ವಾಣಿಜ್ಯ

ಆಹಾರ ಧಾನ್ಯ ವ್ಯಾಪಾರಿಗಳ ಸಂಘಕ್ಕೆ ಗುನ್ನಳ್ಳಿ ಅಧ್ಯಕ್ಷ

ಬೀದರ್: ಆಹಾರ ಧಾನ್ಯ ವ್ಯಾಪಾರಿಗಳ ಸಂಘ (ಫುಡ್ ಗ್ರೇನ್ ಮರ್ಚಂಟ್ ಅಸೋಸಿಯೇಷನ್) ಜಿಲ್ಲಾ ಅಧ್ಯಕ್ಷರಾಗಿ ರಾಜಕುಮಾರ ಬಿರಾದಾರ ಗುನ್ನಳ್ಳಿ, ಉಪಾಧ್ಯಕ್ಷರಾಗಿ ಅಶೋಕ ರೇಜಂತಲ್ ನೇಮಕಗೊಂಡಿದ್ದಾರೆ.

ನಗರದ ಗಾಂಧಿಗಂಜ್ನಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಂಘಕ್ಕೆ ಶಿವಾನಂದ ಗುನ್ನಳ್ಳಿ (ಕಾರ್ಯದರ್ಶಿ), ದಿಗಂಬರ್ ಪೋಲಾ (ಸಹ ಕಾರ್ಯದರ್ಶಿ), ನಾಗರಾಜ ನಂದಗಾಂವ (ಖಜಾಂಚಿ), ರವಿ ಮಾಡೆ, ನಾಗಶೆಟ್ಟಿ ಕಾರಾಮುಂಗಿ, ಗೋವಿಂದರಾವ ಬಿರಾದಾರ, ಭಗವಂತ ಜಾಧವಪುರ, ಬಸವರಾಜ ಭಂಡೆ (ನಿರ್ದೇಶಕರು) ನೇಮಕಗೊಂಡಿದ್ದಾರೆ.

ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟ ನಿರ್ಗಮಿತ ಅಧ್ಯಕ್ಷ ಬಸವರಾಜ ಧನ್ನೂರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿ ಅಧಿಕಾರವನ್ನು ಹಸ್ತಾಂತರಿಸಿದರು. ಈ ವೇಳೆ ವಾಲಿ ಫೌಂಡೇಷನ್ ದಿಂದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಪ್ರಮುಖರಾದ ದೀಪಕ್ ವಾಲಿ, ವಿವೇಕ ವಾಲಿ ಇತರರಿದ್ದರು.