Bank July Holidays 
ಬ್ಯಾಂಕಿಂಗ್

ಜುಲೈ 2026; ದೇಶದಾದ್ಯಂತ 12 ದಿನ ಬ್ಯಾಂಕ್​ಗಳಿಗೆ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಇರಲ್ಲ?..Bank Holidays

ಮಮತಾ

ಪ್ರಮುಖ ಮುಖ್ಯಾಂಶಗಳು

  • ಜುಲೈನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ವಿಶೇಷವಾಗಿ ಯಾವುದೇ ರಜಾ ದಿನಗಳಿಲ್ಲ
  • ಬ್ಯಾಂಕ್​ ರಜೆ ಘೋಷಣೆಯಾಗಿದ್ದರೂ ನೆಟ್​ ಬ್ಯಾಂಕಿಂಗ್​​​ ಮೂಲಕ ಕಾರ್ಯಾಚರಣೆ ಲಭ್ಯ
  • ಪ್ರಾದೇಶಿಕ ಹಬ್ಬದ ಕಾರಣ ಕೆಲವು ರಾಜ್ಯದಲ್ಲಿರುವ ಬ್ಯಾಂಕ್​ಗೆ ರಜೆ ಘೋಷಣೆ
Holidays:
2026 ಜುಲೈ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸಾಮಾನ್ಯವಾಗಿ ಜನರಿಗೆ ನಿತ್ಯವು ಬ್ಯಾಂಕ್​ನಲ್ಲಿ ಏನಾದರೂ ಕೆಲಸ ಇದ್ದೇ ಇರುತ್ತದೆ. ಅದರಂತೆ ಜುಲೈನಲ್ಲಿ ಯಾವುದೇ ಹಬ್ಬವಿಲ್ಲ. ಆದರೆ, ಬ್ಯಾಂಕ್​ಗೆ ಸರ್ಕಾರಿ ರಜೆ ಇರೋಲ್ಲ ಅಂತೇನಿಲ್ಲ. 2026ರ ಜುಲೈನಲ್ಲಿ ಬ್ಯಾಂಕ್​ಗೆ ಒಟ್ಟು 13 ರಜಾದಿನಗಳಿದೆ.

2026 ಜುಲೈನಲ್ಲಿ ಕರ್ನಾಟಕದ ಬ್ಯಾಂಕ್​ ರಜಾ ದಿನ

ಕರ್ನಾಟಕದಲ್ಲಿ ಯಾವುದೇ ಹಬ್ಬಗಳಿಲ್ಲ. ಜೊತೆಗೆ ಸಾಂಸ್ಕೃತಿಕ ಆಚರಣೆಗಳೂ ಇಲ್ಲ. ಆದರೂ ಈ ತಿಂಗಳಲ್ಲಿ ಒಟ್ಟು ಆರು ದಿನ ಬ್ಯಾಂಕ್​ ಕಾರ್ಯಾಚರಣೆ ಇರೋದಿಲ್ಲ. ಅವು ಶನಿವಾರ ಮತ್ತು ಭಾನುವಾರದ ರೆಗ್ಯೂಲರ್​ ರಜಾದಿನವಾಗಿದೆ ಎನ್ನಲಾಗಿದೆ.

  • ಜುಲೈ 5: ಭಾನುವಾರದ ರಜೆ
  • ಜುಲೈ 11: ಎರಡನೇ ಶನಿವಾರದ ರಜೆ
  • ಜುಲೈ 12: ಭಾನುವಾರದ ರಜೆ
  • ಜುಲೈ 19: ಭಾನುವಾರದ ರಜೆ
  • ಜುಲೈ 25: ನಾಲ್ಕನೇ ಶನಿವಾರದ ರಜೆ
  • ಜುಲೈ 26: ಭಾನುವಾರದ ರಜೆ

ದೇಶಾದ್ಯಂತ ಬ್ಯಾಂಕ್​ಗಳಿಗೆ ಯಾವ್ಯಾವ ದಿನ ರಜೆ ಇದೆ?

  • ಜುಲೈ 5 ಭಾನುವಾರದ ರಜೆ
  • ಜುಲೈ 6 ಬ್ಯಾಂಕ್​ ರಜೆ(ಮಿಜೋ ಹ್ಮೆಚೆ ಇನ್ಸುಯಿಖಾಮ್ ಪೌಲ್ ದಿನವಾದ ಕಾರಣ ಮಿಜೋರಾಂನಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.)
  • ಜುಲೈ 9 (ಬೆಹ್ ದೀಂಕ್ಲಾಮ್ ಹಿನ್ನೆಲೆ ಮೇಘಾಲಯದಲ್ಲಿ ಬ್ಯಾಂಕ್​ ರಜೆ ಇದರಲಿದೆ. ಮೇಘಾಲಯದಲ್ಲಿ ಬುಡಕಟ್ಟು ಜನಾಂಗದವರು ಆಚರಿಸುವ ಅತ್ಯಂತ ಪ್ರಮುಖ ವಾರ್ಷಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಾಗಿದೆ)
  • ಜುಲೈ 11 ಎರಡನೇ ಶನಿವಾರ ಹಿನ್ನೆಲೆ ರಜೆ
  • ಜುಲೈ 12: ಭಾನುವಾರದ ರಜೆ
  • ಜುಲೈ 16(ರಥ ಯಾತ್ರೆ ಹರೇಲಾ ಹಬ್ಬಗಳಿರುವ ಹಿನ್ನೆಲೆ ಒಡಿಶಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬ್ಯಾಂಕ್​ ರಜೆ ಇರಲಿದೆ.)
  • ಜುಲೈ 17 (ತಿರೋಟ್ ಸಿಂಗ್ ಅವರ ಪುಣ್ಯತಿಥಿಯ ಸ್ಮರಣಾರ್ಥ ಮೇಘಾಲಯದಲ್ಲಿ ಬ್ಯಾಂಕ್​ ರಜೆ ಇರಲಿದೆ.)
  • ಜುಲೈ 18 (ಭಾರತದ ಸಾರನಾಥದಲ್ಲಿರುವ ಜಿಂಕೆ ಉದ್ಯಾನವನದಲ್ಲಿ ಭಗವಾನ್ ಬುದ್ಧ ತನ್ನ ಐದು ಶಿಷ್ಯರಿಗೆ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ದಿನದ ಸ್ಮರಣಾರ್ಥ ಆಚರಿಸಲಾಗುವ ಶುಭ ಬೌದ್ಧ ಹಬ್ಬ ಹಿನ್ನೆಲೆ ರಜೆ)
  • ಜುಲೈ 19 ಭಾನುವಾರ ರಜೆ
  • ಜುಲೈ 22 (ಖಾರ್ಚಿ ಪೂಜಾ ಹಬ್ಬಕ್ಕಾಗಿ ತ್ರಿಪುರದಲ್ಲಿ ಬ್ಯಾಂಕ್​ ಗಳಿಗೆ ರಜೆ ಇರಲಿದೆ).
  • ಜುಲೈ 25 ನಾಲ್ಕನೇ ಶನಿವಾರ ಹಿನ್ನೆಲೆ ರಜೆ
  • ಜುಲೈ 26 ಭಾನುವಾರದ ಹಿನ್ನೆಲೆ ರಜೆ
ಇತ್ತೀಚೆಗೆ ಬ್ಯಾಂಕ್​ ಚಟುವಟಿಕೆಯನ್ನು ಆನ್​ಲೈನ್​ ಮೂಲಕವೂ ನಡೆಸುವುದರಿಂದ ಅಷ್ಟಾಗಿ ಖಾತೆದಾರರ ಮೇಲೆ ಪರಿಣಾಮ ಬೀರೋದಿಲ್ಲ. ನಗದು ಬೇಕೆಂದರೆ ಹತ್ತಿರದಲ್ಲಿನ ಎಟಿಎಂಗಳಲ್ಲಿ ಹಣ ವಿತ್​ ಡ್ರಾ ಮಾಡಿಕೊಳ್ಳಬಹುದಾಗಿದೆ. ಅಥವಾ ಯುಪಿಐ ಪಾವತಿ ಮೂಲಕ ಹಣ ವಹಿವಾಟು ನಡೆಸಬಹುದಾಗಿದೆ. ಖುದ್ದಾಗಿ ಬ್ಯಾಂಕ್​ಗೆ ತೆರಳಿ ನಿಮ್ಮ ಕೆಲಸ ಮುಗಿಸಿಕೊಳ್ಳುವ ಅನಿವಾರ್ಯತೆ ಇದ್ದರೆ, ಬ್ಯಾಂಕ್​​ ರಜೆಯ ಹಿಂದಿನ ದಿನ ನಿಮ್ಮ ಕೆಲಸವನ್ನು ಮುಗಿಸಿಕೊಳ್ಳಲು ಸಮಯ ಸೆಟ್​ ಮಾಡಿಕೊಳ್ಳಿ.