ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟು ಭಾರಿ ವೊಲಟೈಲ್ ಆಗಿ ಶುರುವಾಗಿದ್ದು, ಸತತ ಮೂರನೇ ದಿನವೂ ಹೂಡಿಕೆದಾರರು ನಷ್ಟವನ್ನೇ ಅನುಭವಿಸಿದ್ದಾರೆ. ಜಾಗತಿಕ ಅರ್ಥ ವ್ಯವಸ್ಥೆ ಮೇಲೆ ಕೊರೊನಾ ವೈರಸ್ ಸೋಂಕಿನ ಆತಂಕ ಆವರಿಸಿದ್ದರ ಪರಿಣಾಮ ಇದು ಎಂದು ಪರಿಣತರು ವಿಶ್ಲೇಷಿಸಿದ್ದಾರೆ.
ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಮಾರಿಷಸ್ ಅನ್ನು ಬೂದು ಪಟ್ಟಿ ಸೇರಿಸಲಿದೆ ಎಂಬ ಸುದ್ದಿಯ ಬಗ್ಗೆ ಕಳಕಳಿ ಪೇಟೆಯಲ್ಲಿ ಕಳಕಳಿ ವ್ಯಕ್ತವಾಗಿದ್ದು, ಹೆಚ್ಚಿನ ಕುಸಿತ ಕಂಡು ಕೊನೆಗೆ ಅಲ್ಲೇ ಚೇತರಿಕೆ ಕಾಣುವ ಪ್ರಯತ್ನ ಪೇಟೆಯಲ್ಲಿ ಮಂಗಳವಾರ ಬೆಳಗೆ ಕಂಡುಬಂದಿತ್ತು. ಈ ಚೇತರಿಕೆಗೆ ಸೆಬಿಯ ಹೇಳಿಕೆ ಕಾರಣ. ಮಾರಿಷಸ್ನಲ್ಲಿರುವ ವಿದೇಶಿ ಹೂಡಿಕೆದಾರರು ಎಫ್ಪಿಐ ನೋಂದಣಿ ಹೊಂದಿದ್ದರೆ ತಮ್ಮ ವಹಿವಾಟು ಮುಂದುವರಿಸಬಹುದು ಎಂದು ಸೆಬಿ ಹೇಳಿತ್ತು.
ತೀವ್ರತರವಾದ ಹೊಯ್ದಾಟದಲ್ಲಿದ್ದ ಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ದಿನದ ವಹಿವಾಟಿನ ವೇಳೆ 300 ಅಂಶಕ್ಕೂ ಹೆಚ್ಚು ಇಳಿದಿತ್ತು. ಬಳಿಕ ದಿನದ ಅಂತ್ಯಕ್ಕೆ 82.03 ಅಂಶ ಇಳಿಕೆಯಾಗಿ 40,281.20ಯಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ ಕೂಡ 31.50 ಅಂಶ ಇಳಿದು 11,797.90 ಯಲ್ಲಿ ವಹಿವಾಟು ಮುಗಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಸನ್ ಫಾರ್ಮಾ ಟಾಪ್ ಲೂಸರ್ ಆಗಿದ್ದು, ಷೇರು ಮೌಲ್ಯ ಶೇಕಡ 2.37 ಕುಸಿದು ನಷ್ಟ ಅನುಭವಿಸಿದೆ.ಎಚ್ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್, ಎಲ್ಆ್ಯಂಡ್ಟಿ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇದೇ ವೆಳೇ, ಟಿಸಿಎಸ್ ಶೇಕಡ 1.98 ಅಂಶ ಲಾಭ ಗಳಿಸಿದ್ದು, ಟಾಟಾ ಸ್ಟೀಲ್, ಭಾರ್ತಿ ಏರ್ಟೆಲ್, ಎಸ್ಬಿಐ, ಎಚ್ಯುಎಲ್ ಮುಂತಾದ ಷೇರುಗಳು ಲಾಭಗಳಿಸಿವೆ. (ಏಜೆನ್ಸೀಸ್)