ಬೆಂಗಳೂರು: ದೇಶದ ಅತಿ ದೊಡ್ಡ ಫುಡ್ ಕಂಪನಿಯಾಗಿರುವ ಐಟಿಸಿಯು ಹೊಸದಾಗಿ ಫ್ಯಾಬೆಲ್ ಚಾಕೊಲೇಟ್ಸನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 1,500 ರೂ.ಇದ್ದು, ಆನ್‌ಲೈನ್‌ನಲ್ಲಿ ಲಭ್ಯವಿದೆ.
ವೆಬಿನಾರ್‌ನಲ್ಲಿ ಚಾಕ್‌ಲೇಟ್ ಬಿಡುಗಡೆ ಮಾಡಿದ ಕಂಪನಿಯ ಸಿಇಒ ಅನುಜ್ ರುಸ್ತಗಿ, ಐಟಿಸಿ ಫ್ಯಾಬೆಲ್ ವೆಬ್‌ಸೈಟ್‌ನಲ್ಲಿ ಗ್ರಾಹಕರು ಚಾಕ್‌ಲೇಟ್‌ಗಳನ್ನು ಬುಕ್ ಮಾಡಬಹುದು. ರುಚಿಕರವಾಗಿರುವ ಈ ಚಾಕ್‌ಲೇಟ್‌ಗಳಿಗೆ ಗ್ರಾಹಕರಿಂದ ಈಗಾಗಲೇ ಬೇಡಿಕೆ ಬರಲಾರಂಭಿಸಿದೆ. ಯಾವುದೇ ಕೃತಕ ವಸ್ತುಗಳನ್ನು ಬಳಸದೆ ಗ್ರಾಹಕರ ಅಭಿರುಚಿಗೆ ತಕ್ಕಂತ ಇದನ್ನು ತಯಾರಿಸಲಾಗಿದೆ. ನೈಸರ್ಗಿಕ ಸುವಾಸನೆ ಬೀರಲಿರುವ ಇದು ದೇಶದ ಆರು ಮೆಟ್ರೋ ನಗರಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದಿದ್ದಾರೆ.