ವಾಣಿಜ್ಯ

ನೆರೆ ಹಾಗೂ ಬರದ ಭೀಕರ ಹೊಡೆತ ಟೊಮ್ಯಾಟೊ ಬೆಲೆ ಪಾತಾಳಕ್ಕೆ

malli

ರಾಣೆಬೆನ್ನೂರ:  ನೆರೆ ಹಾಗೂ ಬರದ ಭೀಕರ ಹೊಡೆತದಿಂದ ಹೊರಬರಲು ಹೆಣಗಾಡುತ್ತಿರುವ ರೈತರಿಗೆ ಇದೀಗ ಬೆಲೆ ಕುಸಿತದ ಸಂಕಷ್ಟ ಎದುರಾಗಿದ್ದು, ಟೊಮ್ಯಾಟೊ ದರ ಏಕಾಏಕಿ ಪಾತಾಳಕ್ಕಿಳಿದು ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

30ರಿಂದ 3ಕ್ಕೆ ರೂಗೆ ಕುಸಿತ: ಎರಡು-ಮೂರು ತಿಂಗಳ ಹಿಂದೆ 1 ಕೆ.ಜಿ. ಟೊಮ್ಯಾಟೊ 30 ರಿಂದ 40ರೂ.ವರೆಗೂ ಮಾರಾಟವಾಗಿದೆ. ಆದರೆ, ವಾರದಿಂದ ಬೆಲೆ ಒಂದು ಕೆ.ಜಿ.ಗೆ -2ರಿಂದ 3ಕ್ಕೆ ರೂ. ಕುಸಿತ ಕಂಡಿದೆ.

ಬೆಲೆ ಕುಸಿತಕ್ಕೇನು ಕಾರಣ?: 500ಕ್ಕೂ ಅಧಿಕ ಹೆಕ್ಟೇರ್​ನಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ. ಈ ಹಿಂದೆ 500ರಿಂದ 1 ಸಾವಿರ ಬಾಕ್ಸ್​ನಷ್ಟು ಬರುತ್ತಿದ್ದ ಟೊಮ್ಯಾಟೊ, ಇದೀಗ 2 ಸಾವಿರದಿಂದ 3 ಸಾವಿರದವರೆಗೆ ಬರತೊಡಗಿದೆ. ಹೀಗಾಗಿ, ಬೆಲೆ ಕೂಡ ಕುಸಿತ ಕಂಡಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಅಭಿಪ್ರಾಯ.

ಖರ್ಚು ಮಾಡಿದ ಹಣವೂ ಮರಳುತ್ತಿಲ್ಲ

ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಬೀಜ, ಗೊಬ್ಬರ, ಕೂಲಿ ಕಾರ್ವಿುಕರ ಸೇರಿ -ಠಿ; 30 ಸಾವಿರದವರೆಗೂ ಖರ್ಚು ಬರುತ್ತದೆ. ನೀರು ಹಾಯಿಸಿ ಬೆಳೆ ರಕ್ಷಿಸಿಕೊಳ್ಳಬೇಕು. ಫಸಲನ್ನು ಮಾರುಕಟ್ಟೆಗೆ ಸಾಗಿಸಬೇಕಾದರೆ 1

ಬಾಕ್ಸ್​ಗೆ -ಠಿ; 20 ಕೊಡಬೇಕು. ಹರಾಜಿನಲ್ಲಿ ದಲಾಲಿ ಹಾಗೂ ಹಮಾಲಿ ಎಂದು 100 ರೂಪಾಯಿಗೆ  10 ರೂ. ಮುರಿದುಕೊಳ್ಳುತ್ತಾರೆ. ಖಾಲಿ ಬಾಕ್ಸ್ ತೆಗೆದುಕೊಂಡು ಹೋಗಲು 5 ರೂಪಾಯಿ ಕೊಡಬೇಕು. 1 ಎಕರೆಗೆ 8ರಿಂದ 10 ಸಾವಿರ ಕ್ವಿಂಟಾಲ್​ನಷ್ಟು ಇಳುವರಿ ಬಂದರೂ ಈಗಿರುವ 3 ರೂಪಾಯಿಗೆ ಮಾರಾಟ ಮಾಡಿದರೆ, ಟೊಮ್ಯಾಟೊ ಬೆಳೆಯಲು ಮಾಡಿದ ಖರ್ಚು ಸಹ ಮರಳಲ್ಲ ಎಂಬುದು ರೈತರ ಅಳಲು.