| ಅನಿಲ್ ಶರಣ ಬಸವೇಶ್ವರ, ಧನ್ಯೋಗ್ 
ಷೇರು ಮಾರುಕಟ್ಟೆ

ಆಲ್ ಕ್ಯಾಪ್ ಆ್ಯಕ್ಟಿವ್ ಫಂಡ್ ಆಫ್ ಫಂಡ್ಸ್: ಮಾರುಕಟ್ಟೆ ಹೂಡಿಕೆಯ ನಿರ್ಧಾರ ಇನ್ನು ಸುಲಭ! Fund of Funds

Fund of Funds : ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಮಾರುಕಟ್ಟೆಯ ಸಂಶೋಧನೆ, ಷೇರುಗಳ ಆಯ್ಕೆ ಅಥವಾ ಪೋರ್ಟ್‌ಫೋಲಿಯೋ ನಿರ್ವಹಣೆಯ ತಲೆನೋವಿಲ್ಲದೆ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಒಂದು ಸರಳ ಮಾರ್ಗವನ್ನು ಒದಗಿಸುತ್ತವೆ. ಆದರೆ, ಪ್ರಸ್ತುತ ಭಾರತದಲ್ಲಿ ನೂರಾರು ವೈವಿಧ್ಯಮಯ ಮ್ಯೂಚುವಲ್ ಫಂಡ್ ಯೋಜನೆಗಳು ಲಭ್ಯವಿರುವುದರಿಂದ, ಸಾಮಾನ್ಯ ಹೂಡಿಕೆದಾರರಿಗೆ ತಮಗೆ ಸೂಕ್ತವಾದ ಸರಿಯಾದ ಯೋಜನೆಯನ್ನು ಆರಿಸುವುದೇ ಒಂದು ದೊಡ್ಡ ಸವಾಲಾಗಿ ಮತ್ತು ಗೊಂದಲಮಯವಾಗಿ ಪರಿಣಮಿಸಿದೆ. ಆದರೆ, ಇನ್ಮುಂದೆ ಆ ತಲೆನೋವು ನಿಮಗೆ ಬೇಡ.

ಹೂಡಿಕೆಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತೆ

ಮ್ಯೂಚುವಲ್ ಫಂಡ್‌ನಲ್ಲಿ ಷೇರುಗಳ ಆಯ್ಕೆ ಮತ್ತು ನಿರ್ವಹಣೆಯನ್ನು ಫಂಡ್ ಮ್ಯಾನೇಜರ್ ನೋಡಿಕೊಂಡರೂ, ಲಾರ್ಜ್, ಮಿಡ್ ಅಥವಾ ಸ್ಮಾಲ್ ಕ್ಯಾಪ್‌, ಲಾರ್ಜ್​ ಅಂಡ್​ ಮಿಡ್​ ಕ್ಯಾಪ್​, ಮಲ್ಟಿ ಕ್ಯಾಪ್​ ಹಾಗೂ ಫ್ಲೆಕ್ಸಿ ಕ್ಯಾಪ್​ ಮುಂತಾದವುಗಳಲ್ಲಿ ಎಲ್ಲಿ ಹೂಡಿಕೆ ಮಾಡಬೇಕೆಂಬ ನಿರ್ಧಾರ ಅಂತಿಮವಾಗಿ ಹೂಡಿಕೆದಾರರದೇ ಆಗಿರುತ್ತದೆ. ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಈ ಪ್ರತಿಯೊಂದು ವಿಭಾಗಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುವುದರಿಂದ ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆ ಮಾಡುವುದು ಸಾಮಾನ್ಯರಿಗೆ ಕಷ್ಟವಾಗಬಹುದು. ಇಂತಹ ಸಂದರ್ಭಗಳಲ್ಲಿ, ವಿವಿಧ ಮಾರುಕಟ್ಟೆ ವಿಭಾಗಗಳಲ್ಲಿ ಹೂಡಿಕೆ ಮಾಡುವ 'ಫಂಡ್ ಆಫ್ ಫಂಡ್ಸ್' (Fund of Funds) ಒಂದು ಉತ್ತಮ ಆಯ್ಕೆಯಾಗಬಲ್ಲದು, ಏಕೆಂದರೆ, ಇದು ಸಂಶೋಧನೆ ಆಧಾರಿತ ನಿರ್ಧಾರಗಳ ಮೂಲಕ ಹೂಡಿಕೆದಾರರ ಪರವಾಗಿ ವಿವಿಧ ಈಕ್ವಿಟಿ ಫಂಡ್‌ಗಳಲ್ಲಿ ಹಣವನ್ನು ತೊಡಗಿಸಿ ಹೂಡಿಕೆಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.

ಮುನ್ಸೂಚನೆಗೆ ಅನುಗುಣವಾಗಿ ಹೂಡಿಕೆ

ಅಂದಹಾಗೆ, ಫಂಡ್ ಆಫ್ ಫಂಡ್ಸ್ ಕೇವಲ ಆರ್ಥಿಕ ಬೆಳವಣಿಗೆ, ಹಣದುಬ್ಬರ, ಬಡ್ಡಿದರ ಮತ್ತು ವಿತ್ತೀಯ ಕೊರತೆಯಂತಹ ಮೂಲಭೂತ ಅಂಶಗಳನ್ನು ಗಮನಿಸುವುದು ಮಾತ್ರವಲ್ಲದೆ, ಮಾರುಕಟ್ಟೆಯ ಮೌಲ್ಯಮಾಪನಗಳ ಆಧಾರದ ಮೇಲೆ ವಿವಿಧ ಮಾರುಕಟ್ಟೆ ವಿಭಾಗಗಳ ಆಕರ್ಷಣೆಯನ್ನು ನಿರ್ಧರಿಸುತ್ತವೆ. ಮಾರುಕಟ್ಟೆಯ ಮುನ್ಸೂಚನೆಗೆ ಅನುಗುಣವಾಗಿ, ಯಾವ ವಿಭಾಗವು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆಯೋ ಅಂತಹ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತವೆ ಮತ್ತು ಎಲ್ಲಿ ಲಾಭ ಕಡಿಮೆಯಾಗುವ ಸಾಧ್ಯತೆಯಿದೆಯೋ ಅಲ್ಲಿ ಹೂಡಿಕೆಯನ್ನು ಕಡಿಮೆ ಮಾಡುತ್ತವೆ.

ಒಂದೇ ಕಡೆ ಸಮಗ್ರ ಪರಿಹಾರ

ಮಾರುಕಟ್ಟೆಯಲ್ಲಿ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ವಿಭಾಗಗಳು ಕಾಲಕಾಲಕ್ಕೆ ಏರಿಳಿತಗಳನ್ನು ಕಾಣುತ್ತವೆ. ಅಂದರೆ, ಒಂದು ಸಮಯದಲ್ಲಿ ಒಂದು ವಿಭಾಗವು ಉತ್ತಮ ಲಾಭ ನೀಡಿದರೆ, ಇನ್ನೊಂದು ಸಮಯದಲ್ಲಿ ಮತ್ತೊಂದು ವಿಭಾಗವು ಹಿನ್ನಡೆ ಅನುಭವಿಸಬಹುದು. ಇಂತಹ ಸಂದರ್ಭಗಳಲ್ಲಿ ಹೂಡಿಕೆಯನ್ನು ಸಮಯಕ್ಕೆ ಸರಿಯಾಗಿ ಒಂದು ವಿಭಾಗದಿಂದ ಇನ್ನೊಂದಕ್ಕೆ ಬದಲಾಯಿಸುವುದು (Dynamic Positioning) ಬಹಳ ಮುಖ್ಯವಾಗುತ್ತದೆ. ಹೂಡಿಕೆದಾರರು ಈ ಜವಾಬ್ದಾರಿಯನ್ನು 'ಡೈವರ್ಸಿಫೈಡ್ ಈಕ್ವಿಟಿ ಆಲ್ ಕ್ಯಾಪ್ ಆಕ್ಟಿವ್ ಫಂಡ್ ಆಫ್ ಫಂಡ್ಸ್‌'ಗೆ (Fund of Funds) ವಹಿಸುವ ಮೂಲಕ, ಮಾರುಕಟ್ಟೆಯ ವಿವಿಧ ಹಂತಗಳಲ್ಲಿ ಯಾವ ವಿಭಾಗದಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲವಿಲ್ಲದೆ ಒಂದೇ ಕಡೆ ಸಮಗ್ರ ಪರಿಹಾರವನ್ನು ಪಡೆಯಬಹುದು.
ಇದಕ್ಕೆ ಅನುಗುಣವಾಗಿ, ಹೂಡಿಕೆದಾರರು ಐಸಿಐಸಿಐ ಪ್ರುಡೆನ್ಶಿಯಲ್ ಡೈವರ್ಸಿಫೈಡ್ ಈಕ್ವಿಟಿ ಆಲ್ ಕ್ಯಾಪ್ ಆಕ್ಟಿವ್ ಫಂಡ್ ಆಫ್ ಫಂಡ್ಸ್ (ICICI Prudential Diversified Equity All Cap Active FOF) ಅನ್ನು ಪರಿಗಣಿಸಬಹುದು. ಇದೊಂದು ಮುಕ್ತ-ಅಂತ್ಯದ (Open-ended) ಫಂಡ್ ಆಫ್ ಫಂಡ್ ಆಗಿದ್ದು, ಸಂಸ್ಥೆಯ ಆಂತರಿಕ ಚೌಕಟ್ಟಿನ ಮೂಲಕ ವಿವಿಧ ಮಾರುಕಟ್ಟೆ ವಿಭಾಗಗಳಲ್ಲಿನ ಸಕ್ರಿಯ ಈಕ್ವಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಅವಕಾಶ ನೀಡುತ್ತದೆ. ಮಾರುಕಟ್ಟೆಯ ಪರಿಸ್ಥಿತಿ ಮತ್ತು ತಮ್ಮ ಸಂಶೋಧನಾ ಚೌಕಟ್ಟಿನ ಆಧಾರದ ಮೇಲೆ, ಫಂಡ್ ಮ್ಯಾನೇಜರ್‌ಗಳು ಹೂಡಿಕೆಯ ಹಂಚಿಕೆಯನ್ನು ಕ್ರಿಯಾತ್ಮಕವಾಗಿ (Dynamically) ನಿರ್ಧರಿಸುತ್ತಾರೆ. ಈ ಹೊಸ ಫಂಡ್ ಆಫರ್ (NFO) ಮಾರ್ಚ್ 02 ರಿಂದ ಮಾರ್ಚ್ 16, 2026 ರವರೆಗೆ ಲಭ್ಯವಿರುತ್ತದೆ.