ವಾಣಿಜ್ಯ

ಹೂಡಿಕೆ ಮಾಡುವಾಗ ನಾಮಿನಿ ಕಡೆಗಣಿಸಬೇಡಿ..!

kumarvrl

ನಮ್ಮ ತಂದೆ ಕೆಲ ತಿಂಗಳ ಹಿಂದೆ ನಿಧನರಾದರು. ಅವರು ಬ್ಯಾಂಕ್ ಅಕೌಂಟ್ ಸೇರಿ ಅನೇಕ ಚರಾಸ್ತಿಗಳಿಗೆ ( (movable assets)  ನಾಮಿನಿ (ನಾಮನಿರ್ದೇಶನ) ಮಾಡಿರಲಿಲ್ಲ. ಬ್ಯಾಂಕ್ ಅಕೌಂಟ್​ನಲ್ಲಿ ಸ್ವಲ್ಪ ಹೆಚ್ಚಿಗೆ ಹಣವಿದ್ದ ಕಾರಣ ಅದನ್ನು ಹಿಂಪಡೆಯಲು ನಾವು ಸಾಕಷ್ಟು ಕಷ್ಟಪಟ್ಟೆವು. ಬ್ಯಾಂಕ್​ನವರು ಕೇಳಿದ ದಾಖಲೆಗಳನ್ನು ಒದಗಿಸಿದ ನಂತರ ಹಣ ಪಡೆಯಲು ಸಾಧ್ಯವಾಯಿತು. ನಾವು ಯಾವೆಲ್ಲಾ ದಾಖಲೆಗಳಿಗೆ ನಾಮಿನಿ ಮಾಡಬೇಕು ವಿವರವಾಗಿ ತಿಳಿಸಿ. ಇದರಿಂದ ಮುಂದೆ ನಾವು ಮಾಡುವ ತಪ್ಪನ್ನಾದರೂ ತಡೆಯಬಹುದು.

| ಹೆಸರು ಊರು ಬೇಡ

ಬಹಳ ಜನರಿಗೆ ಅನುಕೂಲವಾಗುವ ಪ್ರಶ್ನೆ ಕೇಳಿದ್ದೀರಿ. ಸ್ಥಿರಾಸ್ತಿಯ ವಿಚಾರದಲ್ಲಿ ವಿಲ್ (ಉಯಿಲು) ಬರೆಯುವ ಹಾಗೆ ಚರಾಸ್ತಿಯ ವಿಚಾರದಲ್ಲಿ ನಾಮಿನಿ (ನಾಮಿನೇಷನ್) ಹೆಸರು ಸೂಚಿಸುವುದು ಬಹಳ ಮುಖ್ಯವಾದ ಜವಾಬ್ದಾರಿ. ವ್ಯಕ್ತಿಯ ಮರಣದ ನಂತರ, ಆತನ ಸಂಪತ್ತು ವಾರಸುದಾರರಿಗೆ ಅಡೆತಡೆಯಿಲ್ಲದೆ ವರ್ಗಾವಣೆಯಾಗಬೇಕು ಎಂದಾದಲ್ಲಿ ನಾಮಿನಿ ಸೂಚಿಸುವುದು ಅತ್ಯವಶ್ಯಕ, ಮ್ಯೂಚ್ಯುವಲ್ ಫಂಡ್, ಷೇರುಗಳು, ಬ್ಯಾಂಕ್ ಲಾಕರುಗಳು, ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಠೇವಣಿಗಳು. ಇನ್ಶೂರೆನ್ಸ್ ಪಾಲಿಸಿಗಳು, ಪಿಎಫ್ ಹಾಗೂ ನಿವೃತ್ತಿಯಿಂದ ಬರುವ ಹಣ, ಪಿಪಿಎಫ್, ಎನ್ ಪಿಎಸ್ ಮುಂತಾದ ಹೂಡಿಕೆಗಳಲ್ಲಿ ನಾಮಿನಿ ಸೂಟಿಸಬೇಕು. ಒಂದೊಮ್ಮೆ ನೀವು ನಾಮಿನಿ ಹೆಸರು ನಮೂದಿಸಿಲ್ಲ ಎಂದಾದಲ್ಲಿ ಕೂಡಲೇ ಆ ಕೆಲಸ ಮಾಡಿ. ಇಲ್ಲವಾದಲ್ಲಿ ನಾಮ ನಿರ್ದೇಶನವಿಲ್ಲದ ಸಂದರ್ಭದಲ್ಲಿ ವಾರಸುದಾರರು ಹಣ ಪಡೆಯಲು ಪರದಾಡಬೇಕಾಗುತ್ತದೆ.

ನಾನು ಮತ್ತು ನನ್ನ ಪತ್ನಿ ಸುಮಾರು ಹತ್ತು ವರ್ಷದ ಕೆಳಗೆ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿದ್ದೇವೆ. ಈಗ (ಬಿಡಿಸಿಕೊಳ್ಳುವುದು) ಮಾಡಿಕೊಳ್ಳೋಣವೆಂದು ತೀರ್ವನಿಸಿದ್ದೇವೆ. ಆದರೆ ಹೂಡಿಕೆಯ ವಿವರಗಳು ಕಳೆದುಹೋಗಿವೆ. ಅಂತರ್ಜಾಲದಲ್ಲಿ ಹುಡುಕೋಣವೆಂದರೆ ಟಜಜಿಠಜಜ್ಞಿಜ ಭಯ. ಆದ್ದರಿಂದ ಈ ಬಗ್ಗೆ ಯಾವ ವೆಬ್ ಸೈಟ್, ಆಪ್ ಸಹಾಯ ಪಡೆಯಬಹುದು ಮತ್ತು ಹೇಗೆ ಮುಂದುವರೆಯಬೇಕು ಎಂಬ ಬಗ್ಗೆ ದಯವಿಟ್ಟು ವಿವರವಾದ ಮಾಹಿತಿ ಕೊಡಿ.

| ಶಿವಸ್ವಾಮಿ ಬೆಂಗಳೂರು

ಶಿವಸ್ವಾಮಿ ಅವರೆ ಮ್ಯೂಚುವಲ್ ಫಂಡ್ ನಲ್ಲಿ ಈ ಹಿಂದೆ ಮಾಡಿರುವ ಹೂಡಿಕೆಗಳ ವಿವರ ನಿಮ್ಮ ಬಳಿ ಇಲ್ಲದಿದ್ದಾಗ ಈ ಕೆಳಕಂಡ ರೀತಿಯಲ್ಲಿ ಅವನ್ನು ಪಡೆದುಕೊಳ್ಳಲು ಅವಕಾಶವಿದೆ.

ಆಕ್ಸಿಸ್ ಅಸೆಟ್ ಮ್ಯಾನೇಜ್​ವೆುಂಟ್ ಕಂಪನಿ, ಡಿಎಸ್ ಪಿ ಇನ್ವೆಸ್ಟೆ್ಮಂಟ್ ಮ್ಯಾನೇಜರ್ಸ್ ಪ್ರೖೆವೇಟ್ ಲಿಮಿಟೆಡ್ ಹೀಗೆ ಹತ್ತಾರು ಅಸೆಟ್ ಮ್ಯಾನೇಜ್​ವೆುಂಟ್ ಕಂಪನಿಗಳಿವೆ. ನೀವು ಯಾವ ಅಸೆಟ್ ಮ್ಯಾನೇಜ್​ವೆುಂಟ್ ಕಂಪನಿ ಅಡಿಯಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ತಿಳಿದುಕೊಂಡು ನೀವು ಅಸೆಟ್ ಮ್ಯಾನೇಜ್​ವೆುಂಟ್ ಕಂಪನಿ ಕಚೇರಿಗೆ ಹೋಗಿ ಪ್ಯಾನ್ ಕಾರ್ಡ್ ಮಾಹಿತಿ ಒದಗಿಸಿದರೆ ನಿಮ್ಮ ಹೂಡಿಕೆ ವಿವರ ಲಭಿಸುತ್ತದೆ. ಒಂದೊಮ್ಮೆ ನೀವು ಎಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಗೊತ್ತಿಲ್ಲದಿದ್ದರೂ ಅಸೆಟ್ ಮ್ಯಾನೇಜ್​ವೆುಂಟ್​ಕಂಪನಿ ನೆರವು ಪಡೆದು ಪ್ಯಾನ್ ವಿವರ ನೀಡಿ ಅಗತ್ಯ ದಾಖಲೆಗಳನ್ನು ಪಡೆಯಲು ಸಾಧ್ಯವಿದೆ.

ನಿಮಗೆ ಪ್ಯಾನ್ ಕಾರ್ಡ್ ಮತ್ತು ಇ ಮೇಲ್ ವಿಳಾಸ ಗೊತ್ತಿದ್ದರೆ ಕ್ಯಾಮ್ (ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್ ಮೆಂಟ್) ಮೂಲಕ ಪತ್ತೆಹಚ್ಚಲು ಸಾಧ್ಯವಿದೆ. ಆನ್ ಲೈನ್ ಮೂಲಕ ಚೆಕ್ ಮಾಡಲು ಈ ಲಿಂಕ್ ಬಳಸಬಹುದು https://mycams.camsonline.com

ನಾನು ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆದಿದ್ದೇನೆ. ಈ ಖಾತೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಬರುವ ಬಡ್ಡಿಗೆ ತೆರಿಗೆ ಪಾವತಿಸಬೇಕೆ?

| ನಟರಾಜ್ ತುಮಕೂರು

ನಟರಾಜ್ ಅವರೆ ಸುಕನ್ಯಾ ಸಮೃದ್ಧಿ ಖಾತೆಯ ಮೇಲೆ ಬರುವ ಬಡ್ಡಿ ಹಣಕ್ಕೆ ತೆರಿಗೆ ಪಾವತಿಸಬೇಕಿಲ್ಲ. ತೆರಿಗೆಯ ಚಿಂತೆ ಬಿಡಿ ಮಗಳ ಭವಿಷ್ಯಕ್ಕಾಗಿ ಈ ಹೂಡಿಕೆ ಮುಂದುವರಿಸಿ.

ನನ್ನ ತಮ್ಮ 2017-18 ನೇ ಸಾಲಿನಲ್ಲಿ ರೂ. 1.50 ಲಕ್ಷ ಮೌಲ್ಯದ 5 ವರ್ಷದ ಅವಧಿಯ ರಾಷ್ಟ್ರೀಯ ಉಳಿತಾಯ ಪತ್ರ (ಎನ್ ಎಸ್ ಸಿ) ಪಡೆದು ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆದುಕೊಂಡಿದ್ದ. ನನ್ನ ಪ್ರಶ್ನೆ ಏನೆಂದರೆ ಆ ಹೂಡಿಕೆಯ ಮೇಲೆ ಮುಂಬರುವ ವರ್ಷಗಳಲ್ಲಿ ಅಂದರೆ 2018-19, 2019-20 ರಲ್ಲೂ ವಿನಾಯಿತಿ ಪಡೆಯಬಹುದಾ?

| ಸುದೇವ್ ಬೆಂಗಳೂರು

ಸುದೇವ್ ಅವರೆ ನಿಮ್ಮ ಸಹೋದರ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ರೂ. 1.50 ಲಕ್ಷ ಹೂಡಿಕೆ ಮಾಡಿ ಈಗಾಗಲೇ ಅದರ ಮೇಲೆ ತೆರಿಗೆ ವಿನಾಯಿತಿ ಪಡೆದಿದ್ದಾರೆ. ಹಾಗಾಗಿ ಮುಂಬರುವ ವರ್ಷಗಳಲ್ಲಿ ಆ ತೆರಿಗೆ ವಿನಾಯಿತಿ ಅನ್ವಯಿಸುವುದಿಲ್ಲ. ನಿಮ್ಮ ಸಹೋದರ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಬೇರೆ ಹೂಡಿಕೆಗಳನ್ನು ಮಾಡಿ ಮತ್ತೆ ವಿನಾಯಿತಿ ಪಡೆಯಬೇಕಾಗುತ್ತದೆ.

ಮನೆ ನಿರ್ವಣಕ್ಕೆ ಸಾಲ ಪಡೆಯಲು ಸಾಮಾನ್ಯವಾಗಿ ಯಾವ ದಾಖಲೆಗಳನ್ನು ಕೇಳುತ್ತಾರೆ. ಅಡೆ ತಡೆಯಿಲ್ಲದೆ ಸಾಲ ಮಂಜೂರಾಗಬೇಕಾದರೆ ಬೇಕಿರುವ ದಾಖಲೆಗಳೇನು?

| ಅಭಿಷೇಕ್ ರಾಮನಗರ

ಅಭಿಷೇಕ್ ಅವರೆ ನಿವೇಶನ ಖರೀದಿಯ ಮೂಲ ಪತ್ರ, ಖಾತಾ ನಕಲು, ಇತ್ತೀಚೆಗೆ ಪಾವತಿಸಿರುವ ಆಸ್ತಿ ತೆರಿಗೆಯ ರಶೀದಿ, ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಎನ್​ಕಂಬರೆನ್ಸ್ ಸರ್ಟಿಫಿಕೆಟ್, ಗೃಹ ನಿರ್ವಣಕ್ಕೆ ಬೇಕಾಗುವ ಅಂದಾಜು ಎಸ್ಟಿಮೇಟ್,ಮನೆ ನಿರ್ವಣಕ್ಕೆ ಅಂಗೀಕೃತ ಪತ್ರ, ಬ್ಯಾಂಕಿನ ವಕೀಲರಿಂದ ಕಾನೂನು ಅಭಿಪ್ರಾಯ ಸೇರಿ ಮುಂತಾದ ದಾಖಲೆಗಳು ಬೇಕಾಗುತ್ತವೆ. ಇದೆಲ್ಲದರ ಜತೆ ನಿಮ್ಮ ಮಾಸಿಕ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಕೂಡ ಸಾಲ ಪಡೆಯಲು ಮುಖ್ಯವಾಗುತ್ತವೆ.