| ಪಿ.ಯು. ಮೊಣ್ಣಪ್ಪ, ಸಂಸ್ಥಾಪಕರು, ವಿತ್ತ ಕ್ಯಾಪಿಟಲ್ ಸರ್ವಿಸಸ್
- ನಿರ್ದಿಷ್ಟ ಕಂಪನಿಗಳಿಗಿಂತ ಹೆಚ್ಚಾಗಿ ಭವಿಷ್ಯದ ಟ್ರೆಂಡ್‌ಗಳ ಮೇಲೆ ಹೂಡಿಕೆ ಮಾಡುವುದೇ ಥಿಮ್ಯಾಟಿಕ್ ಹೂಡಿಕೆ
- ಹಣದುಬ್ಬರ ಹಾಗೂ ಸರ್ಕಾರದ ಬದಲಾಗುವ ನೀತಿಗಳಿಂದಾಗಿ ಹೂಡಿಕೆಯ ಸರಿಯಾದ ಸಮಯ ನಿರ್ಧರಿಸುವುದು ಇಲ್ಲಿನ ಸವಾಲು
- ಬೆಲೆ ಏರಿಳಿತಕ್ಕೆ ಹೆದರಿ ಆತುರದ ನಿರ್ಧಾರ ಮಾಡದೆ, ದೀರ್ಘಕಾಲದ ಲಾಭಕ್ಕಾಗಿ ತಾಳ್ಮೆಯಿಂದ ಇರುವುದು ಅಗತ್ಯ.
- ICICI ಪ್ರುಡೆನ್ಶಿಯಲ್ ಹೈಬ್ರಿಡ್ FoF ಮೂಲಕ ಈಕ್ವಿಟಿ ಮತ್ತು ಸಾಲಪತ್ರಗಳ ಸಮತೋಲಿತ ಹೂಡಿಕೆ ಸಾಧ್ಯ
Thematic investing : ಥಿಮ್ಯಾಟಿಕ್ ಹೂಡಿಕೆ ಎಂದರೆ ಕೇವಲ ಒಂದು ಕಂಪನಿ ಅಥವಾ ನಿರ್ದಿಷ್ಟ ಕೈಗಾರಿಕೆಯಲ್ಲಿ ಹಣ ಹೂಡುವ ಬದಲಾಗಿ, ಭವಿಷ್ಯದಲ್ಲಿ ದೊಡ್ಡ ಬದಲಾವಣೆ ತರಬಲ್ಲ 'ವಿಷಯ' ಅಥವಾ 'ಟ್ರೆಂಡ್'ಗಳ ಮೇಲೆ ಹೂಡಿಕೆ ಮಾಡುವುದು. ಉದಾಹರಣೆಗೆ, ಡಿಜಿಟಲೀಕರಣ, ಪರಿಸರ ಸ್ನೇಹಿ ಇಂಧನ (Energy Shift) ಅಥವಾ ಹೊಸ ಮಾದರಿಯ ಉತ್ಪಾದನಾ ಪದ್ಧತಿಗಳಂತಹ ಜಾಗತಿಕ ಬದಲಾವಣೆಗಳನ್ನು ಗುರುತಿಸಿ, ಆ ಬದಲಾವಣೆಯಿಂದ ಲಾಭ ಪಡೆಯುವ ವಿವಿಧ ವಲಯಗಳಲ್ಲಿ ಹಣ ತೊಡಗಿಸುವುದೇ ಈ ಹೂಡಿಕೆಯ ಉದ್ದೇಶವಾಗಿದೆ. ಮಾರುಕಟ್ಟೆಯಲ್ಲಿನ ಅಲ್ಪಾವಧಿಯ ಏರಿಳಿತಗಳಿಗಿಂತ ಹೆಚ್ಚಾಗಿ, ದೀರ್ಘಾವಧಿಯಲ್ಲಿ ಆರ್ಥಿಕತೆಯನ್ನು ಮರುರೂಪಿಸುವ ದೊಡ್ಡ ಶಕ್ತಿಗಳ ಮೇಲೆ ಈ ತಂತ್ರವು ಗಮನಹರಿಸುತ್ತದೆ. ಆದಾಗ್ಯೂ, ಈ ಹೂಡಿಕೆಯಲ್ಲಿ ಕೆಲವು ಸವಾಲುಗಳು ಕೂಡ ಇವೆ. ಅವು ಯಾವುವು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಗಮನದಲ್ಲಿಡಬೇಕಾದ ಸವಾಲುಗಳು
ಅಂದಹಾಗೆ ಮಾರುಕಟ್ಟೆಯ ಪರಿಸರವು ಸ್ಥಿರವಾಗಿರುವುದಿಲ್ಲ ಬದಲಾಗಿ, ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿನ ಬದಲಾವಣೆಯ ಅಂಶವೇ ಹೂಡಿಕೆಯ ಮೊದಲ ಸವಾಲಾಗಿದೆ. ಬಡ್ಡಿದರಗಳು, ಹಣದುಬ್ಬರ ಮತ್ತು ಸರ್ಕಾರದ ನೀತಿಗಳಂತಹ ಸ್ಥೂಲ ಆರ್ಥಿಕ ಅಂಶಗಳಿಂದಾಗಿ ವಿವಿಧ ವಲಯಗಳ ನಾಯಕತ್ವವು ಬದಲಾಗುತ್ತಲೇ ಇರುತ್ತದೆ. ಒಂದು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ವಲಯಗಳು ಮುಂದಿನ ಹಂತದಲ್ಲಿ ಹಿನ್ನಡೆ ಅನುಭವಿಸುವುದರಿಂದ, ಸರಿಯಾದ ಸಮಯವನ್ನು ನಿರ್ಧರಿಸುವುದು ಅತ್ಯಂತ ಕಷ್ಟಕರ ಕೆಲಸವಾಗಿದೆ. ಇದರೊಂದಿಗೆ, ಪೋರ್ಟ್‌ಫೋಲಿಯೋ ಅಪಾಯವನ್ನು ನಿರ್ವಹಿಸುವುದು ಮತ್ತು ಕೇವಲ ವಿವಿಧ ವಲಯಗಳಲ್ಲಿ ಮಾತ್ರವಲ್ಲದೆ, ಬೇರೆ ಬೇರೆ ಮಾರುಕಟ್ಟೆ ಬಂಡವಾಳೀಕರಣದ ಉದ್ದಕ್ಕೂ ಅವಕಾಶಗಳನ್ನು ಗುರುತಿಸಬೇಕಾದ ಅನಿವಾರ್ಯತೆ ಈ ಸಂಕೀರ್ಣತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಮತ್ತೊಂದು ಸವಾಲೆಂದರೆ ಹೂಡಿಕೆದಾರರ ನಡವಳಿಕೆ. ಮಾರುಕಟ್ಟೆಯು ನಿರಂತರವಾಗಿ ಏರಿಳಿತಗಳನ್ನು ಅನುಭವಿಸುತ್ತವೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈ ಏರಿಳಿತಗಳು ಹೂಡಿಕೆದಾರರಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ಪ್ರಚೋದಿಸುತ್ತವೆ. ಷೇರುಗಳ ಬೆಲೆ ಗಗನಕ್ಕೇರಿದಾಗ ಲಾಭದ ಆಸೆಯಿಂದ ಹೂಡಿಕೆ ಮಾಡುವುದು ಮತ್ತು ಬೆಲೆ ಕುಸಿದಾಗ ಭಯದಿಂದ ನಷ್ಟ ಅನುಭವಿಸಿ ಷೇರುಗಳನ್ನು ಹಿಂಪಡೆಯುವುದು ಮಾರುಕಟ್ಟೆಯಲ್ಲಿ ಕಂಡುಬರುವ ಸಾಮಾನ್ಯ ಪ್ರವೃತ್ತಿಯಾಗಿದೆ. ಆದರೆ, ಈ ರೀತಿ ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ದೀರ್ಘಕಾಲದ ಲಾಭಕ್ಕೆ ಅಡ್ಡಿಯಾಗುತ್ತದೆ. ನೀವು ಆಯ್ಕೆ ಮಾಡಿದ ಹೂಡಿಕೆಯ ಮೂಲ ಉದ್ದೇಶ ಅಥವಾ ಐಡಿಯಾ ಎಷ್ಟೇ ಸರಿಯಾಗಿದ್ದರೂ, ಮಾರುಕಟ್ಟೆಯ ಅಸ್ಥಿರತೆಗೆ ಹೆದರಿ ಮಾಡುವ ಇಂತಹ ತಪ್ಪು ನಿರ್ಧಾರಗಳು ನಿಮ್ಮ ಸಂಪತ್ತಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ನಿಮ್ಮ ಹೂಡಿಕೆಯ ಮೇಲೆ ನಂಬಿಕೆಯಿಟ್ಟು ತಾಳ್ಮೆಯಿಂದ ಇರುವುದೇ ಯಶಸ್ಸಿನ ಸೂತ್ರವಾಗಿದೆ.
ಅಂದಹಾಗೆ, ಹೂಡಿಕೆ ಪೋರ್ಟ್‌ಫೋಲಿಯೋವನ್ನು ಸರಿಯಾಗಿ ನಿರ್ವಹಿಸುವುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಮಾರುಕಟ್ಟೆಯ ಏರಿಳಿತ ಮತ್ತು ಆರ್ಥಿಕ ಬದಲಾವಣೆಗಳನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಹಣವನ್ನು ಮರುಹೂಡಿಕೆ ಮಾಡುವುದು ಇಲ್ಲಿ ಮುಖ್ಯವಾಗುತ್ತದೆ. ಲಾಭದ ನಿರೀಕ್ಷೆಯಲ್ಲಿರುವಾಗ ಯಾವಾಗ ಹೂಡಿಕೆಯನ್ನು ಹಿಂಪಡೆಯಬೇಕು ಅಥವಾ ಕಡಿಮೆ ಮಾಡಬೇಕು ಎಂಬ ನಿರ್ಧಾರವು ಕೇವಲ ಮಾರುಕಟ್ಟೆಯ ಬೆಲೆಯನ್ನು ಅವಲಂಬಿಸಿರದೆ, ಅದರಿಂದ ಉಂಟಾಗುವ ತೆರಿಗೆಯ ಹೊರೆ ಮತ್ತು ಇತರ ತಾಂತ್ರಿಕ ಸವಾಲುಗಳನ್ನು ಸಮತೋಲನಗೊಳಿಸುವುದನ್ನೂ ಒಳಗೊಂಡಿರುತ್ತದೆ. ಅಂದರೆ, ಕೇವಲ ಲಾಭ ಮಾಡುವುದು ಮಾತ್ರವಲ್ಲದೆ, ಆ ಲಾಭವನ್ನು ತೆರಿಗೆಯಿಂದ ಉಳಿಸಿ ಮರುಹೂಡಿಕೆ ಮಾಡುವುದು ದೀರ್ಘಾವಧಿಯ ಯಶಸ್ಸಿಗೆ ಅತ್ಯಗತ್ಯ.
ನಿಮ್ಮ ಕೈಯಲ್ಲೇ ಇದೆ ಪರಿಹಾರ
ಮಾರುಕಟ್ಟೆಯ ಏರಿಳಿತಗಳನ್ನು ಸಮರ್ಥವಾಗಿ ಎದುರಿಸಲು ಬದಲಾಗುತ್ತಿರುವ ಆರ್ಥಿಕ ಟ್ರೆಂಡ್‌ಗಳಿಗೆ ಅನುಗುಣವಾಗಿ ಹೂಡಿಕೆಯನ್ನು ವಿವಿಧ ಕ್ಷೇತ್ರಗಳಲ್ಲಿ ಹಂಚಿಕೆ ಮಾಡುವುದು ಅಗತ್ಯವಾಗಿದೆ. ಸ್ಥಿರತೆಗಾಗಿ ಸಾಲಪತ್ರಗಳಂತಹ (Debt) ಸುರಕ್ಷಿತ ಆಸ್ತಿಗಳನ್ನು ಹೊಂದುವುದರ ಜೊತೆಗೆ, ಮಾರುಕಟ್ಟೆಯ ವಿವಿಧ ಗಾತ್ರದ ಕಂಪನಿಗಳಲ್ಲಿ (Market Cap) ನಮ್ಯತೆಯಿಂದ ಹೂಡಿಕೆ ಮಾಡಬೇಕು. ಒಟ್ಟಾರೆಯಾಗಿ, ದೀರ್ಘಕಾಲದ ಲಾಭವನ್ನು ಗುರಿಯಾಗಿಸಿಕೊಂಡು, ಒಂದು ವ್ಯವಸ್ಥಿತ ಹೂಡಿಕೆ ಯೋಜನೆಯ ಮೂಲಕ ಅಪಾಯವನ್ನು ಕಡಿಮೆ ಮಾಡಿ ಆರ್ಥಿಕ ಗುರಿಗಳನ್ನು ತಲುಪಬಹುದು. ಅಂತಹ ರಚನಾತ್ಮಕ ಪರಿಹಾರವನ್ನು ಬಯಸುವ ಹೂಡಿಕೆದಾರರಿಗೆ, ಫಂಡ್ ಆಫ್ ಫಂಡ್ಸ್ ವಿಧಾನವನ್ನು ಪರಿಗಣಿಸಬಹುದು.
ICICI ಪ್ರುಡೆನ್ಶಿಯಲ್ ಅಗ್ರೆಸಿವ್ ಹೈಬ್ರಿಡ್ ಆಕ್ಟಿವ್ ಫಂಡ್ ಆಫ್ ಫಂಡ್ (FoF) ವಿವಿಧ ವಲಯಗಳು, ವಿಷಯಾಧಾರಿತ (thematic) ಮತ್ತು ಮಾರ್ಕೆಟ್-ಕ್ಯಾಪ್ ಅವಕಾಶಗಳ ಮೇಲೆ ಶೇ. 65-80 ರಷ್ಟು ಈಕ್ವಿಟಿ ಹೂಡಿಕೆಯನ್ನು ಕೇಂದ್ರೀಕರಿಸುತ್ತದೆ. ಇದರೊಂದಿಗೆ ಸ್ಥಿರತೆಗಾಗಿ ಶೇ. 20 ರಿಂದ 35 ರಷ್ಟು ಸಾಲದ (debt) ಅಂಶಗಳನ್ನು ಒಳಗೊಂಡಿದ್ದು, ದೀರ್ಘಾವಧಿಯ ಸಂಪತ್ತು ಸೃಷ್ಟಿಯಲ್ಲಿ ಸ್ಥಿರವಾದ ದಾಖಲೆಯನ್ನು ಹೊಂದಿದೆ. ಮಾರ್ಚ್ 31, 2026ರ ವೇಳೆಗೆ, ಈ ನಿಧಿಯು 3 ವರ್ಷಗಳಲ್ಲಿ 15.11 ರಷ್ಟು, 5 ವರ್ಷಗಳಲ್ಲಿ 14.91% ಮತ್ತು 10 ವರ್ಷಗಳ ಅವಧಿಯಲ್ಲಿ 14.47 ರಷ್ಟು ವಾರ್ಷಿಕ ಸಂಯೋಜಿತ ಬೆಳವಣಿಗೆಯ ದರವನ್ನು (CAGR) ದಾಖಲಿಸಿದೆ.