ವಾಣಿಜ್ಯ

ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಇಲ್ಲಿದೆ ವ್ಯಾಪಾರ-ವಹಿವಾಟು ಅವಕಾಶ!

Webdesk - Ravikanth

ಬೆಂಗಳೂರು: ಕರೊನಾ-ಲಾಕ್​ಡೌನ್​ ಕಾರಣಕ್ಕೆ ಎಷ್ಟೋ ಜನ ಉದ್ಯೋಗ-ಉದ್ಯಮವನ್ನು ಕಳೆದುಕೊಂಡಿದ್ದಾರೆ. ಹೊಸದಾಗಿ ಏನಾದರೂ ಮಾಡೋಣವೆಂದರೂ ಸರಿಯಾದ ಸ್ಥಳಾವಕಾಶ ಸಿಗುತ್ತಿಲ್ಲ. ಸುಲಭದಲ್ಲಿ ಜನ ಸೇರುವ ಸ್ಥಳವೇನಾದರೂ ಸಿಕ್ಕರೆ ಯಾವುದಾದರೂ ವ್ಯಾಪಾರ ಮಾಡಬಹುದು ಎಂಬ ಯೋಚನೆಯಲ್ಲಿ ಇರುವವರಿಗೆ ಇದೊಂದು ಸುವರ್ಣಾವಕಾಶ.

ವ್ಯಾಪಾರದ ಯೋಜನೆ-ಯೋಚನೆಯಲ್ಲಿ ಇರುವವರಿಗೆ ರಾಜ್ಯದ 17 ಜಿಲ್ಲೆಗಳಲ್ಲಿ ಅವಕಾಶಗಳಿವೆ. ಇಂಥದ್ದೊಂದು ಅವಕಾಶವನ್ನು ಕೆಎಸ್​ಆರ್​ಟಿಸಿ ಒದಗಿಸುತ್ತಿದೆ. 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ 17 ಜಿಲ್ಲೆಗಳ ಜಿಲ್ಲಾ ಕೇಂದ್ರ, ತಾಲೂಕು ಮತ್ತು ಹೋಬಳಿಗಳ ಬಸ್​ ನಿಲ್ದಾಣಗಳಲ್ಲಿ ವಾಣಿಜ್ಯ ವ್ಯವಹಾರಕ್ಕೆ ಪರವಾನಗಿ ಆಧಾರದಲ್ಲಿ ಮಳಿಗೆಗಳು ಲಭ್ಯ ಇರುತ್ತವೆ. ಆಸಕ್ತರು ಮಳಿಗೆಗಳ ಪರವಾನಗಿ ಮೊತ್ತ ಹಾಗೂ ಇತರ ವಿವರಗಳಿಗೆ http://ksrtc.karnataka.gov.in ವೀಕ್ಷಿಸಬಹುದು' ಎಂದು ಕೆಎಸ್​ಆರ್​ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.