ವಾಣಿಜ್ಯ

ಈ ಬೈಕ್​ಗೆ ಪೆಟ್ರೋಲ್ ಬೇಡ, ನೀರಿದ್ದರೆ ಸಾಕಂತೆ!

lakshmihegde

ನವದೆಹಲಿ: ಜಪಾನ್​ನ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಯಮಹಾ ಪೆಟ್ರೋಲ್ ಬದಲು ನೀರನ್ನೇ ಇಂಧನವನ್ನಾಗಿ ಬಳಸುವ ಟೆಕ್ನಾಲಜಿಯ ಬೈಕ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೈಕ್​ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಂಪನಿ 2016ರಿಂದಲೇ ಕೆಲಸ ಮಾಡುತ್ತಿದ್ದು, ಈಗ ಹೊಸ XT 500 H2O ಬೈಕ್​ನ ಚಿತ್ರವನ್ನು ಬಿಡುಗಡೆ ಮಾಡಿದೆ.

ಆದರೆ, ಇದಕ್ಕೆ ಸಂಬಂಧಿಸಿ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿ ಬಹಿರಂಗಗೊಳಿಸಿಲ್ಲ. ಸದ್ಯದ ಮಟ್ಟಿಗೆ ಈ ಬೈಕ್ ರೂಪುಪಡೆದು ಸಾರ್ವಜನಿಕ ಬಳಕೆಗೆ ಸಿಗಬೇಕಾದರೆ ಇನ್ನೂ 4 ರಿಂದ 5 ವರ್ಷ ಬೇಕಾಗಬಹುದು. ಬೈಕ್​ ಅನ್ನು ಮ್ಯಾಕ್ಸಿಮ್​ ಲೆಫೆಬ್ವೆರ್​ ವಿನ್ಯಾಸಗೊಳಿಸಿದ್ದಾರೆ. ಇವರು ಯಮಹಾ ಕಂಪನಿಯ ಇಂಡಸ್ಟ್ರಿಯಲ್ ಡಿಸೈನರ್ ಆಗಿದ್ದು, ಹೊಸ ವಿನ್ಯಾಸ ಈಗಾಗಲೇ ಜಗತ್ತಿನ ಗಮನ ಸೆಳೆದಿದೆ. ಇದನ್ನು ಓದಿ: ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ, ಮುಖರಹಿತವನ್ನಾಗಿಸಲು ಪ್ರಯತ್ನ: ಪ್ರಧಾನಿ ಮೋದಿ

ಇದರೊಂದಿಗೆ ಕಂಪನಿ ತನ್ನ ಐಕಾನಿಕ್ ಎಕ್ಸ್​ಟಿ 500 ಬೈಕ್​ ಗೆ ಮರುಜೀವ ನೀಡಲಿದೆ. ಈ ಬೈಕ್​ 1975ರಿಂದ 1981ರ ಅವಧಿಯಲ್ಲಿ ಹಗುರ ಬೈಕ್ ಎಂಬ ಕಾರಣಕ್ಕೆ ಬಹುಜನಪ್ರಿಯವಾಗಿತ್ತು. ಅಂದು ಅದರಲ್ಲಿ 499 ಸಿಸಿ ಸಿಂಗಲ್ ಸಿಲಿಂಢರ್ ಫೋರ್​ ಸ್ಟ್ರೋಕ್ ಇಂಜಿನ್ ಬಳಸಲಾಗಿತ್ತು. ಅಂದಿನ ಕಾಲಕ್ಕೆ ಗಂಟೆಗೆ 160 ಕಿ.ಮೀ. ವೇಗದಲ್ಲಿ ಇದು ಸಂಚರಿಸುತ್ತಿತ್ತು.

ಈಗ ಹೊಸ ಮಾಡೆಲ್ ಬೈಕ್​ಗೆ XT 500 H2O ಎಂಬ ಹೆಸರನ್ನು ಇರಿಸಲಾಗಿದ್ದು, ಕನಿಷ್ಠ ಮತ್ತು ಆಕರ್ಷಕ ವಿನ್ಯಾಸ, ಬಣ್ಣ ಗಮನಸೆಳೆಯತೊಡಗಿದೆ. ನೀರಿನಿಂದ ಚಾಲಿತ ಈ ಬೈಕ್​ ಝೀರೋ ಕಾರ್ಬನ್ ಎಮಿಷನ್​ ಹೊಂದಿದ್ದು, ಪರಿಸರ ಸ್ನೇಹಿ ಆಗಿರಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)