ವಾಣಿಜ್ಯ

ಇ-ಕೆವೈಸಿ ದೃಢೀಕರಣಕ್ಕೆ ಎನ್​ಎಸ್​ಇಗೆ ಅನುಮತಿ

chandru

ನವದೆಹಲಿ: ಇ-ಕೆವೈಸಿ ದೃಢೀಕರಿಸುವ ಸಂಸ್ಥೆಗಳ ಪಟ್ಟಿಗೆ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ) ಮಂಗಳವಾರ ಸೇರ್ಪಡೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಸುತ್ತೋಲೆ ಮೂಲಕ ಇದನ್ನು ಪ್ರಕಟಿಸಿದೆ. ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಸೆಬಿ, ಆಧಾರ್​ ಮೂಲಕ ಇ-ಕೆವೈಸಿ ದೃಢೀಕರಣಕ್ಕೆ ಎಂಟು ಸಂಸ್ಥೆಗಳಿಗೆ ಅನುಮತಿ ನೀಡಿ ಅವುಗಳ ಪಟ್ಟಿಯನ್ನು ಪ್ರಕಟಿಸಿತ್ತು.

ಸೆಂಟ್ರಲ್​ ಡೆಪೋಸಿಟರಿ ಸರ್ವೀಸಸ್​ (ಇಂಡಿಯಾ) ಲಿಮಿಟೆಡ್ (ಸಿಡಿಎಸ್​ಎಲ್​), ನ್ಯಾಷನಲ್ ಸೆಕ್ಯುರಿಟೀಸ್​ ಡೆಪಾಸಿಟರಿ ಲಿಮಿಟೆಡ್ (ಎನ್​ಎಸ್​ಡಿಎಲ್​), ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ), ಸಿಡಿಎಸ್​ಎಲ್​ ವೆಂಚರ್ಸ್​, ಎನ್​ಎಸ್​​ಡಿಎಲ್​ ಡೇಟಾಬೇಸ್​ ಮ್ಯಾನೇಜ್​ಮೆಂಟ್​, ಎನ್​ಎಸ್​ಇ ಡೇಟಾ ಆ್ಯಂಡ್ ಅನಲಿಟಿಕ್ಸ್​, ಸಿಎಎಂಎಸ್ ಇನ್​ವೆಸ್ಟರ್​ ಸರ್ವೀಸಸ್ ಆ್ಯಂಢ್ ಕಂಪ್ಯೂಟರ್ ಏಜ್​ ಮ್ಯಾನೇಜ್​ಮೆಂಟ್​ ಸರ್ವೀಸಸ್​ ಆ ಎಂಟು ಸಂಸ್ಥೆಗಳು.

ಈ ಸೇವೆಯನ್ನು ಒದಗಿಸುವುದಕ್ಕೆ ಈ ಸಂಸ್ಥೆಗಳು ಯುಐಡಿಎಐ ಜತೆಗೆ ಕೆವೈಸಿ ಯೂಸರ್ ಏಜೆನ್ಸಿ (ಕೆಯುಎ) ಆಗಿ ನೋಂದಣಿ ಮಾಡಿಸಿಕೊಳ್ಳಬೇಕು. ಹಾಗೆ ಮಾಡಿದಾಗ ಸೆಬಿಯಲ್ಲಿ ನೋಂದಾಯಿತ ಇಂಡರ್​ಮೀಡಿಯರೀಸ್ ಅಥವಾ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್​ ಆಧಾರ್ ದೃಢೀಕರಣದ ಮೂಲಕ ಇ-ಕೆವೈಸಿಯನ್ನು ನೆರವೇರಿಸಬಹುದಾಗಿದೆ. (ಏಜೆನ್ಸೀಸ್)