ಜಿಲ್ಲೆ

ದಾಖಲೆಯಿಲ್ಲದ 1.10 ಲಕ್ಷ ರೂ. ಜಪ್ತಿ

ಹುಬ್ಬಳ್ಳಿ: ಯಾವುದೇ ದಾಖಲೆಗಳು ಇಲ್ಲದೆ ಕಾರ್‌ನಲ್ಲಿ ಸಾಗಿಸುತ್ತಿದ್ದ ಹಣವನ್ನು ಇಲ್ಲಿಯ ರಾಮನಕೊಪ್ಪ (ತಡಸ) ಚೆಕ್‌ಪೋಸ್ಟ್ ಬಳಿ ವಶಕ್ಕೆಪಡೆಯಲಾಗಿದೆ.
ಸಂತೋಷ ಹೂವಪ್ಪ ಎನ್ನುವವರು ಹಂಸಭಾವಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಇನ್ನೋವಾ ಹೈಕ್ರಾಸ್ ವಾಹನದಲ್ಲಿ ಹೊರಟಿದ್ದರು. ತಪಾಸಣೆ ಮಾಡಿದಾಗ 1.10 ಲಕ್ಷ ರೂ. ಪತ್ತೆಯಾಗಿದೆ. ಜಪ್ತಿಯಾದ ಹಣವನ್ನು ಉಪ ಖಜಾನೆ ಅಧಿಕಾರಿಗಳು ಕುಂದಗೋಳದ ಭದ್ರತಾ ಕೊಠಡಿಯಲ್ಲಿ ಇರಿಸಿದ್ದಾರೆ.