ವಿ.ಆರ್. ಅಳಗಪ್ಪನ್, ಮ್ಯೂಚುಯಲ್ ಫಂಡ್ ವಿತರಕ 
ಷೇರು ಮಾರುಕಟ್ಟೆ

ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್: ಮಾರುಕಟ್ಟೆಯಲ್ಲಿ ಗೆಸ್​ ವರ್ಕ್​ ಆಗಲ್ಲ, ಮೊದಲು ಆರ್ಥಿಕತೆ ಬಗ್ಗೆ ತಿಳಿಯಿರಿ! Business cycle investing

Business cycle investing : ಯಾವಾಗಲೂ ಫೈನಾನ್ಸ್​ ಬಗ್ಗೆ ಆಸಕ್ತಿ ಹೊಂದಿರುವ ಅಂಜಲಿ, ತಾನು ದುಡಿಯಲು ಆರಂಭಿಸುತ್ತಿದ್ದಂತೆ, ಹೂಡಿಕೆ ಮೇಲೆ ತನಗಿರುವ ಕುತೂಹಲದಿಂದ ಷೇರು ಮಾರುಕಟ್ಟೆ ಕುರಿತು ಆಳವಾದ ಅಧ್ಯಯನದಲ್ಲಿ ತೊಡಗುತ್ತಾಳೆ. ಈ ವೇಳೆ ಆಕೆ ಕಂಡುಕೊಳ್ಳುವ ಒಂದು ನಿಜಾಂಶ ಏನೆಂದರೆ, ಆರ್ಥಿಕತೆ ಅನ್ನೋದು ಯಾವಾಗಲೂ ಒಂದೇ ರೇಖೆಯಲ್ಲಿ ಬೆಳೆಯುವುದಿಲ್ಲ ಅನ್ನೋದು. ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯ ಎಂಬ ಸಂಗತಿಯನ್ನು ಅಂಜಲಿ ಕಂಡುಕೊಳ್ಳುತ್ತಾಳೆ. ಯಾವುದೇ ಮಾರುಕಟ್ಟೆಯಾಗಲಿ ಸ್ಪೀಡ್​ ಅಪ್ ( ವೇಗ)​, ಸ್ಲೋ ಡೌನ್ (​ನಿಧಾನ), ರಿಕವರ್ (ಚೇತರಿಕೆ)​ ಮತ್ತು ಶ್ರಿಂಕ್ ( ಕುಗ್ಗುವುದು)​ ಎಂಬ ಆರ್ಥಿಕತೆಯ ನಾಲ್ಕು ಹಂತಗಳನ್ನು ಹಾದು ಹೋಗಲೇಬೇಕು. ಇಲ್ಲಿ ಪ್ರತಿಯೊಂದು ಹಂತವು ಜನರು ಮತ್ತು ವ್ಯವಹಾರಗಳು ಹೇಗೆ ಪರಸ್ಪರ ವರ್ತಿಸುತ್ತವೆ ಎಂಬುದನ್ನು ಅವಲಂಬಿಸಿರುತ್ತದೆ.
ಮೇಲೆ ಹೇಳಿದಂತೆಯೇ ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್ ವಿಧಾನ ಕಾರ್ಯನಿರ್ವಹಿಸುತ್ತದೆ. ಈ ವಿಧಾನವು ಪ್ರತಿ ಹಂತದಲ್ಲಿ ಯಾವ ಸೆಕ್ಟರ್‌ಗಳು ಉತ್ತಮ ಪ್ರದರ್ಶನ ತೋರುತ್ತವೆಯೋ ಅವುಗಳಲ್ಲಿ ಹೂಡಿಕೆ ಮಾಡುವ ಒಂದು ಉತ್ತಮ ವಿಧಾನವಾಗಿದೆ. ಅಂದರೆ, ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ, ಹೂಡಿಕೆದಾರರ ಅಪಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಆದಾಯವನ್ನು ಹೆಚ್ಚಿಸುವ ಗುರಿಯನ್ನು ಈ ವಿಧಾನ ಹೊಂದಿದೆ. ನಮ್ಮ ಸುತ್ತಮುತ್ತಲಿನ ಆರ್ಥಿಕ ವಿಷಯಗಳು ಉತ್ತಮ ಸ್ಥಿತಿಯಲ್ಲಿ ಅಥವಾ ಬೆಳೆಯುತ್ತಿದ್ದರೆ, ಜನರು ಮತ್ತು ಉದ್ಯಮಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಈ ಸಂದರ್ಭದಲ್ಲಿ ಕಾರ್ಖಾನೆಗಳು ಹೆಚ್ಚು ಶ್ರಮಿಸುತ್ತವೆ, ಜನರು ಚಟುವಟಿಕೆಗಳು ಹೆಚ್ಚಾಗುತ್ತದೆ ಮತ್ತು ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಮತ್ತು ಕಂಪನಿಗಳ ಹೂಡಿಕೆ ಹೆಚ್ಚಾಗುತ್ತದೆ. ಅದೇ ರೀತಿ, ನಮ್ಮ ಸುತ್ತಮುತ್ತಲಿನ ವ್ಯವಹಾರಗಳು ನಿಧಾನ ಅಥವಾ ಕುಗ್ಗಿದಾಗ, ಜನರು ಜಾಗರೂಕರಾಗುತ್ತಾರೆ ಮತ್ತು ಅನಗತ್ಯ ಖರ್ಚು ಮಾಡುವುದನ್ನು ತಡೆಹಿಡಿಯುತ್ತಾರೆ. ಅಲ್ಲದೆ, ತಮ್ಮ ವೆಚ್ಚಗಳನ್ನು ಕಡಿತಗೊಳಿಸುತ್ತಾರೆ. ಇದರಿಂದ ಆರ್ಥಿಕತೆಯು ನಿಧಾನಗೊಳ್ಳುತ್ತದೆ. ಹೀಗಾಗಿ, ಎಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ, ಕಾರ್ಖಾನೆಗಳು ಎಷ್ಟೊಂದು ಬಿಜಿಯಾಗಿವೆ ಮತ್ತು ಜನರು ಏನನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಅಂಶಗಳ ಮೇಲೆ ಮಾರುಕಟ್ಟೆ ಬೆಳವಣಿಗೆ ಅವಲಂಬಿಸಿರುತ್ತದೆ ಅನ್ನೋದನ್ನು ನೀವು ನೋಡಬಹುದು.
ಇಂದು ಆರ್ಥಿಕತೆಯು ಸಾಕಷ್ಟು ಏರಿಳಿತಗಳಿಂದ ಸಾಗುತ್ತಿರುವುದರಿಂದ ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್ ಹೆಚ್ಚು ಉಪಯುಕ್ತವಾಗಿದೆ. ಈ ಹಿಂದೆ, ಕಡಿಮೆ ಹಣದುಬ್ಬರ ಮತ್ತು ಜಾಗತಿಕ ರಾಜಕೀಯದಲ್ಲಿ ಯಾವುದೇ ಅಸ್ಥಿರತೆ ಇರಲಿಲ್ಲ. ಇದು ಮಾರುಕಟ್ಟೆಯಲ್ಲಿ ದೀರ್ಘ, ಸುಲಭ ಸಮಯಗಳಿಗೆ ಕಾರಣವಾಯಿತು. ಆದರೆ, ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ಇಂದು ಹಣದುಬ್ಬರ ಹೆಚ್ಚಾಗಿದೆ, ಜಾಗತಿಕ ಆರ್ಥಿಕ ಸನ್ನಿವೇಶ ಮತ್ತು ವಿಶ್ವ ರಾಜಕೀಯ ಉದ್ವಿಗ್ನತೆಯಿಂದಾಗಿ ಬಡ್ಡಿದರಗಳು ಏರಿಳಿತಗೊಳ್ಳುತ್ತಲೇ ಇವೆ. ಇದರಿಂದ ಮಾರುಕಟ್ಟೆ ಕೂಡ ಜಿಗಿಯುತ್ತಿದೆ. ಹೀಗಾಗಿ, ಹೂಡಿಕೆಗೆ ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್ ವಿಧಾನ ಉತ್ತಮವಾಗಿದೆ.
ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್ ಎಂದರೆ, ಅಲ್ಪಾವಧಿಯ ಮಾರುಕಟ್ಟೆ ಬದಲಾವಣೆಗಳ ಬಗ್ಗೆ ಚಿಂತಿಸುವ ಬದಲು ಒಟ್ಟಾರೆ ಆರ್ಥಿಕತೆಯನ್ನು ಗಮನಿಸುವುದಾಗಿದೆ. ಹಣದುಬ್ಬರ, ಬಡ್ಡಿದರಗಳು, ಸರ್ಕಾರಿ ಖರ್ಚು, ಕಾರ್ಖಾನೆ ಉತ್ಪಾದನೆ ಮತ್ತು ವ್ಯವಹಾರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಈ ವಿಧಾನ ನಿಮಗೆ ತಿಳಿಸಬಹುದು. ನಂತರ ಪರಿಸ್ಥಿತಿ ಬದಲಾದಂತೆ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಹೂಡಿಕೆ ಮಾಡಬೇಕೆಂಬುದನ್ನು ಈ ವಿಧಾನದ ಮೂಲಕ ನೀವು ನಿರ್ಧರಿಸಬಹುದು. ಇದರಿಂದ ಯಾವುದೇ ಆರ್ಥಿಕ ಅಪಾಯ ಹೆಚ್ಚಿರುವುದಿಲ್ಲ. ನೀವು ನಿಮ್ಮ ಹೂಡಿಕೆಗಳನ್ನು ಸರಿಹೊಂದಿಸಲು ಕಲಿತರೆ, ನೀವು ಕಠಿಣ ಸಮಯವನ್ನು ಉತ್ತಮವಾಗಿ ನಿಭಾಯಿಸಬಹುದು ಎಂಬುದನ್ನು ಈ ವಿಧಾನ ತಿಳಿಸುತ್ತದೆ.
ಹೀಗಾಗಿ, ಹೂಡಿಕೆದಾರರಿಗೆ, ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್ ಒಂದು ಉತ್ತಮ ವಿಧಾನ. ಇದನ್ನು ಮ್ಯೂಚುವಲ್ ಫಂಡ್‌ಗಳ ಮೂಲಕ ಪಡೆಯಬಹುದು. ಭಾರತದಲ್ಲಿ, ಸುಮಾರು 18 ಫಂಡ್​ಗಳು ಈ ತಂತ್ರವನ್ನು ಅನುಸರಿಸುತ್ತಿವೆ. 2021ರ ಜನವರಿಯಲ್ಲಿ ಪ್ರಾರಂಭವಾದ ಐಸಿಐಸಿಐ ಪ್ರುಡೆನ್ಶಿಯಲ್ ಬಿಸಿನೆಸ್ ಸೈಕಲ್ ಫಂಡ್, ಶೇ. 15.59 ರಷ್ಟು ಒಂದು ವರ್ಷದ CAGR, 22.59 ರಷ್ಟು ಮೂರು ವರ್ಷಗಳ CAGR ಮತ್ತು 2025, ಡಿಸೆಂಬರ್​ 31ರಿಂದ 21.02 ರಷ್ಟು CAGR ಅನ್ನು ದಾಖಲಿಸಿ ಸ್ಥಿರವಾದ ಕಾರ್ಯಕ್ಷಮತೆ ನೀಡಿದೆ. ಈ ಅವಧಿಗಳಲ್ಲಿ ಅದರ ಮಾನದಂಡವನ್ನು 4–8 ಶೇಕಡಾ ಅಂಕಗಳಿಂದ ಮೀರಿಸಿದೆ.