ರಿಯಲ್ ಎಸ್ಟೇಟ್ಗಿಂತ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಲಾಭವಿದೆಯಾ? ಚಿನ್ನದ ಬೆಲೆ 1 ಲಕ್ಷಕ್ಕೆ ಕುಸಿಯುತ್ತಾ? ಹಣಕಾಸು-ಹೂಡಿಕೆ ತಜ್ಞ ರುದ್ರಮೂರ್ತಿ ಉಪಯುಕ್ತ ಸಲಹೆ ಇಲ್ಲಿದೆ... CA B.V. Rudramurthy
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಯುದ್ಧಗಳು, ರಾಜಕೀಯ ಅಸ್ಥಿರತೆ ಹಾಗೂ ಸರಣಿ ನೈಸರ್ಗಿಕ ವಿಕೋಪಗಳಿಂದಾಗಿ ವಿಶ್ವ ಆರ್ಥಿಕತೆಯಲ್ಲಿ ತೀವ್ರ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದು, ಇದರ ನೇರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯ ಮೇಲೆಯೂ ಬೀಳುತ್ತಿದೆ. ಇಂತಹ ಕಷ್ಟದ ಹಾಗೂ ಗೊಂದಲಮಯ ಸನ್ನಿವೇಶದಲ್ಲಿ ಹೂಡಿಕೆದಾರರು ತಮ್ಮ ಷೇರುಗಳನ್ನು ತರಾತುರಿಯಲ್ಲಿ ಮಾರಿ ನಷ್ಟ ಅನುಭವಿಸಬೇಕೇ ಅಥವಾ ಎಸ್ಐಪಿ (SIP) ಹೂಡಿಕೆಯನ್ನು ಹೆಚ್ಚಿಸಿ ಲಾಭ ಮಾಡಿಕೊಳ್ಳಬೇಕೇ? ಚಿನ್ನದ ಬೆಲೆ ನಿಜಕ್ಕೂ ರೂ. 1 ಲಕ್ಷದ ಗಡಿಗಿಂತ ಕೆಳಗೆ ಕುಸಿಯಲಿದೆಯೇ ಮತ್ತು ಒಟ್ಟು ಹೂಡಿಕೆಯಲ್ಲಿ ಚಿನ್ನ-ಬೆಳ್ಳಿಗೆ ಶೇ. 20ರಷ್ಟು ಪಾಲು ಏಕೆ ಮೀಸಲಿಡಬೇಕು? ಹಾಗೂ ದೀರ್ಘಾವಧಿಯಲ್ಲಿ ರಿಯಲ್ ಎಸ್ಟೇಟ್ಗಿಂತ ಷೇರು ಮಾರುಕಟ್ಟೆಯೇ ಹೆಚ್ಚು ಲಾಭದಾಯಕವೇ? ಎಂಬ ಹೂಡಿಕೆದಾರರ ಗೊಂದಲಕ್ಕೆ ಹಣಕಾಸು- ಹೂಡಿಕೆ ತಜ್ಞ ಬಿ.ವಿ. ರುದ್ರಮೂರ್ತಿ ( CA B.V. Rudramurthy ) ಅವರು 'ವಿಜಯವಾಣಿ ಡಿಜಿಟಲ್' ಸಂಪಾದಕ ಸಿದ್ದು ಕಾಳೋಜಿ ಅವರು ನಡೆಸಿದ ವಿಶೇಷ ಸಂದರ್ಶನದಲ್ಲಿ ಅತ್ಯಂತ ಮಹತ್ವದ ಹಾಗೂ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.