ವಾಣಿಜ್ಯ

ಯುವಪ್ರತಿಭೆಗಳಿಗೆ ‘ನವರತನ್ ಜ್ಯುವೆಲರ್ಸ್’ ಉತ್ತೇಜನ - ಡಿ.18 ರಿಂದ 20 ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋ

ಬೆಂಗಳೂರು : ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಮಾದರಿ ಸಂಸ್ಥೆಯಾಗಿರುವ ‘ನವರತನ್ ಜ್ಯುವೆಲರ್ಸ್’, ಈ ನೆಲೆಯಲ್ಲಿ ಇನ್ನಷ್ಟು ಹೊಸ ಹೆಜ್ಜೆಗಳನ್ನಿಡುತ್ತಿದೆ. ಫ್ಯಾಷನ್ ಶೋನಂತಹ ಸ್ಪರ್ಧೆಗಳು ಯುವತಿಯರಿಗೆ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಪೂರ್ತಿಯಾಗಿದೆ.

ಸಂಪರ್ಕ ವಿಳಾಸ ಕಾರ್ಪೊರೇಟ್ ಕಚೇರಿ, ನಂ.120, 12ನೇ ಅಡ್ಡರಸ್ತೆ, 2ನೇ ಹಂತ, ಡಬ್ಲ್ಯುಒಸಿ ರಸ್ತೆ, ರಾಜಾಜಿನಗರ, ಬೆಂಗಳೂರು. ದೂ: 080-23019400, 405.

ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಗೌತಮ್​ ಚಂದ್ ಜೈನ್ ಅವರ ದೂರದೃಷ್ಟಿಯೊಂದಿಗೆ ಇದುವರೆಗೆ ನೂರಾರು ಯುವ ಪ್ರತಿಭೆಗಳನ್ನು ಗುರುತಿಸಿ ಅವರವರ ಕ್ಷೇತ್ರದಲ್ಲೇ ಬೆಳೆಯಲು ಆರ್ಥಿಕ, ಸಾಮಾಜಿಕವಾಗಿ ನೆರವು ಕಲ್ಪಿಸಲಾಗಿದೆ. ಈ ಸಂಸ್ಥೆಯಿಂದ ನೆರವು ಪಡೆದ ಹಲವರು ಸಮಾಜದಲ್ಲಿ ಉನ್ನತ ಸ್ಥಾನದ ನೆಲೆ ಕಂಡುಕೊಂಡಿರುವುದು ಗಮನಾರ್ಹ.

ಕರೊನಾ ಬಿಕ್ಕಟ್ಟಿನಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಇತ್ತೀಚೆಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ 100 ಟ್ಯಾಬ್​ಗಳನ್ನು ಕೊಡುಗೆಯಾಗಿ ನೀಡಲಾಯಿತು. ಬಡವರಿಗೆ ಆರ್ಥಿಕ ನೆರವು, ಹಲವು ಶಾಲಾಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತ ಬಂದಿದ್ದೇವೆ. ಸಂಸ್ಥೆಯ ನೆರವಿನಿಂದ ಹಲವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗಿರುವುದು ಹೆಮ್ಮೆಯ ವಿಷಯ ಎಂದು ಗೌತಮ್ ಚಂದ್ ಜೈನ್ ‘ವಿಜಯವಾಣಿ’ಗೆ ಹೇಳಿದರು.

ದಿ ಪ್ರಿನ್ಸೆಸ್ ಫ್ಯಾಷನ್ ಶೋ : ‘ನವರತನ್ ಜ್ಯುವೆಲರ್ಸ್’ ಡಿ.18, 19, 20ರಂದು ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಆಯೋಜಿಸಿದ್ದು, ಉದಯೋನ್ಮುಖ ರೂಪದರ್ಶಿಯರು ತಮ್ಮ ಪ್ರತಿಭೆ ಪ್ರದರ್ಶಿಸಿ ಬಹುಮಾನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ‘ವಿಜಯವಾಣಿ’ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ರಾಜಾಜಿನಗರದ ನವರತನ್ ಜ್ಯುವೆಲರ್ಸ್ ಮಳಿಗೆಯಲ್ಲಿ ಸ್ಪರ್ಧೆ ನಡೆಯಲಿದೆ. ಈಗಾಗಲೇ 30 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಬ್ರೖೆಡಲ್ ವೇರ್, ಕಾಂಟೆಂಪರರಿ ಹಾಗೂ ಕಾರ್ಪೇರೇಟ್ ವೇರ್​ನಲ್ಲಿ ಮಿಂಚಲು ರೂಪದರ್ಶಿಯರು ಸಜ್ಜಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಭವಿಷ್ಯದಲ್ಲಿ ಸಿನಿಮಾ, ಜಾಹೀರಾತು, ಪ್ರತಿಷ್ಠಿತ ಫ್ಯಾಷನ್ ಷೋಗಳಲ್ಲಿ ಭಾಗವಹಿಸಲು ಅವಕಾಶ ಸಿಗುವ ಸಾಧ್ಯತೆಗಳಿವೆ. ಎಲ್ಲ ಪ್ರತಿಭೆಗಳೂ ಒಂದೊಂದು ವಜ್ರಗಳೇ ಎಂದು ಸಂಸ್ಥೆಯ ಉಪಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..