ಕಲಬುರಗಿ: ನಂದೂರ ಕೆ ತಾಂಡಾದ ಮನೆಯಲ್ಲಿ ಮನೆಯವರು ಮಲಗಿಕೊಂಡಿರುವಾಗಲೇ ಇನ್ನೊಂದು ಕೋಣೆ ಮುರಿದು, 1.29 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಡೆದಿದೆ. ಸವಿತಾ ರಾಠೋಡ್ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಸೆ.6ರಂದು ಸಂಜೆ ಮನೆಯ ಒಂದು ಕೋಣೆಯಲ್ಲಿ ಎಲ್ಲರೂ ಕೂಡಿ ಮಲಗಿಕೊಂಡಿದ್ದು, ಮತ್ತೊಂದು ಕೋಣೆಯ ಕೀಲಿ ಮುರಿದು, ಅಲಮಾರಾದಲ್ಲಿದ್ದ ಬಂಗಾರದ ಜುಮಕಿ, ಕಿವಿಯೋಲೆ, ಬೆಳ್ಳಿ ಖಡಗಾ, ಬೆಳ್ಳಿ ಚೈನ್, ಬೆಳ್ಳಿ ಕಾಲು ಚೈನ್, ಬೆಳ್ಳಿ ಕಾಲಗಡಗ, 29 ಸಾವಿರ ರೂ. ನಗದು ಸೇರಿ 1.29 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.