ಜಮಖಂಡಿ: ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಿಂದ 0.3 ಟಿಎಂಸಿ ನೀರನ್ನು ಸೋಮವಾರ ಚಿಕ್ಕಪಡಸಲಗಿ ಶ್ರಮಬಿಂದು ಸಾಗರದ ವ್ಯಾಪ್ತಿಯ ನದಿಗೆ ಹರಿಸಲಾಗಿದೆ.
ಬರಿದಾಗಿದ್ದ ಕೃಷ್ಣಾ ನದಿಗೆ ಹಿಪ್ಪರಗಿ ಬ್ಯಾರೇಜ್‌ನಿಂದ ನೀರು ಹರಿಸಿದ್ದು, ನದಿ ತೀರದ ರೈತರಲ್ಲಿ ಹರ್ಷ ಮೂಡಿಸಿದೆ. ಖಾಲಿಯಾದ ನದಿಗೆ ನೀರು ಹರಿಸುವಂತೆ ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಕಳೆದ ಬಾರಿ 0.20 ಟಿಎಂಸಿಯಷ್ಟು ಹರಿಸಿದ್ದ ನೀರು ಶ್ರಮಬಿಂದು ಸಾಗರವರೆಗೆ ನೀರು ಹೋಗಿ ಮುಟ್ಟಿರಲಿಲ್ಲ. ಇದರಿಂದಾಗಿ ಬ್ಯಾರೇಜ್ ವ್ಯಾಪ್ತಿಯ ಸುಮಾರು 32ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿತ್ತು.