ವಾಣಿಜ್ಯ

ಎಸ್​ಬಿಐ ನಿಂದ ನೂತನ ವಿಭಾಗ ಸ್ಥಾಪನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಗ್ರಾಮೀಣ ಮತ್ತು ಅರೆಪಟ್ಟಣ ವ್ಯಾಪ್ತಿಯಲ್ಲಿ ಆರ್ಥಿಕ ಹಾಗೂ ಸಣ್ಣ ಮಾರುಕಟ್ಟೆ ಕ್ಷೇತ್ರದ ಪ್ರಗತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಇದೀಗ ‘ಫೈನಾನ್ಶಿಯಲ್ ಇನ್​ಕ್ಲುಷನ್ ಮತ್ತು ಮೈಕ್ರೋ ಮಾರ್ಕೆಟ್ ವರ್ಟಿಕಲ್’ ವಿಭಾಗ ಸ್ಥಾಪಿಸಿದೆ. ಇದರಡಿ ಬ್ಯಾಂಕ್ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹಾಗೂ ಸಣ್ಣ, ಅತಿಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡಲಿದೆ.

ಈ ಸಂಬಂಧ ಗ್ರಾಮೀಣ ಹಾಗೂ ಅರೆಪಟ್ಟಣ ಭಾಗದಲ್ಲಿ 8 ಸಾವಿಕ್ಕೂ ಅಧಿಕ ಶಾಖೆಗಳನ್ನು ಗುರುಸಿದೆ. ಇದರ ಮೂಲಕ ಕೃಷಿಕರು ಹಾಗೂ ಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ಒದಗಿಸಲಿದೆ. ಇದರೊಂದಿಗೆ ಸೇವಾ ಗುಣಮಟ್ಟ ಹೆಚ್ಚಿಸಿ, 63 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ಸೇವೆ ನೀಡುವ ಮೂಲಕ ಗ್ರಾಮೀಣ, ಅರೆ ಪಟ್ಟಣ, ಮೆಟ್ರೋ ವಲಯದಲ್ಲಿ ಸೇವೆಯನ್ನು ಉತ್ತಮ ಪರಿಸುವುದಕ್ಕೆ ಒತ್ತು ನೀಡಿದೆ.

ದೇಶದ ನಾಗರಿಕರ ಜೊತೆಗೆ ನಾವಿದ್ದೇವೆ ಎಂಬುದನ್ನು ತಿಳಿಸುವ ದಿನ ಇದಾಗಿದೆ. ಈ ನೂತನ ವಿಭಾಗದ ಮುಖ್ಯ ಉದ್ದೇಶ ವಿವಿಧ ಉದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಗಮನಹರಿಸುವುದು ಹಾಗೂ ಶಾಖೆಗಳ ಹಂತದಲ್ಲಿ ಗ್ರಾಹಕರ ಜೊತೆಗೆ ಸಂವಹನ ಇನ್ನಷ್ಟು ಉತ್ತಮಪಡಿಸುವುದಾಗಿದೆ. ಇದು ಎಸ್​ಬಿಐನ ಬಹುಮುಖ್ಯ ಕಾರ್ಯಕ್ರಮವಾಗಿದೆ.

ಇದು ಕೃಷಿ ಚಟುವಟಿಕೆಗಳು ಹಾಗೂ ಉದ್ಯಮಗಳನ್ನು ಸುಲಲಿತವಾಗಿ ನಡೆಸಲು ಸಹಕಾರಿಯಾಗಿದೆ ಎಂದು ಎಸ್​ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್-19 ಪಿಡುಗಿನ ಈ ಸಂದರ್ಭದಲ್ಲೂ ಎಸ್​ಬಿಐ ಹಾಲಿ ಎಸ್​ಎಂಇ ಸಾಲಗಾರರಿಗೆ ಪರಿಹಾರ ಕ್ರಮಗಳನ್ನು ಒದಗಿಸಲು ಒತ್ತು ನೀಡಿದೆ. ಸಿಸಿಇಸಿಎಲ್ (ಕಾಮನ್ ಕೋವಿಡ್ -19 ಎಮರ್ಜೆನ್ಸಿ ಕ್ರೆಡಿಟ್ ಲೈನ್) ಮೂಲಕ ಶೇ. 10 ಕಾರ್ಯನಿರತ ಬಂಡವಾಳ ಇರುವಂತೆ ನೋಡಿಕೊಳ್ಳುವುದು ಹಾಗೂ ಅದರ ಕುರಿತು ನಿಶ್ಚಿತ ಸಾಲದ ಅವಧಿ ವಿಸ್ತರಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.