ವಾಣಿಜ್ಯ

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಮನವಿ

ಶಿರಹಟ್ಟಿ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ, ಶೀಘ್ರವೇ ಖರೀದಿ ಕೇಂದ್ರ ತೆರೆಯಬೇಕು ಎಂದು ತಾಲೂಕಿನ ತಾರೀಕೊಪ್ಪ, ಹೆಬ್ಬಾಳ, ಬನ್ನಿಕೊಪ್ಪ, ಕನಕವಾಡ ಮತ್ತಿತರ ಗ್ರಾಮಗಳ ರೈತರು ಶಿರಸ್ತೇದಾರ್ ಎಸ್.ಸಿ. ಯಲಬುರ್ಗಿಮಠ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಕೆಎಂಎಫ್ ನಿರ್ದೇಶಕ ಮಂಜುನಾಥಗೌಡ ಪಾಟೀಲ ಮಾತನಾಡಿ, ಕಳೆದ ವರ್ಷ ಮಳೆ ಅಬ್ಬರದಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳು ಸರಿಯಾಗಿ ಕೈ ಸೇರಲಿಲ್ಲ. ಅಲ್ಪಸ್ವಲ್ಪ ಬೆಳೆಗೆ ಯೋಗ್ಯ ದರ ಸಿಗದೇ ಪರದಾಡುವಂತಾಯಿತು. ಈಗ ಮೆಕ್ಕೆಜೋಳ ಫಸಲು ಚೆನ್ನಾಗಿ ಬಂದಿದೆ. ಆದರೆ, ಯೋಗ್ಯ ಬೆಲೆ ಸಿಗದೇ ರೈತರು ಹತಾಶರಾಗಿದ್ದಾರೆ. ವಿಶೇಷವಾಗಿ ಶಿರಹಟ್ಟಿ ತಾಲೂಕಿನ ನದಿ ಪಾತ್ರದ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದರಿಂದ ಬೇರೆಡೆ ಮಾರಾಟಕ್ಕೆ ಸಾಗಿಸುವುದು ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರವು ಬೆಂಬಲ ಬೆಲೆ ನಿಗದಿಪಡಿಸಿ ವಿಶೇಷವಾಗಿ ತಾರೀಕೊಪ್ಪ ಗ್ರಾಮದಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದರು.

ಎಚ್.ಡಿ. ಮಾಗಡಿ, ಎಲ್.ಡಿ. ಪಾಟೀಲ, ಆರ್.ಡಿ. ಕೆಂಚರಡ್ಡಿ. ವಿ.ಎಸ್. ಕರೆಯತ್ತಿನ, ವೈ.ಡಿ. ದೊಡ್ಡಮನಿ, ರವಿ ಕರೆಯತ್ತಿನ, ಫಕೀರಗೌಡ ಪಾಟೀಲ, ಮರಿಗೌಡ ಪಾಟೀಲ, ವೆಂಕರಡ್ಡಿ ಪೂಜಾರ, ಫಕೀರಪ್ಪ ಅಗಸರ, ರವಿ ಪಾಟೀಲ, ಈರಣ್ಣ ಮಾಗಳದ, ಜದಗೀಶಗೌಡ್ರ ಪಾಟೀಲ, ರಾಮಣ್ಣ ಬಡ್ನಿ, ಸೋಮಪ್ಪ ಲಮಾಣಿ, ಮಲ್ಲರಡ್ಡಿ ದುರ್ಗಾದ, ಚಂದ್ರಪ್ಪ ಕರೆಯತ್ತಿನ, ವೀರಪ್ಪ ಮರಡೂರ, ನಿಂಗಪ್ಪ ಬಡ್ನಿ, ಕಾಮರಡ್ಡಿ ಶರಣಪ್ಪ ಸುತಾರ, ಮೆಹಬೂಬ ಲಕ್ಷ್ಮೇಶ್ವರ ಇತರರು ಇದ್ದರು.