ಜಿಲ್ಲೆ

03 ರಂದು ಶ್ರೀಕೃಷ್ಣ ಜಯಂತಿ

Yadgiri - Laxmikanth Kulkarni

ಯಾದಗಿರಿ: ಗೊಲ್ಲ, ಯಾದವ ಸಮಾಜದಿಂದ ಶ್ರೀಕೃಷ್ಣ ಜಯಂತ್ಯುತ್ಸವ ಸಮಾರಂಭ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಸಮಾಜದ ಜಿಲ್ಲಾದ್ಯಕ್ಷ ತಾಯಪ್ಪ ಯಾದವ್ ತಿಳಿಸಿದರು.

ಅ.3 ರಂದು ನಗರದ ರಾಯಲ್ ಗ್ರೀನ್ ಗಾರ್ಡನ್ ಹಾಲ್ನಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಲಿದ್ದಾರೆ. ಸಾನಿಧ್ಯವನ್ನು ಶ್ರೀ ಯಾದವಾನಂದ ಸ್ವಾಮಿಗಳು ವಹಿಸಲಿದ್ದಾರೆ. ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ರಾಜಾ ವೆಂಕಟಪ್ಪ ನಾಯಕ, ಸಮಾಜದ ಅದ್ಯಕ್ಷ ಡಿಟಿ ಶ್ರೀನಿವಾಸ, ರಾಜ್ಯ ಉಪಾದ್ಯಕ್ಷ ವಿಠ್ಠಲ್ ಯಾದವ್ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇದಕ್ಕೂ ಮೊದಲು ನಗರದ ಶಾಸ್ತ್ರೀ ವೃತ್ತದಿಂದ ಕಾರ್ಯಕ್ರಮದ ವೇದಿಕೆ ವರೆಗೆ ಶ್ರೀಕೃಷ್ಣನ ಬೃಹತ್ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪುರಸ್ಕಾರ ನೀಡಿ ಸತ್ಕರಿಸಲಾಗುವುದು. ಇದೇ ವೇಳೆ ನಮ್ಮ ಸಮಾಜದ ಕೆಲ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಸಚಿವ, ಶಾಸಕರಿಗೆ ಸಲ್ಲಿಸಲಾಗುವುದು ಎಂದರು.