ವಾಣಿಜ್ಯ

44 ಸಾವಿರ ದಾಟಿದ ಸೆನ್ಸೆಕ್ಸ್

shastrimath

ಮುಂಬೈ: ಸೆನ್ಸೆಕ್ಸ್ 227.34 (ಶೇ. 52) ಅಂಶ ಏರಿಕೆ ಆಗಿದ್ದು, ಮುಂಬೈ ಷೇರುಪೇಟೆ ಸೂಚ್ಯಂಕ 44 ಸಾವಿರ ಗಡಿ ದಾಟಿ 44,180.05ಕ್ಕೆ ಬುಧವಾರದ ವಹಿವಾಟು ಅಂತ್ಯವಾಗಿದೆ. ನಿಫ್ಟಿ 64.05 (ಶೇ.50) ಅಂಕ ಹೆಚ್ಚಳವಾಗಿದ್ದು, 12,938.25ಕ್ಕೆ ವಹಿವಾಟು ಮುಗಿದಿದೆ.

ಎಂಆಂಡ್​ಎಂ ಕಂಪನಿ ಷೇರು ಮೌಲ್ಯ ಶೇ. 10.76 ಏರಿಕೆ ಕಂಡಿದೆ. ಉಳಿದಂತೆ ಎಲ್​ಆಂಡ್​ಟಿ, ಇಂಡಸ್​ಇಂಡ್ ಬ್ಯಾಂಕ್, ಬಜಾಜ್ ಫಿನ್​ಸರ್ವ್, ಎಸ್​ಬಿಐ, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್ ಕೊಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್​ಗಳು ಲಾಭಗಳಿಸಿವೆ. ಎಚ್​ಯುಎಲ್, ಐಟಿಸಿ, ಟೈಟಾನ್, ಟಿಸಿಎಸ್, ಭಾರ್ತಿ ಏರ್​ಟೆಲ್, ಇನ್ಪೋಸಿಸ್ ಕಂಪನಿ ಷೇರು ಮೌಲ್ಯ ಇಳಿಕೆಯಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ವೃದ್ಧಿಸಿದ್ದು, ಒಂದು ಡಾಲರ್​ಗೆ 74.19 ರೂಪಾಯಿಗೆ ವಿದೇಶಿ ವಿನಿಮಯ ವಹಿವಾಟು ಸ್ಥಿರವಾಗಿದೆ. ಬಂಗಾರದ ದರ 357 ರೂ. ತಗ್ಗಿದ್ದು, 10 ಗ್ರಾಂ ಬೆಲೆ 50,610 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ 532 ರೂಪಾಯಿ ಕಡಿಮೆಯಾಗಿದ್ದು, ಪ್ರತಿ ಕೆ.ಜಿ.ದರ 62,639 ರೂಪಾಯಿಗೆ ತಗ್ಗಿದೆ.