ನವದೆಹಲಿ: ಸ್ಮಾರ್ಟ್ ಫೋನ್ಗಳ ಡಿಸ್ಪ್ಲೇ ಹಾಗೂ ಟಚ್ ಪ್ಯಾನೆಲ್ಗಳ ಮೇಲೆ ಕೇಂದ್ರ ಸರ್ಕಾರ ಶೇ. 10 ಆಮದು ಸುಂಕ ವಿಧಿಸಿದೆ. ಇದರಿಂದಾಗಿ ಸ್ಯಾಮ್ಂಗ್, ಆಪಲ್, ವಿವೊ, ಕ್ಸಿಯೋಮಿ, ಒಪ್ಪೊ ಮತ್ತು ರಿಯಲ್ವಿು ಸ್ಮಾರ್ಟ್ಫೋನ್ ಮತ್ತು ಫೀಚರ್ ಫೋನ್ಗಳು ದುಬಾರಿಯಾಗಲಿವೆ. ಆತ್ಮನಿರ್ಭರ ಭಾರತ ಯೋಜನೆ ಅನುಸಾರವಾಗಿ ದೇಶದಲ್ಲೇ ಉತ್ಪಾದನೆ ಮಾಡಬೇಕೆಂಬ ಸೂತ್ರಕ್ಕೆ ತಕ್ಕಂತೆ ಸರ್ಕಾರ ಕ್ರಮಕೈಗೊಂಡಿದೆ.
ಹೆಚ್ಚುವರಿ ಸೆಸ್ ಇರುವುದರಿಂದ ಆಮದು ಸುಂಕ ವಾಸ್ತವವಾಗಿ ಶೇ. 11ರಷ್ಟಾಗುತ್ತದೆ. ಆಮದು ಸುಂಕ ಹೇರಿಕೆಯ ಪರಿಣಾಮವಾಗಿ ಫೋನ್ಗಳ ಬೆಲೆ ಶೆ. 1.5ರಿಂದ ಶೇ. 3 ಹೆಚ್ಚಾಗಬಹುದು ಎಂದು ಕಂಪನಿಗಳು ಹೇಳಿವೆ. ಡಿಸ್ಪ್ಲೇ ಮತ್ತು ಟಚ್ ಪ್ಯಾನಲ್ಗಳೇ ಮೊಬೈಲ್ ಫೋನ್ಗಳ ಅತ್ಯಂತ ಸಂಕೀರ್ಣ ಭಾಗಗಳಾಗಿವೆ. ಸಾಧನದ ಶೇ. 15ರಿಂದ 25 ವೆಚ್ಚ ಅದಕ್ಕೇ ತಗಲುತ್ತದೆ.