ವಾಣಿಜ್ಯ

ಐದೇ ದಿನದಲ್ಲಿ 8.10 ರೂಪಾಯಿಗೆ ಕುಸಿಯಿತು ಲಕ್ಷ್ಮೀ ವಿಲಾಸ ಬ್ಯಾಂಕಿನ ಷೇರು ದರ

ನವದೆಹಲಿ: ಲಕ್ಷ್ಮೀ ವಿಲಾಸ ಬ್ಯಾಂಕಿನ ಮೇಲೆ ಒಂದು ತಿಂಗಳ ಮೊರಟೋರಿಯಂ ಹೇರಿದ ನಂತರದ ಐದು ದಿನಗಳಲ್ಲಿ ಷೇರು ದರ 8.10 ರೂಪಾಯಿಗೆ ಕುಸಿದಿದೆ. ಷೇರುಗಳು ಶೇಕಡ 48ಕ್ಕೂ ದರ ಕಳೆದುಕೊಂಡಿದ್ದು, ಹೂಡಿಕೆದಾರರು ಬಹಳ ನಷ್ಟ ಅನುಭವಿಸಿದ್ದಾರೆ.

ಬ್ಯಾಂಕ್ ವಹಿವಾಟಿನ ಕುರಿತು ಸಾಕಷ್ಟು ನೆಗೆಟಿವ್ ಸುದ್ದಿಗಳು ಪ್ರಚಾರದಲ್ಲಿರುವ ಪರಿಣಾಮ ಇದಾಗಿದೆ. ನವೆಂಬರ್ 17ರಂದು ಪ್ರತಿ ಷೇರಿನ ಬೆಲೆ 15.55 ರೂಪಾಯಿ ಇತ್ತು. 18ರಂದು ಇದು 12.45 ರೂಪಾಯಿ ಆಗಿದ್ದು, ನವೆಂಬರ್ 23ರಂದು 8.10 ರೂಪಾಯಿ ಆಗಿದೆ.

ಸರ್ಕಾರ ಮಂಗಳವಾರ ಬ್ಯಾಂಕಿನ ಮೊರಟೋರಿಯಂ ಘೋಷಿಸಿತ್ತು. ಠೇವಣಿದಾರರು ಹಣ ನಗದೀಕರಣಕ್ಕೆ 25,000 ರೂಪಾಯಿ ಮಿತಿಯನ್ನೂ ಹೇರಿತ್ತು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿಂದೀಚೆಗೆ ಈ ರೀತಿ ಮೊರಟೋರಿಯಂ ಎದುರಿಸುತ್ತಿರುವ ಮೂರನೇ ಬ್ಯಾಂಕ್ ಎಲ್​ವಿಬಿ. ಇದಕ್ಕೂ ಮುನ್ನ ಯೆಸ್​ ಬ್ಯಾಂಕ್​, ಪಿಎಂಸಿ ಕೋಆಪರೇಟಿವ್ ಬ್ಯಾಂಕ್​ ಗಳು ಕೂಡ ಮೊರಟೋರಿಯಂ ಎದುರಿಸಿದ್ದವು. (ಏಜೆನ್ಸೀಸ್)