ವಿಜಯಪುರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ ಶಿವಾಜಿ ಮಹಾರಾಜ ಕೋ&ಆಪ್​ ಕ್ರೆಡಿಟ್​ ಸೊಸೈಟಿ ವಾರ್ಷಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಬಿ.ಟಿ. ತರಸೆ, ಅಂಬುತಾಯಿ ಜಾಧವ, ಸಂಜಯ ಜಾಧವ ಮತ್ತಿತರರಿದ್ದಾರೆ. 
ಜಿಲ್ಲೆ

ಶಿವಾಜಿ ಮಹಾರಾಜ ಬ್ಯಾಂಕ್​ಗೆ 1.03 ಕೋಟಿ ರೂ. ನಿವ್ವಳ ಲಾಭ

ವಿಜಯಪುರ:ನಗರದಲ್ಲಿ 1997 ರಲ್ಲಿ ಆರಂಭಗೊಂಡ ಶಿವಾಜಿ ಮಹಾರಾಜ ಬ್ಯಾಂಕ್​ ಕಡಿಮೆ ಅವಧಿಯಲ್ಲಿಯೇ ಅತ್ಯಂತ ಜನಪ್ರಿಯತೆ ಪಡೆದಿದೆ. ಸಂವು 2024 ಮಾರ್ಚ್​ ಅಂತ್ಯಕ್ಕೆ 1.03 ಕೋಟಿ ರೂ. ನಿವ್ವಳ ಲಾಭ ಪಡೆದಿದ್ದು, ಸದಸ್ಯರಿಗೆ ಪ್ರತಿಶತ 12 ರಷ್ಟು ಲಾಭಾಂಶ ನೀಡಲಾಗುವುದು ಎಂದು ಸಂದ ಅಧ್ಯಕ್ಷ ಡಾ. ಸದಾಶಿವ ಪವಾರ ಹೇಳಿದರು.

ನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಶ್ರೀ ಶಿವಾಜಿ ಮಹಾರಾಜ ಕೋ&ಆಪ್​ ಕ್ರೆಡಿಟ್​ ಸೊಸೈಟಿಯ 2023&24 ನೇ ಸಾಲಿನ 28 ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿ, ನಮ್ಮ ಸಂಸ್ಥೆಯು ಸದ್ಯ 5123 ಜನ ಸದಸ್ಯರನ್ನು ಹೊಂದಿದೆ. 2023&24 ಮಾರ್ಚ್​ ಅಂತ್ಯಕ್ಕೆ 3.03 ಕೋಟಿ ರೂ. ಷೇರು ಬಂಡವಾಳ, 3.49 ಕೋಟಿ ರೂ. ಕಾಯ್ದಿಟ್ಟ ನಿಧಿ ಹಾಗೂ ಒಟ್ಟು 63.99 ಕೋಟಿ ರೂ. ಠೇವು ಹೊಂದಿದೆ. ಬ್ಯಾಂಕ್​ ಪ್ರಗತಿಪಥದತ್ತ ಸಾಗಲು ಸದಸ್ಯರ ವಿಶ್ವಾಸವೇ ಕಾರಣ ಎಂದರು.

ಸಂವು 28 ವರ್ಷಗಳ ಸಾರ್ಥಕ ಸೇವೆ ನೀಡುವುದರ ಜತೆಗೆ ಬೆಳ್ಳಿ ಮಹೋತ್ಸವ ಆಚರಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಪಥದಲ್ಲಿ ಮುನ್ನುಗ್ಗುತ್ತಿದೆ. ಕೇವಲ 10 ವರ್ಷಗಳಲ್ಲಿ ತನ್ನ ಸ್ವಂತ ಸುಸಜ್ಜಿತ ಕಟ್ಟಡ ನಿರ್ಮಿಸಿ ಜಿಲ್ಲೆಯ ಹಲವು ಹಳೆಯ ಸಹಕಾರ ಸಂಗಳಿಗೆ ಸಮನಾಗಿ ಬೆಳೆದು ನಿಂತಿದೆ. ರಾಜ್ಯ ಸರ್ಕಾರದಿಂದ ಉತ್ತಮ ಸಹಕಾರಿ ಸಂವೆಂದು ಪ್ರಶಸ್ತಿ ಕೂಡ ಪಡೆದಿದೆ ಎಂದರು.

ನಿರ್ದೇಶಕ ಸಂಜಯ ಜಂಬೂರೆ ವಾರ್ಷಿಕ ವರದಿ ವಾಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂದ ಸದಸ್ಯರಿಗೆ ಸನ್ಮಾನ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಸಂದ ಉಪಾಧ್ಯಕ್ಷ ಶಂಕರ ಕನಸೆ, ಆಡಳಿತ ಮಂಡಳಿ ಸದಸ್ಯರಾದ ಬಿ.ಟಿ. ತರಸೆ, ಮಹಾದೇವ ಪವಾರ, ರವಿ ಮದಭಾವಿ, ಭಾರತ ದೇವಕುಳೆ, ಪ್ರವಿಣ ಕಣಬೂರ, ಸರೋಜನಿ ನಿಕ್ಕಮ, ಅಂಬುತಾಯಿ ಜಾಧವ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ವ್ಯವಸ್ಥಾಪಕರಾದ ಚಂದ್ರಕಾಂತ ಜಾಧವ, ಅಂಬಾದಾಸ ಚವಾಣ, ಸಿಬ್ಬಂದಿ, ಸದಸ್ಯರು ಮತ್ತಿತರರಿದ್ದರು.

ವಿಠಲ ಚವಾಣ ನಿರೂಪಿಸಿದರು. ಹಿರಿಯ ನಿರ್ದೇಶಕ ಬಿ.ಟಿ. ತರಸೆ ವಂದಿಸಿದರು.