ಲಿ ಮಲಪ್ರಭಾ ನದಿ ದಂಡಿ ಮೇಲೆ ಜಾಕ್ವೆಲ್ ಸ್ಥಾಪನೆಗೆ ಮಂಗಳವಾರ ಶಾಸಕ ಬಾಬಾಸಾಹೇಬ ಪಾಟೀಲ ಭೂಮಿಪೂಜೆ ನೆರವೇರಿಸಿದರು.
ಬಾಬಾಸಾಹೇಬ ಪಾಟೀಲ ಮಾತನಾಡಿ, ಗ್ರಾಮದಲ್ಲಿನ ಹಳೆಯ ಜಾಕ್ವೆಲ್ ಶಿಥಿಲಗೊಂಡು ರಿಪೇರಿ ಹಂತಕ್ಕೆ ಬಂದಿತ್ತು. ಆದ್ದರಿಂದ 1.5 ಕೋಟಿ ರೂ. ವೆಚ್ಚದಲ್ಲಿ ಜಾಕ್ವೆಲ್ ಸ್ಥಾಪಿಸಲಾಗುವುದು ಎಂದು ಹೇಳಿದರು. ಇದಕ್ಕೂ ಮುನ್ನ ಗ್ರಾಪಂಗೆ ತೆರಳಿದ ಶಾಸಕರು ಗ್ರಾಮ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾಪಂ ಸದಸ್ಯರು ಅವರ ವಾರ್ಡ್ಗಳಲ್ಲಿನ ಕಾಲುವೆ ಹಾಗೂ ರಸ್ತೆಗಳ ಅಭಿವದ್ಧಿಗೆ ಒತ್ತುಕೊಡಬೇಕು. ಗ್ರಾಪಂ ಸದಸ್ಯರ ನಿರೀೆಗಳನ್ನು ಹುಸಿಗೊಳಿಸಬಾರದು. ಜಾಬ್ ಕಾರ್ಡ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕು ಎಂದು ಗ್ರಾಪಂ ಸದಸ್ಯರಿಗೆ ಕರೆ ನೀಡಿದರು. ತಾಪಂ ಅಧಿಕಾರಿ ಕಿರಣ್ ಘೋರ್ಪಡೆ, ಕಾಂಗ್ರೆಸ್ ಬ್ಲಾಕ್ ಅಧ್ಯ ಸಂಗನಗೌಡ ಪಾಟೀಲ, ಮುದಕಪ್ಪ ಮರಡಿ, ಚನ್ನೇಗೌಡ ಪಾಟೀಲ, ಮಡಿವಾಳಯ್ಯ ಹಿರೇಮಠ ಇತರರಿದ್ದರು.