ನವದೆಹಲಿ: ಭಾರತ್ ಸ್ಟೇಜ್-4 (ಬಿಎಸ್ 4) ವಾಹನಗಳ ಮಾರಾಟ ಮಾಡುವ ಅವಕಾಶವನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಬೇಕೆಂಬ ಆಟೋಮೊಬೈಲ್ ಕ್ಷೇತ್ರದ ಅಹವಾಲನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಏಪ್ರಿಲ್ 1ರಿಂದ ಇಂಥ ವಾಹನಗಳನ್ನು ಮಾರುವಂತಿಲ್ಲ ಹಾಗೂ ನೋಂದಾಯಿಸುವಂತಿಲ್ಲ ಎಂಬ ಆದೇಶದಲ್ಲಿ ಒಂದೇ ಒಂದು ದಿನವೂ ಬದಲಾವಣೆ ಮಾಡುವುದಿಲ್ಲ ಎಂದು ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ಪೀಠ ಖಡಾಖಂಡಿತವಾಗಿ ಹೇಳಿತು. ಮೋಟಾರು ವಾಹನಗಳು ಉಗುಳುವ ಹೊಗೆಯಿಂದ ಪರಿಸರ ಮಲಿನಗೊಳಿಸುವುದನ್ನು ನಿಯಂತ್ರಿಸಲು ಸರ್ಕಾರ ಬಿಎಸ್ ನಿಯಮವನ್ನು ರೂಪಿಸಿದೆ.
ಈ ಸರಣಿಯ ಬಿಎಸ್-4 ನಿಯಮವನ್ನು 2017 ಏಪ್ರಿಲ್ನಿಂದ ದೇಶದಾದ್ಯಂತ ಜಾರಿಗೊಳಿಸಲಾಗಿತ್ತು. ಮಾರಾಟವಾಗದೆ ಉಳಿದ ಬಿಎಸ್-4 ವಾಹನಗಳ ವಿಚಾರದಲ್ಲಿ ಡೀಲರ್ಗಳು ಚಿಂತಿತರಾಗಿದ್ದಾರೆ ಎಂದು ಆಟೋಮೊಬೈಲ್ ಡೀಲರ್ಗಳ ಸಂಘದ ಮಹಾಒಕ್ಕೂಟದ ಪರ ವಕೀಲರು ವಾದಿಸಿದರು.