ವಾಣಿಜ್ಯ

ಸ್ಥಳಿಯ ಉತ್ಪಾದನೆ ಉತ್ತೇಜನಕ್ಕೆ 180 ಶತಕೋಟಿ ರೂ.?

ನವದೆಹಲಿ: ರಾಸಾಯನಿಕಗಳು, ಶಿಪ್ಪಿಂಗ್​ ಕಂಟೈನರ್​ಗಳು ಮತ್ತು ಲಸಿಕೆ ತಯಾರಿಕೆ ಸೇರಿ ಆರು ಹೊಸ ವಲಯಗಳಲ್ಲಿ ಸ್ಥಳಿಯ ಉತ್ಪಾದನೆ ಉತ್ತೇಜಿಸಲು ಭಾರತ 180 ಶತಕೋಟಿ ರೂಪಾಯಿಗಳ (2.2 ಶತಕೋಟಿ) ಪೋತ್ಸಾಹ ನೀಡಲು ಮುಂದಾಗಿದೆ.

ಈ ಪ್ರಸ್ತಾವನೆಯು ದೇಶದ 1.97 ಟ್ರಿಲಿಯನ್​ ರೂಪಾಯಿ ಉತ್ಪಾದನೆ&ಸಂಯೋಜಿತ ಪೋತ್ಸಾಹ ಯೋಜನೆಯ (ಪಿಎಲ್​ಐ) ಭಾಗವಾಗಿದೆ. ಇದು 2020ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಎಲೆಕ್ಟ್ರಾನಿಕ್​ ಉತ್ಪನ್ನಗಳಿಂದ ಡ್ರೋನ್​ಗಳವರೆಗಿನ 14 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದೆ. ಇದುವರೆಗೆ ಪಿಎಲ್​ಐ ಇನ್ಸೆಂಟಿವ್​ಗಳ ಒಂದು ಭಾಗವನ್ನು ಕ್ಲೆಮ್​ ಮಾಡಲಾಗಿದೆ. ಬಳಕೆಯಾಗದ ಹಣವನ್ನು ಹೊಸ ವಲಯಗಳಿಗೆ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.

ಪಿಎಲ್​ಐ ಯೋಜನೆಗೆ ಸೇರಬಹುದಾದ 6 ಹೊಸ ವಲಯಗಳಲ್ಲಿ ಆಟಿಕೆಗಳು, ಬೈಸಿಕಲ್​ಗಳು, ಚರ್ಮ ಮತ್ತು ಪಾದರೆಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಒಂದು ದಶಕದಿಂದ ಉತ್ಪಾದನೆಯಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಸಲು ಹೆಣಗಾಡುತ್ತಿರುವ ವಿಶಾಲವಾದ ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸಲು ಪಿಎಲ್​ಐ ಯೋಜನೆಯನ್ನು ಭಾರತವು ನಿರ್ಣಾಯಕವೆಂದು ಪರಿಗಣಿಸುತ್ತದೆ ಎಂದಿದ್ದಾರೆ.