ನಮ್ಮ ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಅಧಿಕವಾಗಿಯೇ ಇದೆ. ಅದರಲ್ಲೂ ಕುರಿ ಮತ್ತು ಮೇಕೆ ಮಾಂಸಪ್ರಿಯರ ಸಂಖ್ಯೆ ಜಾಸ್ತಿಯೇ ಇರುವ ಕಾರಣ ಕುರಿ ಹಾಗೂ ಮೇಕೆಗೆ ಬಹಳ ಬೇಡಿಕೆ ಇದ್ದು, ಬೆಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಮಾಂಸದ ಕಾರಣದಿಂದ ಮಾತ್ರವಲ್ಲದೆ, ಕುರಿಯ ಚರ್ಮ ಮತ್ತು ಉಣ್ಣೆಯಿಂದ ಸ್ವೆಟರ್, ವಿವಿಧ ಬಗೆಯ ಉಡುಗೆ ತಯಾರಾಗುವ ಕಾರಣ ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯಮ ಉತ್ತಮ ರೀತಿಯಲ್ಲಿ ಯಶಸ್ಸು ಕಾಣುತ್ತಿದೆ. ಬಹಳಷ್ಟು ಜನ ಸಣ್ಣಪ್ರಮಾಣದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಆರಂಭ ಮಾಡಿ ಈಗ ದೊಡ್ಡ ಮಟ್ಟದಲ್ಲಿ ಲಾಭಾಂಶ ಗಳಿಸುತ್ತಿದ್ದಾರೆ. ಹಾಗಾದರೆ, ನಾನು ಕೂಡ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಹಣ ಗಳಿಸಲು ಸಾಧ್ಯವೇ? ಅಂತ ನೀವು ಕೇಳಿದರೆ, ಹೌದು ಖಂಡಿತ ಸಾಧ್ಯ. ಹೇಗೆ ಎಂಬುದಕ್ಕೆ ಉತ್ತರ ಈ ಅಂಕಣದಲ್ಲಿದೆ.
ಕುರಿ- ಮೇಕೆ ಸಾಕಾಣಿಕೆ ಕೋರ್ಸ್ನಲ್ಲಿ ಏನಿದೆ? ಮಾರ್ಗದರ್ಶಕರ ಪರಿಚಯ ಕುರಿ ಮತ್ತು ಮೇಕೆ ಸಾಕಾಣಿಕೆ ಬಿಸಿನೆಸ್ ಯಾಕೆ? ಬಂಡವಾಳ, ಸಂಪನ್ಮೂಲ, ಮಾಲೀಕತ್ವ ಮತ್ತು ನೋಂದಣಿ ನಿಯಂತ್ರಣ, ಕಾನೂನು ಮತ್ತು ಅನುಸರಣೆ ಬಿಜಿನೆಸ್ ಆರಂಭಿಸುವ ಮುನ್ನ ತಯಾರಿ ಹೇಗೆ? ಕುರಿ, ಮೇಕೆಯ ವಿವಿಧ ತಳಿಗಳ ಖರೀದಿ ಹೇಗೆ? ಕುರಿ, ಮೇಕೆ ವಿಧಗಳು ಕುರಿ , ಮೇಕೆ ಸಾಕಾಣಿಕೆಯಲ್ಲಿ ಸೀಸನಾಲಿಟಿ ಕುರಿ ಸಾಕಾಣಿಕೆಗೆ ಬೇಕಾಗುವ ಮಾನವ ಸಂಪನ್ಮೂಲ ಕುರಿ, ಮೇಕೆ ಸಾಕಾಣಿಕೆಗೆ ಅಗತ್ಯ ಮೂಲಸೌಕರ್ಯ ಕುರಿ, ಮೇಕೆ ಸಾಕಾಣಿಕೆಯಿಂದ ಬೇರೆ ಬೇರೆ ಉತ್ಪನ್ನಗಳ ತಯಾರಿಕೆ ಕುರಿ, ಮೇಕೆ ಮಾರುಕಟ್ಟೆ ಮತ್ತು ಹಂಚಿಕೆ ಕುರಿ, ಮೇಕೆ ಸಾಕಾಣಿಕೆಯಲ್ಲಿ ಸಿಗುವ ಲಾಭ ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಕುರಿ ಮತ್ತು ಮೇಕೆ ಸಾಕಾಣಿಕೆ ಎಂದರೇನು?
ಮಾರ್ಗದರ್ಶಕರು ಕಿಶೋರ್ - ಚಿಕ್ಕಬಳ್ಳಾಪುರ ಲಕ್ಷ್ಮೀ ನಾರಾಯಣ - ಭದ್ರಾವತಿ ರಿತೀಶ್- ಶಿವಮೊಗ್ಗ ದೊಡ್ಡರಾಜು- ತುಮಕೂರು ಲಕ್ಷ್ಮೇ ಗೌಡ - ದೊಡ್ಡಬಳ್ಳಾಪುರ ಕಾಂತರಾಜ್ - ಚಿಕ್ಕಬಳ್ಳಾಪುರ
ಕುರಿ -ಮೇಕೆ ಸಾಕಾಣಿಕೆ ಕೋರ್ಸ್: ಕುರಿ ಕೊಬ್ಬಿದಷ್ಟು ಲಾಭ ಎಂಬ ಮಾತಿನಂತೆ, ಬಲಿಷ್ಠವಾದ ಕುರಿ ಮತ್ತು ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ತಮ್ಮದೇ ಆದ ಸ್ವಂತ ಉದ್ಯೋಗ ಮಾಡಬೇಕೆಂದಿರುವ ಜನರಿಗೆ ಉತ್ತಮ ಆಯ್ಕೆ ಈ ಕುರಿ ಮತ್ತು ಮೇಕೆ ಸಾಕಾಣಿಕೆ ಉದ್ಯೋಗ. ಯಾವುದೇ ಸ್ವಂತ ಭೂಮಿ ಇಲ್ಲದೆಯೂ, ಹೆಚ್ಚು ಬಂಡವಾಳವಿಲ್ಲದೇ, ಗೋಜು- ಗದ್ದಲಗಳಿಲ್ಲದೆ ಆರಂಭಿಸುವ ಉದ್ದಿಮೆಗಳಲ್ಲಿ, ಕುರಿ ಮತ್ತು ಮೇಕೆ ಸಾಕಾಣಿಕೆಯೂ ಒಂದು. ಆದರೆ ಇದಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳಾವುವು? ಬೇಕಾಗುವ, ನಿಖರ ಬಂಡವಾಳ ಮತ್ತು ಸಂಪನ್ಮೂಲವಾ ದರೂ ಏನು? ಈ ಉದ್ದಿಮೆ ಆರಂಭಿಸಲು ನಾನು ನೋಂದಣಿ ಏನಾದರೂ ಮಾಡಿಸಬೇಕಾ? ಅದಕ್ಕೆ ಬೇಕಾಗುವ ತಯಾರಿ ಏನು? ಈ ರೀತಿಯ ಹಲವಾರು ಪ್ರಶ್ನೆ ನಿಮ್ಮನ್ನೂ ಕಾಡುತ್ತಾ ಇವೆಯಾ? ಹಾಗಾದ್ರೆ ನೀವು ಇಂಡಿಯನ್ ಮನಿ. ಕಾಮ್ ಫೈನಾನ್ಶಿಯಲ್ ಫ್ರೀಡಂ ಆಪ್ನಲ್ಲಿ ವಿನ್ಯಾಸಗೊಳಿಸಲಾಗಿರುವ ಕುರಿ ಮತ್ತು ಮೇಕೆ ಸಾಕಾಣಿಕೆಯ ಕೋರ್ಸ್ ವೀಕ್ಷಿಸಲೇ ಬೇಕು. ಈ ಕೋರ್ಸ್ನಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಯಶಸ್ಸು ಕಂಡಿರುವವರು ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ನೀವು ಸ್ವಂತ ಉದ್ಯೋಗ ಹೊಂದಲು ಇದು ಉತ್ತಮ ಅವಕಾಶ. ತಡ ಮಾಡದೇ ಆದಷ್ಟು ಬೇಗ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಯಶಸ್ವಿಯಾಗುವುದು ಹೇಗೆ? ಎಂಬ ಕೋರ್ಸ್ ನೋಡಲಾರಂಭಿಸಿ ಮತ್ತು ಸ್ವಯಂ ಉದ್ಯೋಗಿಯಾಗಿ ನಿಮ್ಮ ಶ್ರೀಮಂತಿಕೆ ಪಯಣ ಆರಂಭಿಸಿ.