ವಾಣಿಜ್ಯ

ಫ್ಯೂಯೆಲ್ ಇಕಾನಮಿಯ ಸ್ಟೈಲಿಶ್​ ಕಿಯಾ ಸೋನೆಟ್​ ಬುಕ್ಕಿಂಗ್ ಶುರು

ನವದೆಹಲಿ: ಕಿಯಾ ಮೋಟಾರ್ಸ್​ ಇತ್ತೀಚೆಗಷ್ಟೇ ಕಿಯಾ ಸೋನೆಟ್​ ಕಾಂಪ್ಯಾಕ್ಟ್​ ಎಸ್​ಯುವಿಯನ್ನು ಅನಾವರಣಗೊಳಿಸಿದ್ದು, ಅದರ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಅದರ ಮೈಲೇಜ್​ ವಿವರ ಇಂದು ಬಹಿರಂಗವಾಗಿದ್ದು, ಮೊದಲ ದಿನವೇ 6,500ಕ್ಕೂ ಹೆಚ್ಚು ಬುಕ್ಕಿಂಗ್ ಆಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಕಿಯಾ ಮೋಟಾರ್ಸ್​ ಇಂಡಿಯಾ ತನ್ನ ಸ್ಟೈಲಿಶ್ ಲುಕ್ ಮೂಲಕ ಗಮನಸೆಳೆದಿದೆ. ಅಷ್ಟೇ ಅಲ್ಲ, ಅದರ ಇಂಟೀರಿಯರ್ಸ್ ಮತ್ತು ಪ್ರಯಾಣಿಕ ಸೌಲಭ್ಯಗಳು ಕೂಡ ಆರಾಮದಾಯಕ ಪ್ರಯಾಣದ ಭರವಸೆ ನೀಡಿದ್ದು ನಿರೀಕ್ಷೆಯನ್ನು ಹುಟ್ಟಿಸಿದೆ. ಕಿಯಾ ಸೋನೆಟ್​ ಮೂರು ಇಂಜಿನ್ ಆಪ್ಶನ್​, ಐದು ಗೇರ್ ಬಾಕ್ಸ್​ ಕಾನ್ಫಿಗರೇಷನ್ ಹೊಂಧಿದೆ. ಆರಂಭಿಕ ಹಂತದ ಕಿಯಾ ಸೋನೆಟ್ 83 ಪಿಎಸ್​ ​ 1.2 ಲೀಟರ್​ ಪೆಟ್ರೋಲ್ ಎಂಜಿನ್​, 5 ಸ್ಪೀಡ್ ಮ್ಯಾನುವಲ್​ ನಲ್ಲಿ ಲಭ್ಯವಿದೆ. ಇದರ ಫ್ಯೂಯೆಲ್ ಇಕಾನಮಿ ಲೀಟರಿಗೆ 18.4 ಕಿ.ಮೀ.

ಇನ್ನೊಂದು 120 ಪಿಎಸ್​, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿದ್ದು, ಎರಡು ಗೇರ್​ಬಾಕ್ಸ್ ಚಾಯ್ಸ್​ ಜತೆಗೆ 6 ಸ್ಪೀಡ್​ ಐಎಂಟಿ ಮತ್ತು 7-ಸ್ಪೀಡ್​ ಡಿಸಿಟಿ ಆಟೋಮ್ಯಾಟಿಕ್​ನಲ್ಲಿ ಲಭ್ಯವಿದೆ. ಈ ಹಿಂದಿನ ಕಾನ್​ಫಿಗರೇಶನ್​ನಲ್ಲಿ ಸೋನೆಟ್​ ನ ಫ್ಯೂಯೆಲ್ ಇಕಾನಿಮ 18.2 ಕಿ.ಮೀ. ಮಾತ್ರ ಇತ್ತು. ನಂತರ ಇದು 18.3 ಆಗಿತ್ತು.

ಮತ್ತೊಂದು 1.5 ಲೀಟರ್ ಡೀಸೆಲ್ ಇಂಜಿನ್​ (110 ಪಿಎಸ್​ ಮತ್ತು 115 ಪಿಎಸ್​ಗಳಲ್ಲಿ) ಲಭ್ಯವಿದ್ದು, 6 ಸ್ಪೀಡ್​ ಮ್ಯಾನುವಲ್​ ನಲ್ಲಿ ಫ್ಯುಯೆಲ್ ಎಫಿಷಿಯೆನ್ಸಿ ಪ್ರತಿ ಲೀಟರ್​ಗೆ 24.1 ಕಿ.ಮೀ. ಸಿಕ್ಕರೆ, 6- ಸ್ಪೀಡ್​ ಟೋರ್ಕ್​ ಕನ್​ವರ್ಟರ್ ಸೆಟಪ್​ನಲ್ಲಿ ಲೀಟರಿಗೆ 19 ಕಿ.ಮೀ. ಕಾರ್ಯಕ್ಷಮತೆ ತೋರುತ್ತದೆ.

ಮಾರುತಿ ವಿತಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಮಹಿಂದ್ರಾ ಎಕ್ಸ್​ಯುವಿ300 ಮತ್ತು ಮಾರುಕಟ್ಟೆಗೆ ಬರುತ್ತಿರುವ ಟೊಯೊಟಾ ಅರ್ಬನ್ ಕ್ರೂಸರ್​, ನಿಸ್ಸಾನ್ ಮ್ಯಾಗ್ನೈಟ್​ಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೋನೆಟ್​ ಪರಿಗಣಿಸಲ್ಪಟ್ಟಿದೆ. ಇದರ ಮಾರಾಟ ಮುಂದಿನ ತಿಂಗಳಿಂದ ಆರಂಭವಾಗಲಿದೆ. (ಏಜೆನ್ಸೀಸ್)