ಬೆಂಗಳೂರು: ಶ್ರೀಮಂತರಿಗೆ ಮಾತ್ರ ಹವಾನಿಯಂತ್ರಕಗಳು (ಎ.ಸಿ.) ಸೀಮಿತವಾಗಿವೆ ಎಂಬ ಮಾತನ್ನು ಸುಳ್ಳು ಮಾಡಿರುವ ಬ್ಲೂಸ್ಟಾರ್ ಕಂಪನಿಯು ಥ್ರೀ ಸ್ಟಾರ್ ಇರ್ನÌರ್ ವಿಭಜಿತ ಪ್ರೀಮಿಯಂ ಎ.ಸಿ.ಯನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದೆ.
ಪ್ರೀಮಿಯಂ ಹವಾ ನಿಯಂತ್ರಕಗಳ ಉತ್ಪಾದನೆ ಯಲ್ಲಿ ಮುಂಚೂಣಿಯಲ್ಲಿರುವ ಬ್ಲೂಸ್ಟಾರ್ ಎ.ಸಿ. ಭಾರತದ ಪ್ರಮುಖ ಹವಾನಿಯಂತ್ರಣ ಬ್ರಾ್ಯಂಡ್ ಆಗಿದೆ. ಬಗೆ ಬಗೆಯ ವಿನ್ಯಾಸಗಳ ಮೂಲಕ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಈಗ ಮನೆಗಳಲ್ಲಿನ ಬಳಕೆಗಾಗಿ ಅತ್ಯುತ್ತಮ ದರ್ಜೆಯ ಎ.ಸಿ.ಗಳನ್ನು ಬಿಡುಗಡೆ ಮಾಡಿದೆ. 1 ಟನ್ ಥ್ರೀ-ಸ್ಟಾರ್ ಇರ್ನÌರ್ ವಿಭಜಿತ ಎ.ಸಿ.ಗೆ 31,990 ರೂ. ಹಾಗೂ 1.5 ಟನ್ ಥ್ರೀ-ಸ್ಟಾರ್ ಇರ್ನÌರ್ ವಿಭಜಿತ ಎ.ಸಿ. 37,990 ರೂ.ಗೆ ಸಿಗಲಿವೆ. ಹೊಸ ಶ್ರೇಣಿಯ ಎ.ಸಿ.ಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ವಿಶಿಷ್ಟವಾಗಿ ವಿನ್ಯಾಸಗೊಂಡಿವೆ. ಸಂಪೂರ್ಣ ಪರಿಸರಸ್ನೇಹಿ ಶೀತಲೀಕರಣ ವ್ಯವಸ್ಥೆ ಹೊಂದಿವೆ. 160ರಿಂದ 270 ವೋಲ್ಟೇಜ್ನ ಸ್ಟೆಬಿಲೈಜರ್ ಅಂತರ್ಗತಗೊಳಿಸಲಾಗಿದೆ.
ಶೂನ್ಯ ಬಡ್ಡಿದರ: ಹಲವು ಬ್ಯಾಂಕ್ಗಳ ಜತೆ ಬ್ಲೂಸ್ಟಾರ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಎ.ಸಿ.ಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಮಾನ ಕಂತುಗಳ (ಇಎಂಐ) ಸಾಲ ಸೌಲಭ್ಯ ಒದಗಿಸುತ್ತಿವೆ. ಜತೆಗೆ ಕ್ಯಾಶ್ಬ್ಯಾಕ್ ಕೊಡುಗೆ ಕೂಡ ಲಭ್ಯವಿದೆ. ಎಲ್ಲ ಬ್ಲೂಸ್ಟಾರ್ ಎ.ಸಿ.ಗಳಿಗೆ 1 ವರ್ಷ ಹಾಗೂ ಕಂಪ್ರೆಸರ್ಗೆ 10 ವರ್ಷಗಳ ವಾರಂಟಿ ಇದೆ. ಅಗತ್ಯವೆನಿಸಿದಲ್ಲಿ 2ನೇ ವರ್ಷದಿಂದ 5ರಿಂದ 10 ವರ್ಷಗಳವರೆಗೆ ವಿಸõತ ವಾರಂಟಿ ಪಡೆಯಬಹುದು.
ಗ್ರಾಹಕರ ನಿರೀಕ್ಷೆ ಪೂರೈಕೆ: ಬ್ಲೂಸ್ಟಾರ್ ಥ್ರೀ-ಸ್ಟಾರ್ ಇರ್ನÌರ್ ವಿಭಜಿತ ಎ.ಸಿ.ಗಳು ಮನೆ ಬಳಕೆಗೆ ಯೋಗ್ಯವಾಗಿವೆ. ಗ್ರಾಹಕರ ನಿರೀಕ್ಷೆ ಈಡೇರಿಸುವ ಸಾಮರ್ಥ್ಯ ಇದಕ್ಕಿದೆ ಎಂದು ಬ್ಲೂಸ್ಟಾರ್ ಲಿ.ನ ಉತ್ಪನ್ನ, ವ್ಯವಹಾರ, ಮಾರಾಟ ಮತ್ತು ಮಾರುಕಟ್ಟೆ ಅಧ್ಯಕ್ಷ ಮುಕುಂದನ್ ಮೆನನ್ ತಿಳಿಸಿದ್ದಾರೆ.