ವಾಣಿಜ್ಯ

ಎಸ್​ವಿಸಿ ಬ್ಯಾಂಕ್​ನಿಂದ ಸಾಲಮೇಳ; ಆಕರ್ಷಕ ಕೊಡುಗೆ ಪ್ರಕಟ

lakshmihegde

ಬೆಂಗಳೂರು: ಎಸ್​ವಿಸಿ ಕೋ-ಆಪರೇಟಿವ್ ಬ್ಯಾಂಕ್ ಲಿ. ಹೊಸ ವರ್ಷ ಆಚರಣೆ ನಿಮಿತ್ತ ‘ಸಾಲ ಮೇಳ’ ನಡೆಸುತ್ತಿದೆ. ಈ ಮೇಳದ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನೂ ನೀಡಲಾಗುತ್ತಿದೆ.

ದೇಶದ 11 ರಾಜ್ಯಗಳಲ್ಲಿ ಇರುವ ಎಸ್​ವಿಸಿಯ 198 ಶಾಖೆಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಮೇಳವು ಜ.6ರಂದು ಆರಂಭವಾಗಿದ್ದು, ಮಾ.31 ರವರೆಗೆ ಮುಂದುವರಿಯಲಿದೆ. ವಾಹನ, ಮನೆ, ವ್ಯವಹಾರ ಮತ್ತು ವೈಯಕ್ತಿಕ ಸಾಲಕ್ಕೆ ಆಕರ್ಷಕ ಬಡ್ಡಿಯ ದರ ನಿಗದಿಪಡಿಸಲಾಗಿದೆ. ಚಿನ್ನದ ಮೇಲಿನ ಸಾಲ (ವಾರ್ಷಿಕ ಶೇ.10.5 ಮತ್ತು ಶೂನ್ಯ ಪ್ರಕ್ರಿಯೆ ಶುಲ್ಕ), ಅಡಮಾನ ಸಾಲ, ಕಚೇರಿ ಖರೀದಿ ಸಾಲ (ಶೇ.10.5), ಗೃಹ ಸಾಲ (ಶೇ.8.2), ವೈದ್ಯಕೀಯ ಸಾಲ (ಶೇ.9.9), ಕಾರು ಸಾಲ (ಶೇ.8.9), ಶಿಕ್ಷಣ ಸಾಲ (ಶೇ.10.65) ಪಡೆಯಬಹುದಾಗಿದೆ.

ಅಲ್ಲದೆ, ಉಳಿತಾಯದ ಉತ್ಪನ್ನಗಳ ಮೇಲೂ ಆಕರ್ಷಕ ಬಡ್ಡಿ ದರ ನೀಡುತ್ತಿದೆ. ನಿಶ್ಚಿತ ಠೇವಣಿ (ಶೇ.7.35 ಜತೆಗೆ ಹಿರಿಯ ನಾಗರಿಕರಿಗೆ 0.25 ಹೆಚ್ಚುವರಿ ಬಡ್ಡಿ), ಚಾಲ್ತಿ ಮತ್ತು ಉಳಿತಾಯ ಖಾತೆಯ ಮೇಲೂ ವಿವಿಧ ರೀತಿಯ ಕೊಡುಗೆ ನೀಡಲಾಗುತ್ತಿದೆ. ತಮ್ಮ ಮೊಬೈಲ್​ನಿಂದ ಔಣಅಘ ಠಿಟ 9820620454 ಎಂದು ಸಂದೇಶ ಕಳುಹಿಸಿ ಸಾಲ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ದೂ: 18003132120 ಸಂರ್ಪಸಬಹುದು.

ಹೊಸ ವರ್ಷ ಬಂತೆಂದರೆ ಸಾಲು ಸಾಲು ಹಬ್ಬಗಳು ಬರುತ್ತವೆ. ಜನರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿ ರುತ್ತಾರೆ. ಅವರೆಲ್ಲರ ಕನಸು ನನಸು ಮಾಡಲು ಎಸ್​ವಿಸಿ ಬ್ಯಾಂಕ್ ಆಕರ್ಷಕ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತಿದೆ. | ಸಂಜಯ್ ರಾಜೋರಿಯಾ, ಎಸ್​ವಿಎಸ್ ಬ್ಯಾಂಕ್​ನ ಡೆಪ್ಯೂಟಿ ಜನರಲ್ ಮ್ಯಾನೇಜರ್