- ಇಂದು 10 ಸಾವಿರ ರೂ. ವಸ್ತುವಿಗೂ ಲೋನ್ ಮೊರೆ ಹೋಗ್ತಾರೆ ನಮ್ಮ ಜನ
- ಕಂತಿನ ಅರಿವು ಇಲ್ಲದೆಯೇ ಲೋನ್ಗೆ ಅರ್ಜಿ ಹಾಕುವ ಜನರೇ ಹೆಚ್ಚು
- ಗೃಹ ಸಾಲದ ಮೊದಲ ಕಂತು ಕಟ್ಟದೆ ಹೋದರೆ ಏನೆಲ್ಲ ಆಗುತ್ತೆ?
ನವದೆಹಲಿ: ಇದು ಡಿಜಿಟಲ್ ಯುಗ ಅಂದಮೇಲೆ ಆಫ್ಲೈನ್ ಜೊತೆಗೆ ಆನ್ಲೈನ್ ಲೋನ್ಗಳು ಇಲ್ಲದೇ ಇರಲು ಸಾಧ್ಯವೇ? ಖಂಡಿತ ಇಲ್ಲ. ಇಂದು ನಮ್ಮ ಜನರ ಮನಸ್ಥಿತಿ ಹೇಗಾಗಿದೆ ಎಂದರೆ, 10 ಸಾವಿರ ರೂ. ಮೊಬೈಲ್ನಿಂದ ಹಿಡಿದು ಬೈಕ್, ಕಾರು, ಗೃಹಪಯೋಗಿ ವಸ್ತುಗಳು ಸೇರಿದಂತೆ ಸಣ್ಣಪುಟ್ಟ ವಸ್ತುಗಳ ಖರೀದಿಗೂ ಸಾಲದ ಮೊರೆ ಹೋಗುತ್ತಾರೆ. ಕಂತು ಕಟ್ಟಲು ನಮ್ಮಿಂದ ಆಗುತ್ತೋ, ಇಲ್ಲವೋ ಅಥವಾ ಎಷ್ಟು ಬಡ್ಡಿ ಬೀಳಲಿದೆ ಎಂಬ ಪೂರ್ವ ಲೆಕ್ಕಾಚಾರವನ್ನೂ ಹಾಕಿಕೊಳ್ಳದೆ ಮೊದಲೇ ಲೋನ್ಗೆ ಅರ್ಜಿ ಸಲ್ಲಿಸಿರುತ್ತಾರೆ.
ಈಗ ಕನಿಷ್ಠ ಸಿಬಿಲ್ ಅಂಕಿಯಿದ್ದರೆ, ಯಾವ ಬ್ಯಾಂಕ್ ಕೂಡ ಲೋನ್ ಕೊಡಲು ಮುಂದಾಗುತ್ತೆ. ಆದ್ರೆ, ಸಾಲ ಪಡೆಯುವವರ ಹೆಸರಿನಲ್ಲಿ ಒಂದೇ ಒಂದು ಡಿಮೆರಿಟ್ ಅಥವಾ ಸಿಬಿಲ್ ಅಂಕಿ ಕುಸಿದಿರಬಾರದು. ಹಾಗೇನಾದರೂ ಆಗಿದ್ದರೆ, ಸೀದಾ ಲೋನ್ಗಳು ರಿಜೆಕ್ಟ್ ಆಗುತ್ತವೆ. ಇದು ಹೀಗಾದರೆ, ಅದೇ ಗೃಹಸಾಲಗಳ ಮೇಲೂ ಇದೇ ರೀತಿಯ ಲೆಕ್ಕಾಚಾರ ಮತ್ತು ಪರಿಣಾಮಗಳು ಅನ್ವಯ ಆಗುತ್ತವೆ. ಹೌಸಿಂಗ್ ಲೋನ್ನಲ್ಲಿ ಒಂದು ಕಂತು ಮಿಸ್ ಆದರೆ ಏನೆಲ್ಲ ಪರಿಣಾಮ? ಎಂಬ ಪ್ರಶ್ನೆ ಕೆಲವರಲ್ಲಿದೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ಯಾವುದೇ ವಸ್ತು ಅಥವಾ ಹೋಮ್ ಲೋನ್ ಹಾಕಿಸಿಕೊಂಡರೂ ಅದರ ತಿಂಗಳ ಕಂತನ್ನು ಮಿಸ್ ಮಾಡಲೇಬಾರದು. ಅಕಸ್ಮಾತ್, ಕೊಟ್ಟಿರುವ ಡೆಡ್ಲೈನ್ ಮೀರಿ ಏನಾದರೂ ತಪ್ಪಿಸಿದ್ದೇ ಆದಲ್ಲಿ, ನಿಮ್ಮ ಈಗಿರುವ ಸಿಬಿಲ್ ಕೆಲವೇ ವಾರಗಳಲ್ಲಿ ಕುಸಿದು ಹೋಗುತ್ತೆ. ಅದೇ ಒಬ್ಬ ವ್ಯಕ್ತಿ, ತೆಗೆದುಕೊಂಡ ಗೃಹಸಾಲದ ಕಂತನ್ನು ನಿಗದಿತ ದಿನಾಂಕಕ್ಕೆ ಮಿಸ್ ಮಾಡಿದರೆ, ತಕ್ಷಣವೇ ಆ ಬ್ಯಾಂಕ್ ಮೊದಲು ಲೋನ್ ಯಾರ ಹೆಸರಲ್ಲಿದೆ ಅವರ ಖಾತೆಯನ್ನು 'ಓವರ್‌ಡ್ಯೂ' ಎಂದು ಗುರುತಿಸುತ್ತದೆ.
ಇದಾದ ಬಳಿಕ ಆಟೋಮೆಟೆಡ್ ರಿಮೈಂಡರ್ಗಳು ಸೆಟ್ ಆಗುತ್ತವೆ. ಇದರೊಟ್ಟಿಗೆ ಆಯಾ ಬ್ಯಾಂಕ್ ಉದ್ಯೋಗಿಗಳಿಂದ ಅಲರ್ಟ್ ಸಂದೇಶಗಳು ಮತ್ತು ದೂರವಾಣಿ ಕರೆಗಳು ಬರುತ್ತವೆ. ಸಾಮಾನ್ಯವಾಗಿ, ಮಿಸ್ ಆದ ಪೇಮೆಂಟ್ ಅನ್ನು ಮೀರಿದ ಅವಧಿ ಅಂದರೆ 30 ದಿನಗಳನ್ನು ದಾಟಿದ ನಂತರ ಕ್ರೆಡಿಟ್ ಬ್ಯೂರೋಗಳಿಗೆ ವರದಿ ಸಲ್ಲಿಸಲಾಗುತ್ತದೆ. ಈ ಕ್ರೆಡಿಟ್ ರಿಪೋರ್ಟ್ ಆಗಿದ್ದೇ ತಡ ನಿಮ್ಮ ಪೇಮೆಂಟ್ಗಳ ಆಧಾರದ ಮೇಲೆ ಸಿಬಿಲ್ ಸ್ಕೋರ್ ಬದಲಾಗಲು ಶುರುವಾಗುತ್ತೆ. ಒಂದು ಬಾರಿ ಕುಸಿದರೆ, ಅದನ್ನು ಪುನಃ ಏರಿಸಲು ಒಂದಷ್ಟು ತಿಂಗಳೇ ಬೇಕು,(ಏಜೆನ್ಸೀಸ್).