ಜಿಲ್ಲೆ

1.480 ಕಿ.ಗ್ರಾಂ ಗಾಂಜಾ ಅಕ್ರಮ ಸಾಗಾಟ * ನೇಪಾಳ ಪ್ರಜೆ ಸಹಿತ ಇಬ್ಬರ ಬಂಧನ * ಡಿಸಿಐಬಿ ಪೊಲೀಸರ ಕಾರ್ಯಾಚರಣೆ

ಕಾರ್ಯಾಚರಣೆಯಲ್ಲಿ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್ ಎಂ, ತಾರಾನಾಥ್, ಪ್ರವೀಣ್ ರೈ, ಶೋನ್‌ಶಾ, ಸುರೇಶ್ ಭಾಗವಹಿಸಿದ್ದರು. ತಾಂತ್ರಿಕ ವಿಭಾಗದ ಸಂಪತ್ ಮತ್ತು ದಿವಾಕರ್ ಸಹಕರಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಇನ್‌ಸ್ಪೆಕ್ಟರ್ ಚೆಲುವರಾಜು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ವಶಪಡಿಸಿಕೊಂಡ ಸೊತ್ತು ಹಾಗು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

ಬಂದರು ಅನ್ಸಾರಿ ಅಡ್ಡ ರಸ್ತೆ ಹಜಾರ್ ಹೌಸ್‌ನ ಟಿ.ಪಿ ಫಾರೂಕ್(50), ಮೂಲತಃ ನೇಪಾಳದವನಾಗಿದ್ದು, ಪಿವಿಎಸ್ ಬಳಿಯ ಪಿಜಿಯಲ್ಲಿ ವಾಸವಾಗಿದ್ದ ಸಾಗರ್ ಸಿಂಗ್(22) ಬಂಧಿತರು. ಮಾರುತಿ ಬ್ರೀಝಾ ಕಾರು ಸಹಿತ ಒಟ್ಟು 10,32,900 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು: ಬಿ.ಸಿ.ರೋಡ್-ಮಾಣಿ ನಡುವೆ ಜಿಲ್ಲಾ ಅಪರಾಧ ಪತ್ತೆದಳ (ಡಿಸಿಐಬಿ) ಕಾರ್ಯಾಚರಣೆ ನಡೆಸಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.480 ಕಿ.ಗ್ರಾಂ. ಗಾಂಜಾ ಸಹಿತ ಇಬ್ಬರನ್ನು ಮೆಲ್ಕಾರ್‌ನಲ್ಲಿ ಬಂಧಿಸಿದ್ದಾರೆ.