ಕರಕುಶಲ ವಸ್ತುಗಳ ಮಾರುಕಟ್ಟೆ: ದೇಶದ ಕಲಾವಿದರು ರಚಿಸಿದ ಕಲಾಕೃತಿಗಳು, ಕುಶಲಕರ್ವಿುಗಳು ಸಿದ್ಧಪಡಿಸಿದ ಕರಕುಶಲ ಕಲಾ ಸಾಮಗ್ರಿಗಳಿಗೆ ವಿಶ್ವಾದ್ಯಂತ ಉತ್ತಮ ಮಾರುಕಟ್ಟೆ ಇದೆ. ಜಾಗತಿಕ ಮಟ್ಟದಲ್ಲಿ ಕರಕುಶಲ ವಸ್ತುಗಳು ಮತ್ತು ಅಪರೂಪದ ಕಲಾಕೃತಿಗಳ ಮಾರುಕಟ್ಟೆ ಮೌಲ್ಯ ಸುಮಾರು 75 ಲಕ್ಷ ಕೋಟಿ ರೂ. ಇದೆ. ಈ ಪೈಕಿ ಭಾರತ ಸುಮಾರು 15,000 ಕೋಟಿ ರೂ. ಮೌಲ್ಯದ ಪಾಲನ್ನು ಮಾತ್ರ ಹೊಂದಿದೆ. ಹಾಗಾಗಿ ಹೊಸದಾಗಿ ಉದ್ಯಮಕ್ಕೆ ಬರಬೇಕು ಎಂದು ಮನಸ್ಸು ಮಾಡುವವರಿಗೆ ಸಾಕಷ್ಟು ಅವಕಾಶಗಳಿವೆ.
ಯಾವ ದೇಶದಿಂದ ಬೇಡಿಕೆ?: ಭಾರತದ ಕರಕುಶಲ ವಸ್ತುಗಳಿಗೆ ಹೆಚ್ಚು ಬೇಡಿಕೆ ಬರುತ್ತಿರುವುದು ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಜರ್ಮನಿಯಿಂದ. ಅಮೆರಿಕ ಮತ್ತು ಯುರೋಪ್ ದೇಶಗಳು ಭಾರತದ ಕರಕುಶಲ ವಸ್ತುಗಳ ಪ್ರಮುಖ ರಫ್ತು ವಹಿವಾಟಿನ ಕೇಂದ್ರಗಳಾಗಿವೆ. ಶೇ.60 ಕರಕುಶಲ ವಸ್ತುಗಳು ಈ ದೇಶಗಳಿಗೆ ರವಾನೆಯಾಗುತ್ತಿವೆ. ಕರಕುಶಲ ಕಲಾ ಸಾಮಗ್ರಿಗಳಲ್ಲಿ ಅಮೆರಿಕಕ್ಕೆ ಶೇ.28, ಯುಎಇಗೆ ಶೇ.11, ಜರ್ಮನಿ, ಬ್ರಿಟನ್ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ತಲಾ ಶೇ.5 ರಫ್ತಾಗುತ್ತವೆ. ಪ್ರಸ್ತುತ ರಫ್ತಾಗುವ ಕರಕುಶಲ ವಸ್ತುಗಳಲ್ಲಿ ಶೇ.18.5 ಲೋಹದ ಕಲಾ ವಸ್ತುಗಳು, ಶೇ.15.3 ಕಟ್ಟಿಗೆ ವಸ್ತುಗಳು, ಶೇ.12.4 ಕೈನಿಂದ ಮುದ್ರಣವಾದ ಬಟ್ಟೆಗಳು, ಶೇ.5.7 ಆಭರಣಗಳು ಸೇರಿವೆ.
ಸಾಂಸ್ಕೃತಿಕ ಪ್ರಾಮುಖ್ಯತೆ: ಯಾವುದೇ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವಲ್ಲಿ ಕರಕುಶಲ ವಸ್ತುಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಕರಕುಶಲ ವಸ್ತುಗಳು ಶ್ರೀಮಂತ ಸಂಪ್ರದಾಯ, ಪರಂಪರೆ, ಸಂಸ್ಕೃತಿ, ಕೌಶಲಗಳು ಮತ್ತು ಪ್ರತಿಭೆಗಳನ್ನು ಜನರ ಜೀವನಶೈಲಿ ಮತ್ತು ಇತಿಹಾಸದೊಂದಿಗೆ ಸಂಯೋಜಿಸುವ ಮಾಧ್ಯಮವಾಗಿವೆ.
ಆರ್ಥಿಕ ಪ್ರಾಮುಖ್ಯತೆ: ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಕರಕುಶಲ ವಸ್ತುಗಳು ಬಹಳ ಮುಖ್ಯ. ಕರಕುಶಲ ವಸ್ತುಗಳು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕತೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಡಿಮೆ ಬಂಡವಾಳ ಹೂಡಿಕೆಯೊಂದಿಗೆ ಸಾಕಷ್ಟು ಉದ್ಯೋಗಾವಕಾಶ ಒದಗಿಸುವುದಲ್ಲದೆ, ರಫ್ತಿನ ಮೂಲಕ ವಿದೇಶಿ ಗಳಿಕೆಗೂ ಮಾಧ್ಯಮವಾಗಿವೆ.
ಕರಕುಶಲ ವೈವಿಧ್ಯತೆ: ಗಂಧದ ನಾಡು ಎಂದೇ ಖ್ಯಾತಿ ಪಡೆದ ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ತಯಾರಾಗುವ ಶ್ರೀಗಂಧದ ಕಲಾಕೃತಿಗಳು ವಿಶ್ವಾದ್ಯಂತ ಜನಪ್ರಿಯತೆ ಪಡೆದಿವೆ. ಉತ್ತರ ಕರ್ನಾಟಕ ಭಾಗದ ಬಿದರಿಕಲೆಯೂ ಪ್ರಪಂಚದಾದ್ಯಂತ ಖ್ಯಾತಿ ಪಡೆದಿದೆ. ಬೀದರ್ ನಗರವು ಈ ಕಲೆಗಾಗಿಯೇ ಪ್ರಸಿದ್ಧವಾಗಿದೆ. ಚನ್ನಪಟ್ಟಣದ ಬೊಂಬೆಗಳು ಜಾಗತಿಕವಾಗಿ ಹೆಸರುವಾಸಿಯಾಗಿವೆ. ಶ್ರೀಗಂಧ, ರೋಸ್ವುಡ್(ಬೀಟೆ ಮರ) ಉತ್ಪನ್ನಗಳು, ವಿವಿಧ ಲೋಹಗಳಿಂದ ತಯಾರಿಸಲಾದ ಕಲಾಕೃತಿಗಳು, ಬೊಂಬೆಗಳು ಮಾರುಕಟ್ಟೆಯಲ್ಲಿ ಕಲಾಸಕ್ತರ ಗಮನಸೆಳೆಯುತ್ತವೆ. ಇವುಗಳ ಜತೆಗೆ ಕಸೂತಿ, ಬಿದಿರಿನ ಉತ್ಪನ್ನಗಳು, ಅನುಕರಣೆ ಆಭರಣ, ವರ್ಣಚಿತ್ರಗಳು, ಮಣ್ಣಿನ ಪಾತ್ರೆ, ಪೇಪರ್ ಕ್ರಾಫ್ಟ್, ಸೆಣಬಿನ ಉತ್ಪನ್ನಗಳು, ಟೆರಾಕೋಟಾ ವಸ್ತುಗಳು, ಚಿತ್ರಕಲೆ, ಚರ್ಮದ ಉತ್ಪನ್ನಗಳು ಮತ್ತು ಇತರ ವಿವಿಧ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಇದೆ.
ಸರ್ಕಾರದ ಬಂಬಲ: ಬಾಬಾಸಾಹೇಬ್ ಅಂಬೇಡ್ಕರ್ ಹಸ್ತಶಿಲ್ಪ್ ವಿಕಾಸ್ ಯೋಜನೆ- ಸಮಗ್ರ ವಿನ್ಯಾಸ ಮತ್ತು ತಂತ್ರಜ್ಞಾನ ಅಭಿವೃದ್ಧಿ ಯೋಜನೆಯ ರೂಪದಲ್ಲಿ ಬೆಂಬಲವನ್ನು ಒದಗಿಸಲಾಗುತ್ತದೆ. ರಫ್ತುದಾರರು ಮತ್ತು ಉದ್ಯಮಿಗಳಿಗೆ ಸಹಾಯ ಮತ್ತು ವಾಣಿಜ್ಯ ಮಾರುಕಟ್ಟೆ ಬೆಂಬಲ ಲಭ್ಯ.
ಮೆಗಾ ಕ್ಲಸ್ಟರ್ ಯೋಜನೆ- ಉದ್ಯೋಗವನ್ನು ಸೃಷ್ಟಿಸುವುದು ಮತ್ತು ಅಸ್ತಿತ್ವದಲ್ಲಿರುವ ಕುಶಲಕರ್ವಿುಗಳ ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶ.
ಸ್ಟಾರ್ಟ್ ಅಪ್ ಇಂಡಿಯಾ - ಈ ಯೋಜನೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಹಣಕಾಸಿನ ಲಾಭ ಪಡೆಯಬಹುದು. ರಾಜೀವ್ ಗಾಂಧಿ ಶಿಲ್ಪಿ ಸ್ವಾಸ್ಥ್ಯ ಬಿಮಾ ಯೋಜನೆ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದಲೂ ಸಾಕಷ್ಟು ಯೋಜನೆಗಳಿವೆ
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಹ್ಯಾಂಡಿಕ್ರಾಫ್ಟ್ ಬಿಜಿನೆಸ್ ಕೋರ್ಸ್: ಹ್ಯಾಂಡಿಕ್ರಾಫ್ಟ್ ಉದ್ಯಮದ ಮೌಲ್ಯವನ್ನು ಅರಿತ ನಂತರ ನೀವು ಕೂಡ ಈ ಉದ್ಯಮ ದಲ್ಲಿ ಮುನ್ನಡೆದು ಯಶಸ್ಸಿನ ಜತೆಗೆ ಹಣ ಗಳಿಸಬೇಕು ಮತ್ತು ದೇಶದ ಉನ್ನತಿಯಲ್ಲಿ ಭಾಗಿಯಾಗಬೇಕು ಎಂದೆನಿಸಿದರೇ, ನಿಮಗೆ ಮಾರ್ಗದರ್ಶನ ನೀಡಲು ಇದೇ ಉದ್ಯಮದಲ್ಲಿ ಯಶಸ್ಸನ್ನು ಗಳಿಸಿ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿರುವ ಉದ್ಯಮಿಗಳು ಇಂಡಿಯನ್ ಮನಿ . ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್ ಮುಖೇನ ಸಿದ್ಧ ಇದ್ದಾರೆ. ನೀವು ಈ ಆಪ್ ಅನ್ನು ಡೌನ್ಲೋಡ್ ಮಾಡಿ ಹ್ಯಾಂಡಿಕ್ರಾಫ್ಟ್ ಬಿಜಿನೆಸ್ನಲ್ಲಿ ಕೈ ತುಂಬಾ ಸಂಪಾದಿಸೋದು ಹೇಗೆ ಎಂಬ ಕೋರ್ಸ್ ಅನ್ನು ನೋಡುವುದೊಂದೇ ಬಾಕಿ. ಮತ್ತೇಕೆ ತಡ ಆದಷ್ಟು ಬೇಗ ಕೋರ್ಸ್ ನೋಡಿ ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ.