ಜಿಲ್ಲೆ

1.22 ಕೋಟಿ ರೂ.ನಷ್ಟ

ಯಾದಗಿರಿ: ಕಳೆದ ಹಲವು ದಶಕದಿಂದ ತಾಲೂಕಿನ ಜನರ ಕಲ್ಯಾಣಕ್ಕಾಗಿ ಬ್ಯಾಂಕ್ ಶ್ರಮಿಸಿದ್ದು, ಸರ್ವ ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿಯತ್ತ ಸಾಗಲು ಪ್ರಯತ್ನಿಸಲಾಗುವುದು ಎಂದು ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಬಸವರಾಜ ಹಿರೇಮಠ ತಿಳಿಸಿದರು.

ಶಹಾಪುರದ ಚರಬಸವೇಶ್ವರ ಕಲ್ಯಾಣ ಮಂಟದಲ್ಲಿ ಆಯೋಜಿಸಿದ್ದ ಬ್ಯಾಂಕ್ನ 27ನೇ ವಾಷರ್ಿಕ ಮಹಾಸಭೆಯಲ್ಲಿ ಮಾತನಾಡಿ ಕೋವಿಡ್ ಕಾರಣದಿಂದ ಬ್ಯಾಂಕ್ 1.22 ಕೋಟಿ ರೂ.ನಷ್ಟ ಅನುಭವಿಸಿದೆ. ಮುಂದಿನ ದಿನಗಳಲ್ಲಿ ಸುಸ್ತಿ ಸಾಲವನ್ನು ಮರುಪಾವತಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಹಕಾರ ಬ್ಯಾಂಕ್ಗಳು ಸದಸ್ಯರ ಹಾಗೂ ಜನಸಾಮಾಣ್ಯ ಸಹಕಾರದಿಂದ ನಡೆಯುತ್ತವೆ. ಸಾರ್ವಜನಿಕರ ರರಂಗದಲ್ಲಿ ಸಹಕಾರಿಗಳ ಪಾತ್ರ ಸಾಕಷ್ಟಿದೆ. ಕೋವಿಡ್ ವೇಳೆ ಸಾಲವನ್ನು ಒತ್ತಾಯಪೂರ್ವಕವಾಗಿ ವಸೂಲಾತಿ ಮಾಡುವಂತಿಲ್ಲ ಎಂಬ ಆರ್ಬಿಐ ಬ್ಯಾಂಕ್ ನಿದರ್ೇಶನ ನೀಡಲಾಗಿತ್ತು. ಹೀಗಾಗಿ ಬ್ಯಾಂಕ್ ನಷ್ಟ ಅನುಭವಿಸಿದೆ ಎಂದು ವಿವರಿಸಿದರು.

ಉಪಾಧ್ಯಕ್ಷರಾದ ಚನ್ನಪ್ಪಗೌಡ ಪಾಟೀಲ್, ನಿದರ್ೇಶಕರಾದ ಮಾಂಗೀಲಾಲ್ ಜೈನ್, ವಿಮಲಾ, ಕಲಬುರಗಿ, ಬಸವರಾಜ ಪಾಟೀಲ್ ಹೇರುಂಡಿ, ಬಸವರಾಜ ಆನೆಗುಂದಿ, ಶರಣಗೌಡ ಕಟ್ಟಿಮನಿ, ಮಲ್ಲಿಕಾಜರ್ುನ ಮುಡಬೂಳ, ಗೂಳಪ್ಪ ಬಾಳಿ, ಮಲ್ಲಿಕಾಜರ್ುನ ಬುಕಿಷ್ಠಗಾರ ಇದ್ದರು.

ಸಭೆಯಲ್ಲಿ ಬ್ಯಾಂಕ್ನ ಅಢಾವೆ ಪತ್ರಿಕೆ ಓದುವ ವೇಳೆ ಷೇರುದಾರ ಚನ್ನಬಸ್ಸು ವನದುರ್ಗ, ನಿವ್ವಳ ಅನುತ್ಪಾದಕ ಆಸ್ತಿ ಪ್ರತಿಶತ ಶೇ.70.66 ಇದ್ದರೆ ಬ್ಯಾಂಕ್ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ? ಎಂದು ಬಸವರಾಜ ಹಿರೇಮಠ ಅವರನ್ನು ಪ್ರಶ್ನಿಸಿದರು. ಅಲ್ಲದೆ ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿದ್ದು, ಇದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಇದರಿಂದ ಆಡಳಿತ ಮಂಡಳಿ ನಿದರ್ೇಶಕರು ಮತ್ತು ಷೇರುದಾರರ ನಡುವೆ ವಾಗ್ವಾದ ನಡೆಯಿತು. ಷೇರುದಾರರಾದ ಬಸವರಾಜಗೌಡ ವಿಬೂ