ಯೂಟ್ಯೂಬ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ನಾವು ಯೂಟ್ಯೂಬ್ ವೀಸುತ್ತೇವೆ. ಅಡುಗೆ ಮಾಡಲು, ಹೊಸ ವಿಚಾರಗಳನ್ನು ಕಲಿಯಲು, ನ್ಯೂಸ್ ನೋಡಲು, ಸಿನಿಮಾ ವೀಸಲು, ಹಣಕಾಸು ನಿರ್ವಹಣೆ ಕಲಿಯಲು, ಇತಿಹಾಸ ತಿಳಿಯಲು ಹೀಗೆ ಹಲವು ಮಾಹಿತಿಗಾಗಿ ನಾವು ಯೂಟ್ಯೂಬ್ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ಇದೇ ಯೂಟ್ಯೂಬ್ ನಿಮ್ಮ ಜೀವನ ನಿರ್ವಹಣೆಗೆ ದಾರಿ ಮಾಡಿಕೊಡಬಲ್ಲದು. ಹೌದು, ಯೂಟ್ಯೂಬ್ ಚಾನಲ್ ಆರಂಭಿಸಿ ತಿಂಗಳಿಗೆ ಕೆಲ ಸಾವಿರಗಳಿಂದ ಹಿಡಿದು ಲಕ್ಷ ಕೋಟಿಗಳವರೆಗೆ ಸಂಪಾದಿಸುವವರಿದ್ದಾರೆ.
ಯೂಟ್ಯೂಬ್ನಲ್ಲಿ ಕೋಟಿ ಕೋಟಿ ದುಡಿಯೋ ಮಂದಿ ಇವ್ರೇ ನೋಡಿ: ಡ್ಯಾನ್ ಟಿಡಿಎಂ ಎನ್ನುವ ಹೆಸರಿನಲ್ಲಿ ಗೇಮಿಂಗ್ ಚಾನಲ್ ಇದೆ. ಇದರ ವಾರ್ಷಿಕ ಆದಾಯ 122 ಕೋಟಿ. ವೆನೋಸ್ ಗೇಮಿಂಗ್ ಯೂಟ್ಯೂಬ್ ಚಾನಲ್ ಇದೆ. ಇದರ ವಾರ್ಷಿಕಗಳಿಕೆ 114 ಕೋಟಿ. ಇನ್ನು ಭಾರತದ ವಿಚಾರಕ್ಕೆ ಬಂದ್ರೆ ಬಿಬಿಕೆ ವೈನ್ಸ್ ಅನ್ನೋ ಕಾಮಿಡಿ ಯುಟ್ಯೂಬ್ ಚಾನಲ್ ತಿಂಗಳಿಗೆ 88 ಲಕ್ಷ ಗಳಿಸುತ್ತಿದೆ. ವಿದ್ಯಾ ವೋಕ್ಸ್ ಎನ್ನುವ ಮ್ಯೂಸಿಕ್ ಆಲ್ಬಂ ಚಾನಲ್ ತಿಂಗಳಿಗೆ 74 ಲಕ್ಷ ಗಳಿಸುತ್ತಿದೆ. ಇನ್ನು ನಿಶಾ ಮಧುಬಾಲಿಕಾ ಅನ್ನೋ ಅಡುಗೆ ಚಾನಲ್ ತಿಂಗಳಿಗೆ 72 ಲಕ್ಷ ಗಳಿಸುತ್ತಿದೆ. ಟೆಕ್ನಿಕಲ್ ಗುರೂಜಿ ಅನ್ನೋ ಟೆಕ್ ಸಂಬಂಧಪಟ್ಟ ಚಾನಲ್ ತಿಂಗಳಿಗೆ 90 ಲಕ್ಷ ಸಂಪಾದಿಸುತ್ತಿದೆ. ಒಂದೆರಡು ಲಕ್ಷ ಸಂಪಾದಿಸುವ ಚಾನಲ್ಗಳಿಗಂತೂ ಲೆಕ್ಕವಿಲ್ಲ.
ಯೂಟ್ಯೂಬ್ನಲ್ಲಿ ಹಣ ಗಳಿಸಲು 6 ಮಾರ್ಗಗಳು: ಯೂಟ್ಯೂಬ್ನಲ್ಲಿ ನೀವು ಅಪ್ಲೋಡ್ ಮಾಡುವ ವಿಡಿಯೋಗಳನ್ನು ಎಷ್ಟು ಮಂದಿ ನೋಡುತ್ತಾರೆ ಎನ್ನುವುದರ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ. ಜಾಹಿರಾತು, ಅಫಿಲಿಯೇಟ್ ಮಾರ್ಕೆಟಿಂಗ್, ಮರ್ಚೆಂಡೈಸಿಂಗ್, ಸೂಪರ್ಚಾಟ್, ಜಾಯಿನ್, ಮೆಂಬರ್ ಶಿಪ್ ಹೀಗೆ ಆರು ವಿಧಗಳಲ್ಲಿ ಆದಾಯ ಗಳಿಸುವ ಅವಕಾಶ ಇಲ್ಲಿದೆ.
ಯೂಟ್ಯೂಬ್ ಚಾನಲ್ ಸಕ್ಸಸ್ ಆಗ್ಬೇಕು ಅಂದ್ರೆ?: ಜಗತ್ತಿನಾದ್ಯಂತ ಇರುವ ಯೂಟ್ಯೂಬ್ ಚಾನಲ್ಗಳಿಗೆ ಲೆಕ್ಕವಿಲ್ಲ. ಪ್ರತಿಯೊಂದು ವಿಚಾರ& ವಿಷಯಕ್ಕೂ ಹತ್ತಾರು ನೂರಾರು ಯೂಟ್ಯೂಬ್ ತಾಣಗಳಿವೆ. ಆದರೆ ಕೆಲ ಯೂಟ್ಯೂಬ್ ಚಾನಲ್ಗಳು ಮಾತ್ರ ಸಕ್ಸಸ್ ಆಗಿವೆ. ಇದಕ್ಕೆ ಕಾರಣ ಆ ಚಾನಲ್ ಮುನ್ನಡೆಸುವವರಲ್ಲಿರುವ ವಿಷಯ ಾನ. ಯೂಟ್ಯೂಬ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಚಾನಲ್ ಆರಂಭಿಸಿದರೆ ಅದು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲೆ ಇರುತ್ತೆ. ಆದರೆ ಯೂಟ್ಯೂಬ್ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುನ್ನಡೆದರೆ ಅದು ನಿಮ್ಮನ್ನು ಫೇಮಸ್ ಮಾಡುವ ಜತೆಗೆ ದುಡ್ಡನ್ನು ತಂದುಕೊಡುತ್ತೆ.
ಯೂಟ್ಯೂಬ್ನಲ್ಲಿ ಗೆಲ್ಲಲು ಇಲ್ಲಿವೆ ಸೂತ್ರ: ಯೂಟ್ಯೂಬ್ ಚಾನಲ್ ಆರಂಭಿಸಿ ಯಶಸ್ಸು ಸಾಧಿಸಬೇಕಾದರೆ ಮೊದಲನೆಯದ್ದಾಗಿ ಮುಖ್ಯವಾಗೋದು ನೀವು ಯಾವ ವಿಷಯದ ಬಗ್ಗೆ ವಿಡಿಯೋ ಮಾಡುತ್ತೀರಿ ಎನ್ನುವುದು. ವಿಡಿಯೋ ಮಾಡುವ ವಿಷಯದ ಬಗ್ಗೆ ನಿಮಗೆ ಸ್ಪಷ್ಟತೆ ಎಷ್ಟಿದೆ, ಎಲ್ಲರಿಗಿಂತಲೂ ಉತ್ತಮವಾಗಿ ಆ ವಿಷಯದ ಬಗ್ಗೆ ನೀವು ಹೇಗೆ ಾನ ಪಸರಿಸುವಿರಿ, ಎಷ್ಟು ಉತ್ತಮವಾಗಿ ಎಡಿಟಿಂಗ್ ಮಾಡುವಿರಿ, ಎಷ್ಟು ಉತ್ತಮವಾಗಿ ಟೈಟಲ್ ಕೊಡುವಿರಿ, ಯಾವ ಸಮಯದಲ್ಲಿ ವಿಡಿಯೋ ಮಾಡುವಿರಿ ಹೀಗೆ ಹತ್ತಾರು ಅಂಶಗಳು ಗಣನೆಗೆ ಬರುತ್ತವೆ.
ಕೀವರ್ಡ್ ಮತ್ತು ಎಸ್ಇಒ: ಜನರು ಯಾವ ರೀತಿ ಯೂಟ್ಯೂಬ್ನಲ್ಲಿ ಹುಡುಕುತ್ತಾರೆ ಎನ್ನುವುದನ್ನು ಮನ ದಟ್ಟು ಮಾಡಿಕೊಂಡು ಅದರಂತೆ ವಿಡಿಯೋ ಟೈಟಲ್ಗಳನ್ನು ಕೊಡುವ ಪ್ರಕ್ರಿಯೆಯೇ ಕೀವರ್ಡ್ ಮತ್ತು ಎಸ್ಇಒ. ಸರ್ಚ್ ಎಂಜಿನ್ ಆಪ್ಟಿಮೈಸೇಷನ್ ಎನ್ನುವುದು ಎಸ್ಇಒದ ವಿಸತರೂಪ. ಯೂಟ್ಯೂಬ್ ಸಕ್ಸಸ್ಗೆ ಎಸ್ಇಒ ಬಗ್ಗೆ ಅರಿತುಕೊಳ್ಳೋದು ಬಹಳ ಮುಖ್ಯ.
ಫೈನಾನ್ಸಿಯಲ್ ಫ್ರೀಡಂ ಆ್ಯಪ್ನಲ್ಲಿ ಯೂಟ್ಯೂಬ್ ಕೋರ್ಸ್
ಇಂಡಿಯನ್ ಮನಿ ಡಾಟ್ ಕಾಂನ ಯೂಟ್ಯೂಬ್ ಚಾನಲ್ ಬಗ್ಗೆ ನಿಮಗೆ ಗೊತ್ತೇ ಇದೆ. ಹಣಕಾಸು ಶಿಣ ನೀಡುವ ದೇಶದ ಪ್ರಮುಖ ಯುಟ್ಯೂಬ್ ಚಾನಲ್ಗಳ ಪೈಕಿ ಇಂಡಿಯನ್ ಮನಿ ಡಾಟ್ ಕಾಂನ ಯೂಟ್ಯೂಬ್ ಚಾನಲ್ ಮುಂಚೂಣಿ ಸಾಲಿನಲ್ಲಿದೆ. ನಮ್ಮ ಬಹಳಷ್ಟು ವೀಕರು ಯೂಟ್ಯೂಬ್ ಚಾನಲ್ ಆರಂಭಿಸಿ ಸಂಪಾದಿಸೋದು ಹೇಗೆ ಎನ್ನುವ ಬಗ್ಗೆ ತಿಳಿಸಿಕೊಡುವಂತೆ ಕೇಳುತ್ತಿದ್ದರು. ಇದನ್ನು ಪರಿಗಣಿಸಿ ಫೈನಾನ್ಸಿಯಲ್ ಫ್ರೀಡಂ ಆ್ಯಪ್ನಲ್ಲಿ ಯೂಟ್ಯೂಬ್ ಚಾನಲ್ ಆರಂಭಿಸಿ ಲ ಲ ಸಂಪಾದಿಸೋದು ಹೇಗೆ ಎನ್ನುವ ಬಗ್ಗೆ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಸಾಕಷ್ಟು ಸಂಶೋಧನೆ ಮಾಡಿದ ಬಳಿಕ ಈ ಕೋರ್ಸ್ ಅನ್ನು ಪ್ರಾಯೋಗಿಕ ಉದಾಹರಣೆಗಳ ಸಮೇತ ರೂಪಿಸಲಾಗಿದೆ. ಯೂಟ್ಯೂಬ್ ಬಗ್ಗೆ ಏನೂ ತಿಳಿದಿಲ್ಲ ಎನ್ನುವವರು ಕೂಡ ಈ ಕೋರ್ಸ್ ನೋಡಿದ ಬಳಿಕ ಸುಲಭದಲ್ಲಿ ಯೂಟ್ಯೂಬ್ ಚಾನಲ್ ಆರಂಭಿಸಿ ಸಂಪಾದಿಸಲು ಸಾಧ್ಯವಾಗುವಂತೆ ಮಾರ್ಗದರ್ಶನ ಮಾಡಲಾಗಿದೆ. ಹಾಗಾದ್ರೆ ಇನ್ನೇಕೆ ತಡ, ಫೈನಾನ್ಸಿಯಲ್ ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ ಯೂಟ್ಯೂಬ್ ಆರಂಭಿಸಿ ಲಕ್ಷ ಲಕ್ಷ ಗಳಿಸೋದು ಹೇಗೆ ಎನ್ನುವ ಕೋರ್ಸ್ ನೋಡಿ ನೀವು ಗಳಿಕೆ ಮಾಡಲು ಶುರು ಮಾಡಿ.
ಕೋರ್ಸ್ನಲ್ಲಿ ಏನಿದೆ ಮಾಹಿತಿ?
ಕೋರ್ಸ್ನ ಪರಿಚಯ : ವಿವಿಧ ರೀತಿಯ ಯೂಟ್ಯೂಬ್ ಚಾನಲ್ಗಳು ? ಯೂಟ್ಯೂಬ್ ಆರಂಭಿಸೋದು ಹೇಗೆ? ಯೂಟ್ಯೂಬ್ ವಿಡಿಯೋ ಮಾಡೋದು ಹೇಗೆ? ?ಯೂಟ್ಯೂಬ್ ಚಾನಲ್ ಸ್ಪೆಷಾಲಿಟಿ ?ಯೂಟ್ಯೂಬ್ ವಿಡಿಯೋ ಅಪ್ ಲೋಡ್ ಮಾಡೋದು ಹೇಗೆ? ಯೂಟ್ಯೂಬ್ ಕಸ್ಟಮೈಝೇಷನ್ ?ಯೂಟ್ಯೂಬ್ ಚಾನಲ್ ನೀತಿ ನಿಯಮ ?ಯೂಟ್ಯೂಬ್ ಅನಾಲಿಟಿಕ್ಸ್ ಬಳಕೆ ಹೇಗೆ? ಹೆಚ್ಚು ಸಬ್ಸ್ಕ್ರೆರ್ಬಸ್ ಪಡೆಯೋದು ಹೇಗೆ? ಯೂಟ್ಯೂಬ್ ಚಾನಲ್ ಹಣ ಗಳಿಕೆ ಹೇಗೆ? ಯೂಟ್ಯೂಬ್ನಿಂದ ಹಣ ಸಂಪಾದಿಸಲು ವಿವಿಧ ಮಾರ್ಗಗಳು? ಯೂಟ್ಯೂಬ್ ಅನ್ನು ಬಿಸಿನೆಸ್ ಆಗಿಸೋದು ಹೇಗೆ?