ಮುಂಬೈ: ಜಾಗತಿಕ ಮಟ್ಟದಲ್ಲಿ ಕಂಡ ಋಣಾತ್ಮಕ ವಿದ್ಯಮಾನಗಳ ಪರಿಣಾಮ ಭಾರತೀಯ ಷೇರುಪೇಟೆ ಶುಕ್ರವಾರ ಭಾರಿ ಕುಸಿತಕ್ಕೆ ಸಾಕ್ಷಿಯಾಯಿತು. ಕಳೆದ 10 ತಿಂಗಳ ಅವಧಿಯಲ್ಲಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಕುಸಿತ ಇದಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ 1,940 ಅಂಶ ಕುಸಿತ ಕಂಡು 50,000 ಅಂಶಗಳ ಗಡಿಯಿಂದ ಕೆಳಗೆ ಇಳಿಯಿತು. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ ಕೂಡ 568 ಅಂಶ ಇಳಿದು 15,000ದೊಳಕ್ಕೆ ಬಿತ್ತು.
ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,939.32 ಅಂಶ (3.80%) ಇಳಿದು 49,099.99ಕ್ಕೆ ತಲುಪಿದೆ. ಕಳೆದ ವರ್ಷ ಮೇ 4ರ ಏಕದಿನದ ಗರಿಷ್ಠ ಕುಸಿತ(2002.27 ಅಂಶ 5.94%)ದ ನಂತರದ ಸ್ಥಾನದಲ್ಲಿ ಶುಕ್ರವಾರದ ಕುಸಿತ ದಾಖಲಾಗಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿರುವ 30 ಷೇರುಗಳು ಕೂಡ ಕುಸಿತ ದಾಖಲಿಸಿದ್ದು, ಈ ಪೈಕಿ 8 ಕಂಪನಿಯ ಷೇರುಗಳು 5%ಗೂ ಹೆಚ್ಚು ನಷ್ಟ ಅನುಭವಿಸಿವೆ. ಇದೇ ರೀತಿ ನಿಫ್ಟಿ 568.20 ಅಂಶ (3.76%) ಕುಸಿದು 14,529.15ರಲ್ಲಿ ದಿನದ ವಹಿವಾಟು ಮುಗಿಸಿದೆ. ಕಳೆದ ವರ್ಷ ಮಾರ್ಚ್ 23ರ ನಂತರದ ಗರಿಷ್ಠ ಮಟ್ಟದ ಕುಸಿತ ಇದು (1135.20 ಅಂಶ-12.98%). ಬ್ಯಾಂಕಿಂಗ್ ಸೂಚ್ಯಂಕ ಶೇಕಡ 4.8, ಫೈನಾನ್ಶಿಯಲ್ ಮತ್ತು ಟೆಲಿಕಾಂ ಸೂಚ್ಯಂಕ ಶೇಕಡ 4.9 ಮತ್ತು ಶೇಕಡ 3.85 ಕುಸಿತ ಕಂಡಿವೆ.
ಸೆನ್ಸೆಕ್ಸ್ ಸೂಚ್ಯಂಕ ಇಂಟ್ರಾ ಡೇ ವಹಿವಾಟಿನಲ್ಲಿ 2,100ಕ್ಕೂ ಹೆಚ್ಚು ಅಂಶ ಕುಸಿತ ಕಂಡಿತ್ತು. ಸಿರಿಯಾದ ಇರಾನಿಯನ್ ಬಂಡುಕೋರರ ಮೇಲೆ ಅಮೆರಿಕ ಗುರುವಾರ ದಾಳಿ ಆರಂಭಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಷೇರು ವಿಕ್ರಯ ಪ್ರಮಾಣ ಹೆಚ್ಚಾಗಿತ್ತು. ಇದು ಮತ್ತು ಇತರ ಕೆಲವು ಅಂಶಗಳ ಪರಿಣಾಮ ಸೆನ್ಸೆಕ್ಸ್ ಮೇಲಾಗಿದ್ದು 2,149 ಹೆಚ್ಚು ಅಂಶ ಕುಸಿತ ದಾಖಲಿಸಿ 48,890ಕ್ಕೆ ತಲುಪಿತ್ತು. ಇದೇ ರೀತಿ ನಿಫ್ಟಿ ಕೂಡ ಇಂಟ್ರಾ ಡೇ ವಹಿವಾಟಿನಲ್ಲಿ 630 ಅಂಶ ಕುಸಿದು 14,467 ಅಂಶ ತಲುಪಿತ್ತು. ಇಂಟ್ರಾ ಡೇ ಕುಸಿತದ ಪರಿಣಾಮ ಹೂಡಿಕೆದಾರರು 6 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡರೆ, ಬಿಎಸ್ಇ ಮಾರುಕಟ್ಟೆ ಬಂಡವಾಳ 200.12 ಲಕ್ಷ ಕೋಟಿಗೆ ಇಳಿಕೆಯಾಗಿತ್ತು. ದಿನದ ಅಂತ್ಯಕ್ಕೆ ಬಿಎಸ್ಇ ಮಾರುಕಟ್ಟೆ ಬಂಡವಾಳ 200.77 ಲಕ್ಷ ಕೋಟಿ ಆಗಿತ್ತು. ಹೂಡಿಕೆದಾರರು ಕಳೆದುಕೊಂಡ ಸಂಪತ್ತಿನ ಮೌಲ್ಯ -ಠಿ; 5.42 ಲಕ್ಷ ಕೋಟಿ ಆಗಿತ್ತು.
ಚಿನ್ನ, ಬೆಳ್ಳಿ ದರ ಕುಸಿತ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರ ಗಣನೀಯ ಕುಸಿತ ದಾಖಲಿಸಿವೆ. ಅಪರಂಜಿ ಚಿನ್ನದ ದರ 10 ಗ್ರಾಮಿಗೆ 342 ರೂಪಾಯಿ ಇಳಿಕೆಯಾಗಿ -ಠಿ; 45,599 ತಲುಪಿತು. ಬೆಳ್ಳಿ ದರ ಒಂದು ಕಿಲೋಗೆ -ಠಿ; 2,007 ಕುಸಿದು -ಠಿ; 67,419ಕ್ಕೆ ತಲುಪಿತು.
ವಿತ್ತೀಯ ಕೊರತೆ -ಠಿ; 12.34 ಲಕ್ಷ ಕೋಟಿ
ಕೇಂದ್ರ ಸರ್ಕಾರದ ಪರಿಷ್ಕೃತ ಮುಂಗಡಪತ್ರ ಅಂದಾಜಿನ ಪ್ರಕಾರ, ದೇಶದ ವಿತ್ತೀಯ ಕೊರತೆ ಪ್ರಮಾಣ ಜನವರಿ ಕೊನೆಗೆ -ಠಿ; 12.34 ಲಕ್ಷ ಕೋಟಿ (66.8%) ತಲುಪಿದೆ. ಹಿಂದಿನ ಹಣಕಾಸು ವರ್ಷದ ಜನವರಿ ಕೊನೆಯ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ 128.5% ಹೆಚ್ಚಳವಾಗಿದೆ. ಪ್ರಸಕ್ತ ವರ್ಷ ಮಾರ್ಚ್ 31ರ ವೇಳೆಗೆ ವಿತ್ತೀಯ ಕೊರತೆ -ಠಿ; 18.48 ಲಕ್ಷ ಕೋಟಿ ಅಥವಾ ಜಿಡಿಪಿಯ 9.5% ಆಗಿರಲಿದೆ ಎಂದು ಸರ್ಕಾರ ತಿಳಿಸಿದೆ.
ಕರಾಳ ಶುಕ್ರವಾರಕ್ಕೇನು ಕಾರಣ?