ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಕಳೆದ ಐದು ದಿನಗಳಿಂದ ಸತತ ಇಳಿಕೆ ದಾಖಲಿಸಿದ್ದು, ಸೋಮವಾರ ಕೂಡ ಪೆಟ್ರೋಲ್ ಬೆಲೆ 13ರಿಂದ 18 ಪೈಸೆವರೆಗೆ ಇಳಿಕೆಯಾಗಿದೆ.
ದೆಹಲಿ ಮುಂಬೈನಲ್ಲಿ 13 ಪೈಸೆ, ಚೆನ್ನೈನಲ್ಲಿ 14 ಹಾಗೂ ಕೋಲ್ಕತದಲ್ಲಿ 18 ಪೈಸೆ ಇಳಿಕೆಯಾಗಿದೆ. ಸೋಮವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 72.10 ರೂ. ಇತ್ತು. ಡೀಸೆಲ್ ದರ 16ರಿಂದ 20 ಪೈಸೆ ತಗ್ಗಿದ್ದು, ಮುಂಬೈ ಮತ್ತು ಚೆನ್ನೈ 17, ಕೊಲ್ಕತದಲ್ಲಿ 20, ದೆಹಲಿಯಲ್ಲಿ 16 ಪೈಸೆ ಇಳಿಕೆಯಾಗಿದೆ.
ದೆಹಲಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್ಗೆ 65.07ರೂ.ಕ್ಕೆ ತಗ್ಗಿದೆ. ಕಳೆದ ಐದು ದಿನಗಳಲ್ಲಿ ಪೆಟ್ರೋಲ್ ಬೆಲೆ 88ರಿಂದ 93 ಪೈಸೆ ಇಳಿಕೆಯಾಗಿದೆ. ಡೀಸೆಲ್ ಕೂಡ 97 ಪೈಸೆಯಿಂದ - 1.20 ರೂ.ವರೆಗೆ ಇಳಿಕೆ ಕಂಡಿದೆ.