ವಾಣಿಜ್ಯ

ಪಂಕಜಕಸ್ತೂರಿ ಅವರಿಗೆ ಬೆಸ್ಟ್ ಹೆಲ್ತ್‌ಕೇರ್ ಬ್ರಾಂಡ್ 2024 ಮಾನ್ಯತೆ

Bengaluru - Political - Shivananda Tagadur


ಪಂಕಜ ಕಸ್ತೂರಿ ಹರ್ಬಲ್ಸ್ ಇಂಡಿಯಾ (ಪಿ) ಲಿಮಿಟೆಡ್ ಪ್ರತಿಷ್ಠಿತ ಇಟಿ ಬೆಸ್ಟ್ ಹೆಲ್ತ್‌ಕೇರ್ ಬ್ರಾಂಡ್ ಮಾನ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ಅಚಲವಾದ ಬದ್ಧತೆ ಮತ್ತು ಅಸಾಧಾರಣ ಕೊಡುಗೆಗಳಿಗಾಗಿ ನೀಡುವ ಮಾನ್ಯತೆಯ ಸ್ಮರಣಿಕೆಯನ್ನು ಕೇಂದ್ರದ ಜಂಟಿ ಔಷಧ ನಿಯಂತ್ರಕರಾದ ಡಾ.ಅನ್ನಮ್ ವಿಶಾಲ ಅವರು ಹಸ್ತಾಂತರಿಸಿದರು. ಸಂಸ್ಥೆಯ ಪರವಾಗಿ ಅರುಣ್ ವಿಶಾಕ್ ನಾಯರ್ (ನಿರ್ದೇಶಕರು) ಮತ್ತು ಅಜಯ್ ಪ್ರಸಾದ್.ಜೆ (ಮಾರ್ಕೆಟಿಂಗ್ ಹೆಡ್) ಸ್ವೀಕರಿಸಿದರು.