ವಾಣಿಜ್ಯ

ವರ್ಷಾಂತ್ಯದ ರಜೆ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ನಿಧಾನಗತಿ ವಹಿವಾಟು: 100 ಅಂಶ ಇಳಿಕೆಯೊಂದಿಗೆ ವಹಿವಾಟು ಆರಂಭಿಸಿದ ಸೆನ್ಸೆಕ್ಸ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಮುಂಬೈ: ಜಗತ್ತು ಹೊಸ ಕ್ಯಾಲೆಂಡರ್ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದು,ರಜಾಕಾಲವಾದ್ದರಿಂದ ಷೇರುಪೇಟೆ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಜಾಗತಿಕ ಬೆಳವಣಿಗೆ ಭಾರತೀಯ ಷೇರುಪೇಟೆಯ ಮೇಲೂ ಪರಿಣಾಮ ಬೀರಿದ್ದು, ಮಂಗಳವಾರ ಸೆನ್ಸೆಕ್ಸ್​ 100 ಅಂಶಗಳ ಇಳಿಕೆಯೊಂದಿಗೆ ವಹಿವಾಟು ಶುರುಮಾಡಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ)ನ ಸೂಚ್ಯಂಕ ಸೆನ್ಸೆಕ್ಸ್​ 108.21 ಅಂಶ ಅಥವಾ ಶೇಕಡ 0.26 ಇಳಿಕೆ ದಾಖಲಿಸಿಕೊಂಡು 41,449.79ರಲ್ಲಿ ವಹಿವಾಟು ಆರಂಭಿಸಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್​(ಎನ್​ಎಸ್​ಇ)ನ ಸೂಚ್ಯಂಕ ನಿಫ್ಟಿ 50 ಕೂಡ 28.10 ಅಂಶ ಅಥವಾ ಶೇಕಡ 0.23 ಇಳಿಕೆಯೊಂದಿಗೆ 12,227.75ರಲ್ಲಿ ವಹಿವಾಟು ಶುರುಮಾಡಿಕೊಂಡಿದೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 17.14 ಅಂಶ ಕುಸಿತ ದಾಖಲಿಸಿಕೊಂಡು 41,558ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇದೇ ರೀತಿ ನಿಫ್ಟಿ 10.05 ಅಂಶ ಏರಿಕೆ ದಾಖಲಿಸಿ 12,255.85ರಲ್ಲಿ ವಹಿವಾಟು ಮುಗಿಸಿತ್ತು.(ಏಜೆನ್ಸೀಸ್​)