ವಾಣಿಜ್ಯ

ಏಷ್ಯನ್ ಮಾರುಕಟ್ಟೆ ಪರಿಣಾಮ ಭಾರತೀಯ ಪೇಟೆಯಲ್ಲೂ ಆರಂಭಿಕ ಕುಸಿತದೊಂದಿಗೆ ವಹಿವಾಟು ಶುರುಮಾಡಿದ ಸೆನ್ಸೆಕ್ಸ್​, ನಿಫ್ಟಿ

ಮುಂಬೈ: ನಾಲ್ಕು ದಿನಗಳ ನಿರಂತರ ಏರಿಕೆಯ ನಂತರ ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭಿಸಿದ ಭಾರತೀಯ ಷೇರುಪೇಟೆಯ ಮೇಲೆ ಏಷ್ಯನ್ ಮಾರುಕಟ್ಟೆಯ ಇಳಿಮುಖ ವಹಿವಾಟಿನ ಪರಿಣಾಮವಾಗಿದ್ದು,ಸೆನ್ಸೆಕ್ಸ್​, ನಿಫ್ಟಿ ಆರಂಭಿಕ ಕುಸಿತದೊಂದಿಗೆ ವಹಿವಾಟು ಶುರುಮಾಡಿಕೊಂಡಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ದಿನದ ವಹಿವಾಟು ಶುರುವಾದಾಗ 56.87 ಅಂಶ(0.14%) ಇಳಿಕೆಯೊಂದಿಗೆ 41,249.16ರಲ್ಲೂ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 13.60 ಅಂಶ (0.11) ಇಳಿಕೆಯೊಂದಿಗೆ 12,137.95ರಲ್ಲಿ ವಹಿವಾಟು ಆರಂಭಿಸಿವೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಕೂಡ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಬೆಳಗ್ಗಿನ ವಹಿವಾಟಿನಲ್ಲಿ 9 ಪೈಸೆ ಇಳಿಕೆಯಾಗಿದ್ದು 71.27ರ ದರದಲ್ಲಿ ವಹಿವಾಟು ನಡೆದಿತ್ತು.

ಗುರುವಾರ ಸಂಜೆ ಸೆನ್ಸೆಕ್ಸ್​ 163.37 ಅಂಶ ಏರಿಕೆಯೊಂಧಿಗೆ 41,306.03ರಲ್ಲೂ, ನಿಫ್ಟಿ 48.80 ಅಂಶ ಏರಿಕೆಯೊಂದಿಗೆ 12,137.95ರಲ್ಲೂ ವಹಿವಾಟು ಮುಗಿಸಿದ್ದವು. (ಏಜೆನ್ಸೀಸ್)