ವಾಣಿಜ್ಯ

ಭಾರತೀಯ ಸ್ಟೇಟ್ ಬ್ಯಾಂಕ್ ಬಡ್ಡಿದರ ಇಳಿಕೆ; ಪರಿಷ್ಕೃತ ಬಡ್ಡಿದರ ಜನವರಿ 1ರಿಂದ ಜಾರಿ

lakshmihegde

ನವದೆಹಲಿ: ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್​ಬಿಐ ಬಾಹ್ಯ ಮೂಲಾಂಶ ಬಡ್ಡಿ ದರದಲ್ಲಿ (ಎಕ್ಸ್​ಟ್ರನಲ್ ಬೆಂಚ್​ವಾರ್ಕ್ ಬೇಸ್ಡ ರೇಟ್- ಇಬಿಆರ್) 25 ಅಂಶವನ್ನು ತಗ್ಗಿಸಿದೆ.

ಅಂದರೆ, ಸಾಲದ ಮೇಲಿನ ಬಡ್ಡಿದರ ಶೇ. 8.05ರಿಂದ ಶೇ. 7.80ಕ್ಕೆ ಇಳಿಕೆಯಾಗಿದೆ. ಪರಿಷ್ಕತ ಬಡ್ಡಿದರ ಜ.1ರಿಂದ ಜಾರಿಗೆ ಬರಲಿದೆ. ಬಡ್ಡಿದರ ತಗ್ಗಿರುವುದರಿಂದ ಗೃಹ ಸಾಲ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಸಾಲದ ಮೇಲಿನ ಬಡ್ಡಿ ಕಡಿಮೆಯಾಗಲಿದೆ. ಹೊಸ ಗೃಹ ಸಾಲವು ಶೇ. 7.90ರ ವಾರ್ಷಿಕ ಬಡ್ಡಿ ದರದಲ್ಲಿ ದೊರೆಯಲಿದೆ.

ಪ್ರಸ್ತುತ ಆರ್​ಬಿಐ ರಿಪೊ ದರ ಶೇ. 5.15 ಇದ್ದು, ಎಸ್​ಬಿಐ ಶೇ. 8.15 ಬಡ್ಡಿ ವಿಧಿಸುತ್ತಿದೆ. ಇದು ಆರ್​ಬಿಐ ಮಾರ್ಗದರ್ಶಿಗಿಂತ 265 ಮೂಲಾಂಶ ಹೆಚ್ಚಿನದ್ದಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್​ಗಳು ಪ್ರತಿ 3 ತಿಂಗಳಿಗೊಮ್ಮೆ ಇಬಿಆರ್ ದರವನ್ನು ಪರಿಷ್ಕರಣೆ ಮಾಡುತ್ತವೆ.