ಜಿಲ್ಲೆ

ಅಮ್ಟಾಡಿ ಕೃಷಿ ಪತ್ತಿನ ಸಹಕಾರಿಗೆ 1.02 ಕೋಟಿ ರೂ.ಲಾಭ : ಸಿಇಒ ಅಜಯ್ ಕುಮಾರ್ ಅಜಿಲ ಮಾಹಿತಿ ಶೇ.9 ಡಿವಿಡೆಂಡ್

ಬಂಟ್ವಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ನೂತನ ನಿವೇಶನದಲ್ಲಿ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ವರದಿ ಮಂಡಿಸಿ, ಸಂಘ ವರದಿ ಸಾಲಿನಲ್ಲಿ 223.26 ಕೋಟಿ ರೂ. ವ್ಯವಹಾರ ನಡೆಸಿ 1.02 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಶೇ.9 ಡಿವಿಡೆಂಡ್ ನೀಡಲಾಗುವುದು. 40.30 ಕೋಟಿ ರೂ. ಠೇವಣಿ ಹೊಂದಿದ್ದು, 36.65 ಕೋಟಿ ರೂ. ಸಾಲ ವಿತರಿಸಿದೆ. 1.65 ಕೋಟಿ ರೂ. ಕ್ಷೇಮನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ ಎಂದರು.

ಹಿರಿಯ ಸದಸ್ಯರಾದ ರಾಮಣ್ಣ ಪೂಜಾರಿ ಕಂಗಿತ್ಲು, ನವೀನ್‌ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಅಲ್ಬಟ್ ಡಿಸೋಜ ಗುತ್ತಾರ್, ರಾಘವನ್ ನಾಯರ್ ರಾಮಲ್‌ಕಟ್ಟೆ , ಭಾರತಿ ಚೌಟ ಅಮ್ಟಾಡಿ ಸಭೆಯನ್ನು ಉದ್ಘಾಟಿಸಿದರು.

ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆ ಬಂಟ್ವಾಳ ಆಶ್ರಯದಲ್ಲಿ ಬೆಳೆ ಸಮೀಕ್ಷೆ, ಬೆಳೆ ವಿಮೆ ಹಾಗೂ ಇಲಾಖಾ ಸೌಲಭ್ಯಗಳ ಕುರಿತು ಬಂಟ್ವಾಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಮಾಹಿತಿ ನೀಡಿದರು. ನಿರ್ದೇಶಕರಾದ ಪದ್ಮನಾಭ ರಾವ್, ನರಸಿಂಹ ಹೊಳ್ಳ, ತೋಮಸ್ ಸಲ್ಡಾನ, ಅನೀಲ್ ಪಿಂಟೊ, ಪೂರ್ಣಿಮಾ ಕೆಂಪುಗುಡ್ಡೆ, ಫ್ಲೋಸಿ ಡಿಸೋಜ, ಪೂರ್ಣಿಮಾ ಬೆದ್ರಗುಡ್ಡೆ, ರಮೇಶ್, ಕಮಾಲಾಕ್ಷ, ಶಿವಪ್ರಸಾದ್ ಕನಪಾಡಿ ಉಪಸ್ಥಿತರಿದ್ದರು.

ನಲ್ಕೆಮಾರ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಿಬ್ಬಂದಿ ರೇಣುಕಾ ರೈ, ಅಲ್ವಿನ್ ವೇಗಸ್, ದುರ್ಗಾಪ್ರಸಾದ್, ರಮ್ಯಾ ಸನ್ಮಾನಪತ್ರ ವಾಚಿಸಿದರು. ಉಪಾಧ್ಯಕ್ಷ ಅಲ್ವಿನ್ ವಿನಯ ಲೋಬೋ ಸ್ವಾಗತಿಸಿದರು. ನಿರ್ದೇಶಕ ಬಿ.ಸುರೇಶ್ ಭಂಡಾರಿ ಅರ್ಭಿ ವಂದಿಸಿದರು. ಲೊರೆಟ್ಟೋ ಶಾಖಾ ವ್ಯವಸ್ಥಾಪಕ ದಿನೇಶ್ ಅಮೀನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಗೌರವಾರ್ಪಣೆ

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಫ್ರಾನ್ಸಿಸ್ ಡೇಸ, ರೋಶನ್ ಆಲೆಕ್ಸಾಂಡರ್ ಲೋಬೊ, ರೀಚಾ ಶೀಫಾಲಿ ಡಿಸೋಜ, ರಶ್ಮಿತಾ ಭಂಡಾರಿ, ಕೃಷಿ ಕ್ಷೇತ್ರದ ಅರ್ವಿನ್ ಡಿಸೋಜ, ಕಲಾಕ್ಷೇತ್ರದ ಮನೋಜ್ ಕನಪಾಡಿ, ಕ್ರೀಡಾಕ್ಷೇತ್ರದ ಶರಣ್ಯ ಎನ್.ಟಿ ಅವರನ್ನು ಸನ್ಮಾನಿಸಲಾಯಿತು. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.