ವಾಣಿಜ್ಯ

ಶೇಂಗಾ ಖರೀದಿಗೂ ಕರೊನಾ ಕಾಟ

ಕೊಂಡ್ಲಹಳ್ಳಿ : ಶೇಂಗಾ ಖರೀದಿ ಮೇಲೆ ಕರೊನಾ ಕರಿನೆರಳು ಬಿದ್ದಿದೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಆಮದು-ರಫ್ತು ಸ್ಥಗಿತಗೊಂಡ ಕಾರಣ ವರ್ತಕರು ಪರದಾಡುತ್ತಿದ್ದಾರೆ.

ಮೊಳಕಾಲ್ಮೂರು, ಕೊಂಡ್ಲಹಳ್ಳಿ ಭಾಗದಲ್ಲಿ ಶೇಂಗಾ ಪ್ರಮುಖ ಬೆಳೆ. ರೈತರಿಂದ ಶೇಂಗಾಕಾಯಿ ಖರೀದಿಸಿದ್ದ ವರ್ತಕರು ನೂರಾರು ಕ್ವಿಂಟಾಲ್ ಮಾಲು ದಾಸ್ತಾನು ಇಟ್ಟುಕೊಂಡಿದ್ದಾರೆ.

ಇಲ್ಲಿಂದ ಬೆಂಗಳೂರು, ಮಹಾರಾಷ್ಟ್ರ, ಚನ್ನೈ, ಚೀನಾ, ಇಂಡೋನೇಷ್ಯಾ ಇತರ ಭಾಗಗಳಿಗೆ ರಫ್ತು ಮಾಡುತ್ತಿದ್ದರು. ಆದರೆ ದೇಶದೆಲ್ಲೆಡೆ ಕರೋನಾ ನಿಷೇಧಾಜ್ಞೆ ಪರಿಣಾಮ ಶೇಂಗಾ ಆಮದು-ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ.

ಕೊಳ್ಳುವವರಿಲ್ಲದೆ ಶೇಂಗಾ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎನ್ನುತ್ತಾರೆ ಮೊಗಲಹಳ್ಳಿಯ ಶೇಂಗಾ ವರ್ತಕ ಎಂ.ಇ.ಮಂಜುನಾಥ್.