ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋಹಣಗೈದರು. 
ಜಿಲ್ಲೆ

ನಮ್ಮಲ್ಲಿರಲಿ ಕನ್ನಡಿಗರೆಂಬ ಭಾವನೆ : ಶಾಸಕ ಹರೀಶ್ ಪೂಂಜ ಸಲಹೆ

ಸೌಮ್ಯ ಆರ್
ಬೆಳ್ತಂಗಡಿ:

ಕನ್ನಡದಷ್ಟು ಚೆಂದದ ಭಾಷೆ ಬೇರೊಂದಿಲ್ಲ. ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಇಂದು ಕನ್ನಡ ಭಾಷೆ ಕೇವಲ ಸಂವಹನಕ್ಕೆ ಸೀಮಿತವಾಗಿದೆ. ಸಂಸ್ಕೃತಿ ವಾಹಕವಾಗಿ ಉಳಿದಿಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೇ ಸಂಕಲ್ಪಿಸಬೇಕು. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಂತೆ ಪ್ರಾಥಮಿಕ ಶಾಲೆಗಳಲ್ಲಿ ಮಾತೃ ಭಾಷೆಯಲ್ಲೇ ಶಿಕ್ಷಣ ಜಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣವನ್ನು ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಚಿಂತನೆ ನಡೆದಿದೆ.

— ಪ್ರತಾಪ್‌ಸಿಂಹ ನಾಯಕ್ ವಿಧಾನಪರಿಷತ್ ಸದಸ್ಯ