ವಾಣಿಜ್ಯ

ಫೋನ್ ಪೇ ನಿನ್ನೆಯಿಂದ ವರ್ಕ್ ಆಗ್ತಾ ಇಲ್ಲ ಯಾಕೆ?!

ನವದೆಹಲಿ: ಫೋನ್ ಪೇ ಗ್ರಾಹಕರು ಬಹಳಷ್ಟು ಜನರಿಗೆ ನಿನ್ನೆಯಿಂದ ಫೋನ್ ಪೇ ವರ್ಕ್ ಆಗ್ತಾ ಇಲ್ಲ ಅನ್ನುವುದು ಅರಿವಿಗೆ ಬಂದಿದೆ. ಶುಕ್ರವಾರ ಬೆಳಗ್ಗೆಯಿಂದ ಫೋನ್​ ಪೇ ತೆರೆದರೆ 'ವಿ ಆರ್ ಟೆಂಪರರಿಲಿ ಅನ್​ಅವೇಲೆಬಲ್​' ಎಂಬ ಶೀರ್ಷಿಕೆಯೊಂದಿಗೆ ಸಂದೇಶವೊಂದು ಪರದೆ ಮೇಲೆ ಕಾಣಿಸಕೊಳ್ಳತೊಡಗಿದೆ.

ಆ ಸಂದೇಶಕ್ಕೆ ಶೀರ್ಷಿಕೆಯ ಮೇಲೆಯೇ ಒಂದು ಚಿತ್ರವೂ ಇದ್ದು, ಅದು ದುರಸ್ತಿ ಕಾರ್ಯವನ್ನು ಪ್ರತಿನಿಧಿಸುತ್ತಿದೆ. ಶೀರ್ಷಿಕೆಯ ಕೆಳಗೆ ಮೊದಲ ವಾಕ್ಯದಲ್ಲಿ ನಾವು ನಿಗದಿತವಲ್ಲದ ನಿರ್ವಹಣಾ ಕಾರ್ಯಕ್ಕೆ ಒಳಗಾಗಿದ್ದೇವೆ. ಇದರಿಂದಾಗಿ ಆಗುವ ಯಾವುದೇ ರೀತಿಯ ಅಡಚಣೆಗಳಿಗೆ ನಾವು ಕ್ಷಮೆಯಾಚಿಸುತ್ತೇವೆ. ನಾವು ಶೀಘ್ರವೇ ವಾಪಸ್ ಬರುತ್ತೇವೆ ಎಂಬ ಸಂದೇಶವಿದೆ.

ಇನ್ನೊಂದೆಡೆ ಟ್ವಿಟರ್​ನಲ್ಲೂ ತನ್ನ ಖಾತೆಯಲ್ಲಿ ಕ್ಷಮೆಯಾಚನೆ ಸಂದೇಶವನ್ನು ಫೋನ್ ಪೇ ಅಪ್ಲೋಡ್ ಮಾಡಿದೆ.

ಯಾಕೆ ಹೀಗೆ?: ಯೆಸ್​ ಬ್ಯಾಂಕ್ ಸಂಕಷ್ಟದ ಸುಳಿಗೆ ಸಿಲುಕಿದ್ದು, ಅದರ ಪರಿಣಾಮ ಫೋನ್​ ಪೇ ಆ್ಯಪ್​ ಮೇಲೂ ಆಗಿದೆ. ಫೋನ್ ಪೇ ಆ್ಯಪ್​ಗೆ ಬ್ಯಾಂಕಿಂಗ್ ಪಾರ್ಟನರ್​ ಯೆಸ್ ಬ್ಯಾಂಕ್ ಆಗಿದ್ದು, ಆರ್​ಬಿಐ ಯೆಸ್ ಬ್ಯಾಂಕ್​ನ ವಹಿವಾಟನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಕಾರಣ ಫೋನ್ ಪೇ ಆ್ಯಪ್​ನ ವಹಿವಾಟೂ ತೊಂದರೆಗೀಡಾಗಿದೆ.

ಹೀಗಾಗಿ ಗುರುವಾರ ಫೋನ್ ಪೇಯ ಯಾವುದೇ ವಹಿವಾಟುಗಳು ನಡೆಯಲಿಲ್ಲ. ಗುರುವಾರ ಸಂಜೆಯೇ ಟ್ವೀಟ್ ಸಂದೇಶ ಅಪ್ಲೋಡ್ ಮಾಡಿದ ಫೋನ್​ ಪೇ, ಅದರಿಂದ ಹೊರಬರಲು ಪ್ರಯತ್ನ ನಡೆಸಿದೆ. (ಏಜೆನ್ಸೀಸ್)